ETV Bharat / city

ಶಿವಮೊಗ್ಗ : ಜೋಗದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಪರಿಸರವಾದಿಗಳ‌ ವಿರೋಧ‌

author img

By

Published : Oct 27, 2021, 10:58 PM IST

ಜೋಗದಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಪರಿಸರವಾದಿಗಳ‌ ವಿರೋಧ‌
ಜೋಗದಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಪರಿಸರವಾದಿಗಳ‌ ವಿರೋಧ‌

ಜೋಗ ಜಲಪಾತವು ಶರಾವತಿ ಸಿಂಗಳಿಕ ಅಭಯಾರಣ್ಯ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಇದರಿಂದ ಜೋಗದ ಸುತ್ತ 10 ಕಿ.ಮೀ.ವರೆಗೂ ಯಾವುದೇ ಅಭಿವೃದ್ಧಿ ಕಾರ್ಯ ಮಾಡುವಂತಿಲ್ಲ. ಇದು ಕೇಂದ್ರ ಸರ್ಕಾರವೇ ಹೊರಡಿಸಿರುವ ಆದೇಶವಾಗಿದೆ. ಆದರೂ ಸಹ ಕಾಮಗಾರಿ ನಡೆಸಲಾಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ..

ಶಿವಮೊಗ್ಗ : ಜಗತ್ ಪ್ರಸಿದ್ಧ ಜೋಗದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಜೋಗ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ನೂರಾರು ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.

ಜೋಗದಲ್ಲಿ ಈಗ ರೋಪ್ ವೇ ಮಾಡಲಾಗುತ್ತಿದೆ. ಜೋಗದ ಒಂದು ಭಾಗದಿಂದ ಇನ್ನೂಂದು ಭಾಗಕ್ಕೆ ರೋಪ್ ವೇ ಮೂಲಕ ಹೋಗುವ ಅವಕಾಶ ದೂರಕುತ್ತದೆ. ಇಲ್ಲಿ ಪಂಚತಾರ ಹೋಟೆಲ್ ಅನ್ನು ಸಹ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಜೋಗ ಅಭಿವೃದ್ಧಿಗೆ 185 ಕೋಟಿ ರೂ. ಬಿಡುಗಡೆಯಾಗಿದೆ. ಇದರಲ್ಲಿ ಜೋಗ ಜಲಪಾತದ ಮುಂಭಾಗ ಪ್ರವಾಸಿಗರು ನಿಂತು ನೋಡುವ ಪ್ರದೇಶ ಅಭಿವೃದ್ಧಿ ಕಾಮಗಾರಿ ಸೇರಿದೆ.

ಜೋಗದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಪರಿಸರವಾದಿಗಳ‌ ವಿರೋಧ‌

ಮಳೆಯಲ್ಲಿಯೂ ನಿಂತು ಜೋಗ ನೋಡಲು ಮೇಲ್ಛಾವಣಿ, ರೋಪ್​ ವೇ, ಜೋಗ ಪ್ರವೇಶ ದ್ವಾರದಲ್ಲಿ ಶರಾವತಿಯ ಮೂರ್ತಿ, ಪಾರ್ಕಿಂಗ್ ಪ್ರದೇಶಾಭಿವೃದ್ದಿ ಹಾಗೂ ತಳಕಳಲೆ ಡ್ಯಾಂನಲ್ಲಿ ವಾಟರ್ ಸ್ಪೋರ್ಟ್ಸ್ ಅಭಿವೃದ್ಧಿ ಮಾಡುವುದು ಒಳಗೊಂಡಿದೆ. ಈ ಎಲ್ಲಾ ಕಾಮಗಾರಿಯನ್ನು ಕೆಪಿಸಿಯಿಂದ ನಡೆಸಲಾಗುತ್ತಿದೆ. ಜೋಗ ಅಭಿವೃದ್ದಿಗೆ ಹಣವನ್ನು ಪ್ರವಾಸೋದ್ಯಮ ಇಲಾಖೆ ನೀಡುತ್ತಿದೆ.

ಆದರೆ, ಪರಿಸರವಾದಿಗಳು ನೈಸರ್ಗಿಕವಾಗಿ ಇರುವ ಜೋಗ ಜಲಪಾತದಲ್ಲಿ ಈಗಾಗಲೇ ಅನೇಕ ಅಭಿವೃದ್ಧಿಗೆ ಕಾಮಗಾರಿ ನಡೆಸಲಾಗಿದೆ. ಇದರಿಂದ ಮೂಲ ಸ್ವರೂಪದಲ್ಲಿ ಅನೇಕ ಬದಲಾವಣೆ ತರಲಾಗಿದೆ. ಈಗ ಮತ್ತೆ ಅಭಿವೃದ್ಧಿ ಹೆಸರಿನಲ್ಲಿ ನೈಸರ್ಗಿಕವಾದ ಪ್ರದೇಶವನ್ನು ಹಾಳುಗೆಡವಲು ಸರ್ಕಾರ ಹೊರಟಿದೆ ಎಂದು ಆರೋಪಿಸಿದ್ದಾರೆ.

ಸಂರಕ್ಷಣಾ ಪ್ರದೇಶದಲ್ಲಿ ಅಭಿವೃದ್ದಿ ಕಾರ್ಯ ಸಲ್ಲದು : ಜೋಗ ಜಲಪಾತವು ಶರಾವತಿ ಸಿಂಗಳಿಕ ಅಭಯಾರಣ್ಯ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಇದರಿಂದ ಜೋಗದ ಸುತ್ತ 10 ಕಿ.ಮೀ.ವರೆಗೂ ಯಾವುದೇ ಅಭಿವೃದ್ಧಿ ಕಾರ್ಯ ಮಾಡುವಂತಿಲ್ಲ. ಇದು ಕೇಂದ್ರ ಸರ್ಕಾರವೇ ಹೊರಡಿಸಿರುವ ಆದೇಶವಾಗಿದೆ. ಆದರೂ ಸಹ ಕಾಮಗಾರಿ ನಡೆಸಲಾಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.