ETV Bharat / city

ಮಂಗಳೂರು ದಸರಾ ಕಾರ್ಯಕ್ರಮದಲ್ಲಿ ತುಳು ಹಾಡು ಹಾಡಿದ ಪೊಲೀಸ್​ ಕಮಿಷನರ್ ಶಶಿಕುಮಾರ್

author img

By

Published : Oct 15, 2021, 4:13 PM IST

ಶಶಿಕುಮಾರ್ ಅವರು ಗಾಯಕರಾಗಿದ್ದು, ಈ ಹಿಂದೆಯು ಹಲವು ಬಾರಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಾಡುಗಳನ್ನು ಹಾಡಿದ್ದರು. ಮಂಗಳೂರಿಗೆ ಬಂದ ಬಳಿಕ ತುಳು ಭಾಷೆಯ ಬಗ್ಗೆ ಆಕರ್ಷಿತರಾಗಿರುವ ಅವರು, ತುಳು ಭಾಷೆಯ ಹಾಡುಗಳನ್ನು ಹಾಡುತ್ತಿದ್ದಾರೆ..

Police Commissioner Shashikumar sang a Tulu song at Mangalore Dasara program
ತುಳು ಹಾಡು ಹಾಡಿದ ಪೊಲೀಸ್​ ಕಮಿಷನರ್ ಶಶಿಕುಮಾರ್

ಮಂಗಳೂರು : ಗಾಯಕರು ಆಗಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಮಂಗಳೂರು ದಸರಾ ಕಾರ್ಯಕ್ರಮದಲ್ಲಿ ಕನ್ನಡ ಹಾಡಿನ ಜೊತೆಗೆ ತುಳು ಹಾಡು ಹಾಡಿ ರಂಜಿಸಿದರು.

ತುಳು ಹಾಡು ಹಾಡಿದ ಪೊಲೀಸ್​ ಕಮಿಷನರ್ ಶಶಿಕುಮಾರ್..

ಮಂಗಳೂರು ದಸರಾ ಹಾಗೂ ನವರಾತ್ರಿ ಮಹೋತ್ಸವದ ಪ್ರಯುಕ್ತ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಹಾಕಲಾದ ವೇದಿಕೆಯಲ್ಲಿ ಸಾಂಸ್ಕೃತಿಕ,ಧಾರ್ಮಿಕ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಅವರು ಭಕ್ತಿಗೀತೆಗಳನ್ನು ಹಾಡಿದರು. ಕತ್ತಲೆ ಕೋಣೆಡ್ ಉಲ್ಲ ಎಂಬ ಖ್ಯಾತ ತುಳು ಭಕ್ತಿ ಗೀತೆ ಮತ್ತು ಇತರೆ ಭಕ್ತಿ ಗೀತೆಗಳನ್ನು ಹಾಡುವ ಮೂಲಕ ದಸರಾ ಕಾರ್ಯಕ್ರಮಕ್ಕೆ ಬಂದಿದ್ದವರ ಮನರಂಜಿಸಿದರು.

ಇದನ್ನೂ ಓದಿ: ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ‌ ವಿದ್ಯಾರಂಭ ಪೂಜೆ

ಶಶಿಕುಮಾರ್ ಅವರು ಗಾಯಕರಾಗಿದ್ದು, ಈ ಹಿಂದೆಯು ಹಲವು ಬಾರಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಾಡುಗಳನ್ನು ಹಾಡಿದ್ದರು. ಮಂಗಳೂರಿಗೆ ಬಂದ ಬಳಿಕ ತುಳು ಭಾಷೆಯ ಬಗ್ಗೆ ಆಕರ್ಷಿತರಾಗಿರುವ ಅವರು, ತುಳು ಭಾಷೆಯ ಹಾಡುಗಳನ್ನು ಹಾಡುತ್ತಿದ್ದಾರೆ. ಇದೀಗ ಸಾರ್ವಜನಿಕ ವೇದಿಕೆಯಲ್ಲಿ ತುಳು ಭಕ್ತಿಗೀತೆ ಹಾಡುವ ಮೂಲಕ ಮನರಂಜಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.