ETV Bharat / city

ವೃಕ್ಷಕ್ಕೆ ಕೊಡಲಿ ಹಾಕುವವರೇ ಹುಷಾರ್​... ತುಮಕೂರಲ್ಲಿ ಆ್ಯಪ್ ಆಧಾರಿತ ಮರ ಗಣತಿ ಶುರು

author img

By

Published : Nov 16, 2019, 6:31 AM IST

Updated : Nov 16, 2019, 1:01 PM IST

Census of Trees in Tumkur

ದೇಶದ ಮಹತ್ವಕಾಂಕ್ಷೆ ಯೋಜನೆಯಾದ 100 ಸ್ಮಾರ್ಟ್​ ಸಿಟಿ ನಗರಗಳ ಪೈಕಿ ತುಮಕೂರು ಆಯ್ಕೆ ಆಗಿದ್ದು, ನಗರದ ಪ್ರತಿಯೊಂದು ಮಾಹಿತಿಯನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ನಗರದಲ್ಲಿ ಮರಗಳ ಗಣತಿಗೆ ಆ್ಯಪ್​ ಆಧಾರಿತ ತಂತ್ರಜ್ಞಾನ ಸೇವೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ತುಮಕೂರು: ದೇಶದ 100 ಸ್ಮಾರ್ಟ್ ಸಿಟಿಗಳಲ್ಲಿ ತುಮಕೂರು ಸ್ಥಾನ ಪಡೆದಿದ್ದು, ಇದರಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳಲು ಜಿಲ್ಲೆಯ ಅಧಿಕಾರಿಗಳು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಜಿಪಿಎಸ್​ ಆಧಾರಿತ ಮರ ಗಣತಿಗೆ ಚಾಲನೆ ಸಿಕ್ಕಿದೆ.

ಸಂಸದ ಬಸವರಾಜ್ ನೇತೃತ್ವದಲ್ಲಿ ದಿಶಾ ಸಮಿತಿಯು ಯೋಜನೆ ಹಾಗೂ ಕಾಮಗಾರಿಗಳ ಅನುಷ್ಠಾನಕ್ಕೆ ಹೆಚ್ಚಿನ ಆಸಕ್ತಿ ವಹಿಸಿದೆ. ಮರಗಳ ಗಣತಿಗೆ ಚಾಲನೆ ನೀಡಲಾಗಿದ್ದು, ಇದಕ್ಕಾಗಿ ವಿಶೇಷ ಆ್ಯಪ್​ ಅನ್ನು ಅಭಿವೃದ್ಧಿಪಡಿಸಲಾಗಿದೆ.

ಮರಗಳ ಗಣತಿ

ಈ ಆ್ಯಪ್​ ಜಿಪಿಎಸ್ ಆಧಾರಿತ ಸೇವೆಯಾಗಿದ್ದು, ಆ್ಯಪ್​​ನಲ್ಲಿ ನೋಂದಣಿಯಾದ ಮರಕ್ಕೆ ತೊಂದರೆಯಾದರೆ ತಕ್ಷಣವೇ ಸೂಚನೆ ರವಾನೆ ಆಗುತ್ತದೆ. ನಗರದಲ್ಲಿರುವ ಮರಗಳ ಸಂಖ್ಯೆ ಸ್ಪಷ್ಟವಾಗಿ ಲಭ್ಯವಾಗಲಿದೆ. ಮರಗಳ ಗಣತಿಗೆ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗಿದ್ದು, ಆಯಾ ವಾರ್ಡ್ ಮಟ್ಟದಲ್ಲಿ ಸಾರ್ವಜನಿಕರ ಸಮಿತಿಗಳನ್ನು ರಚಿಸಲಿದೆ.

ಸ್ಮಾರ್ಟ್​​ ಸಿಟಿಗಾಗಿ ನಗರದಲ್ಲಿ ಪ್ರತಿ ಇಂಚು ಭೂ ಬಳಕೆ, ಕಾಮಗಾರಿ ಹಾಗೂ ಕಟ್ಟಡದ ಇತಿಹಾಸ ಸಹಿತ ಮಾಹಿತಿ ಒಳಗೊಂಡಿರಲಿದೆ. ಜಿಐಎಸ್ ಆಧಾರಿತ ಆಸ್ತಿ ಸರ್ವೆ, ನಗರದ ಮೂಲಸೌಕರ್ಯಗಳ ಮಾಸ್ಟರ್ ಪ್ಲಾನ್ ಸೇರಿದಂತೆ ಹಲವು ಯೋಜನೆಗಳ ಅನುಷ್ಠಾನಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ.

Intro:ತುಮಕೂರು ನಗರದಲ್ಲಿ ಆರಂಭವಾಗಿದೆ ಮರಗಳ ಗಣತಿ......

ತುಮಕೂರು
ತುಮಕೂರು ನಗರವನ್ನು ದೇಶದ 100 ಸ್ಮಾರ್ಟ್ ಸಿಟಿ ಗಳಲ್ಲಿ ನಂಬರ್ ಒನ್ ಸ್ಮಾರ್ಟ್ ಸಿಟಿ ಮಾಡಲು ವಿಶೇಷ ಯೋಜನೆಯೊಂದನ್ನು ತಯಾರಿಸಲಾಗಿದೆ. ಇದಕ್ಕಾಗಿ ಹಲವು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರಲ್ಲಿ ಮರಗಳ ಗಣತಿಯು ಕೂಡ ವಿಶಿಷ್ಟವಾದುದಾಗಿದೆ.

ತುಮಕೂರು ಸಂಸದ ಬಸವರಾಜ್ ನೇತೃತ್ವದಲ್ಲಿ ದಿಶಾ ಸಮಿತಿಯು ಸಮರ್ಥ ಅನುಷ್ಠಾನಕ್ಕಾಗಿ ಅನೇಕ ಯೋಜನೆಗಳನ್ನು ಹಾಗೂ ಕಾಮಗಾರಿಗಳ ಮೇಲೆ ಹದ್ದಿನಕಣ್ಣು ಇರಿಸಿದೆ.
ಅದರಲ್ಲಿ ತುಮಕೂರು ನಗರದ ಪೆರಿಫೆರಲ್ ರಿಂಗ್ ರಸ್ತೆ, ಲೋಕಲ್ ಪ್ಲಾನ್ ಏರಿಯಾ ನಿಗದಿ, ಜಿಐಎಸ್ ಆಧಾರಿತ ಮಾಸ್ಟರ್ ಪ್ಲಾನ್ ರಿವಿಜನ್, ತುಮಕೂರು ಬೇಸ್ ಮ್ಯಾಪ್, ಪ್ರತಿ ಇಂಚು ಭೂ ಬಳಕೆ ಮತ್ತು ಪ್ರತಿ ಕಾಮಗಾರಿ ಕಟ್ಟಡದ ಇತಿಹಾಸ ಸಹಿತ ಮಾಹಿತಿ ಒಳಗೊಂಡ ಜಿಐಎಸ್ ಆಧಾರಿತ ಪ್ರಾಪರ್ಟಿ ಸರ್ವೆ, ತುಮಕೂರು ನಗರದ ಮೂಲಭೂತ ಸೌಕರ್ಯಗಳ ಮಾಸ್ಟರ್ ಪ್ಲಾನ್ ಸೇರಿದಂತೆ ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯ ಸಮರ್ಥ ಅನುಷ್ಠಾನಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ.

ಇದಲ್ಲದೆ ತುಮಕೂರು ನಗರದಲ್ಲಿ ಅಸ್ತಿತ್ವದಲ್ಲಿರುವ ಅಂತಹ ಮರಗಳ ಗಣತಿ ಯನ್ನು ಕೂಡ ಮಾಡಲು ಈಗಾಗಲೇ ಚಾಲನೆ ನೀಡಲಾಗಿದೆ. ಇದಕ್ಕಾಗಿ ವಿಶೇಷ ಆಪ್ ಕೂಡ ತಯಾರಿಸಲಾಗಿದೆ. ಒಂದು ಮರದ ಬಳಿ ತೆರಳಿ ಆಪ್ ನಲ್ಲಿ ದಾಖಲಿಸಬಹುದಾಗಿದೆ ಇದು ಜಿಪಿಎಸ್ ಆಧಾರಿತ ದಾಖಲೆಯಾಗಿ ಉಳಿಯಲಿದೆ. ಇದರಿಂದ ತುಮಕೂರು ನಗರದಲ್ಲಿ ಇರುವಂತಹ ಮರಗಳ ಸಂಖ್ಯೆ ಸ್ಪಷ್ಟವಾಗಿ ಲಭ್ಯವಾಗಲಿದೆ.

ತುಮಕೂರು ನಗರದಲ್ಲಿರುವ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುವುದು ಮತ್ತು ಆಯಾ ವಾರ್ಡ್ ಮಟ್ಟದಲ್ಲಿ ಸಾರ್ವಜನಿಕರ ಸಮಿತಿಗಳನ್ನು ರಚಿಸಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಮರಗಳ ಗಣತಿಯನ್ನು ಮಾಡಲಾಗುವುದು.

ಸರ್ಕಾರದ ನಿರೀಕ್ಷೆಯಂತೆ ಪ್ರತಿಯೊಬ್ಬ ಮನುಷ್ಯನಿಗೆ 7 ಮಾರ್ಗಗಳು ಹಾಗೂ ಗಿಡಗಳು ಅಸ್ತಿತ್ವದಲ್ಲಿರಬೇಕು ಎಂಬುದು ಚಿಂತನೆಯಾಗಿದೆ ಈ ಮೂಲಕ ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿ ಸ್ಮಾರ್ಟ್ ಸಿಟಿ ಯೋಜನೆಯದ್ದಾಗಿದೆ. ಅಲ್ಲದೆ ಈ ಮರಗಳ ಗಣತಿಯನ್ನು ಸಾರ್ವತ್ರಿಕರಣಗೊಳಿಸಲಾಗುವುದು.
ಬೈಟ್: ಜ್ಯೋತಿ ಗಣೇಶ್, ತುಮಕೂರು ನಗರ ಶಾಸಕ......


Body:ತುಮಕೂರು


Conclusion:
Last Updated :Nov 16, 2019, 1:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.