ETV Bharat / city

ಶಿವಮೊಗ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜ.18ರಂದು ರಾಷ್ಟ್ರೀಯ ವಿಚಾರ ಸಂಕಿರಣ

author img

By

Published : Jan 17, 2020, 2:37 AM IST

ಜ.18ರಂದು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ. ರಾಜ್ಯದ ವಿವಿಧ ಭಾಗಗಳಿಂದ 300 ರಿಂದ 350 ಪ್ರತಿನಿಧಿಗಳು ಭಾಗಿಯಾಗುವ ಸಾಧ್ಯತೆ.

Principle B.R.Dhananjaya
ಪ್ರಾಂಶುಪಾಲ ಬಿ.ಆರ್.ಧನಂಜಯ

ಶಿವಮೊಗ್ಗ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಪಿಜಿ ಸೆಂಟರ್ ವತಿಯಿಂದ ಜ.18ರಂದು ಬೆಳಗ್ಗೆ 10ಕ್ಕೆ ಕಾಲೇಜು ಸಭಾಂಗಣದಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.

ಪ್ರಾಂಶುಪಾಲ ಬಿ.ಆರ್.ಧನಂಜಯ ಅವರು ಈ ಕುರಿತು ಮಾಹಿತಿ ನೀಡಿದರು. ರಾಜ್ಯದ ವಿವಿಧ ಭಾಗಗಳಿಂದ 300 ರಿಂದ 350 ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದರು.

ಪ್ರಾಂಶುಪಾಲ ಬಿ.ಆರ್.ಧನಂಜಯ

ಈಗಾಗಲೇ ನೂರಕ್ಕೂ ಹೆಚ್ಚು ಪ್ರಬಂಧಗಳು ತಲುಪಿವೆ. ಅವೆಲ್ಲವೂ ಅಂದು ಮಂಡನೆಯಾಗಲಿವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ವೀರಭದ್ರಪ್ಪ, ಡಿಸಿಇ ಜಂಟಿ ನಿರ್ದೇಶಕ ಕೆ.ಸಿ.ವೀರಭದ್ರಯ್ಯ ಭಾಗವಹಿಸಲಿದ್ದಾರೆ ಎಂದರು.

Intro:ಶಿವಮೊಗ್ಗ,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಪಿಜಿ ಸೆಂಟರ್
ವತಿಯಿಂದ ಜನವರಿ 18ರಂದು ಬೆಳಗ್ಗೆ 10ಕ್ಕೆ ಕಾಲೇಜು ಸಭಾಂಗಣದಲ್ಲಿ
ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಲಾಗಿದೆ
ಎಂದು ಕಾಲೇಜು ಪ್ರಾಂಶುಪಾಲ ಬಿ.ಆರ್. ಧನಂಜಯ ಹೇಳಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ
ವಿವಿಧ ಭಾಗಗಳಿಂದ 300ರಿಂದ 350 ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ
ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ನೂರಕ್ಕೂ ಹೆಚ್ಚು ಪ್ರಬಂಧಗಳು ತಲುಪಿದ್ದು,
ಅವೆಲ್ಲವೂ ಅಂದು ಮಂಡನೆಯಾಗಲಿದೆ ಎಂದರು.
ಸಚಿವ ಕೆ.ಎಸ್. ಈಶ್ವರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಕುವೆಂಪು
ವಿವಿ ವೈಸ್ ಚಾನ್ಸಲರ್ ವೀರಭದ್ರಪ್ಪ, ಡಿಸಿಇ ಜಾಯಿಂಟ್ ಡೈರೆಕ್ಟರ್
ಕೆ.ಸಿ. ವೀರಭದ್ರಯ್ಯ ಮತ್ತಿತರರು ಉಪಸ್ಥಿತರಿರುವರು ಎಂದರು.
ಮಧ್ಯಾಹ್ನ 3.45 ಸಮಾರೋಪ ಸಮಾರಂಭ ನಡೆಯಲಿದೆ. ಕಾಲೇಜು
ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಎಸ್. ಅರುಣ್, ಬೆಂಗಳೂರು ವಿವಿ
ನಿವೃತ್ತ ಪ್ರಾಧ್ಯಾಪಕ ಡಿ.ಕೆ. ಮೂರ್ತಿ, ಕುವೆಂಪು ವಿವಿ ಪ್ರೋ. ಹಿರೇಮಣಿ
ನಾಯಕ್ ಮತ್ತಿತರರು ಆಗಮಿಸುವರು ಎಂದರು.
ಪ್ರೋ. ಶಶಿಧರ್, ಡಾ. ಬಸವರಾಜ್, ಎಸ್.ಹೆಚ್. ಪ್ರಸನ್ನ ಇದ್ದರು.

ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.