ETV Bharat / city

ಮಂಗಳೂರಲ್ಲಿ ಸಮುದ್ರಕ್ಕೆ ಹಾರಿ ಯುವಕ ಆತ್ಮಹತ್ಯೆ.. ಸಾಲ ಕೊಟ್ಟವರ ಹೆಸರನ್ನು ಡೆತ್​ನೋಟ್​ನಲ್ಲಿ ಬರೆದಿಟ್ಟ

author img

By

Published : Apr 12, 2022, 7:58 AM IST

ತಾನು ತೆಗೆದುಕೊಂಡಿದ್ದ 24 ಸಾವಿರ ರೂಪಾಯಿ ಸಾಲವನ್ನು ತೀರಿಸಲಾಗದೆ ಯುವಕನೋರ್ವ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮೃತ ಯುವಕನನ್ನು ಕಾಟೀಪಳ್ಳ ನಿವಾಸಿ ಕಂಡ್ರಿಕ್ ಲಾರೆನ್ಸ್ ಡಿ ಸೋಜ (20) ಎಂದು ಗುರುತಿಸಲಾಗಿದೆ.

mangalore-20-year-old-youth-commits-suicide
ಮಂಗಳೂರು : ಸಾಲ ತೀರಿಸಲಾಗದೆ ಸಮುದ್ರಕ್ಕೆ ಹಾರಿ 20 ವರ್ಷದ ಯುವಕನ ಆತ್ಮಹತ್ಯೆ

ಮಂಗಳೂರು(ದಕ್ಷಿಣ ಕನ್ನಡ) : ತನ್ನ 24 ಸಾವಿರ ಸಾಲವನ್ನು ತೀರಿಸಲಾಗದೆ ಯುವಕನೋರ್ವ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಇಲ್ಲಿನ ಕಾಟೀಪಳ್ಳ ನಿವಾಸಿ ಕಂಡ್ರಿಕ್ ಲಾರೆನ್ಸ್ ಡಿ ಸೋಜ ( 20) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ತಿಳಿದುಬಂದಿದೆ.

ಮೃತ ಯುವಕನಿಗೆ ಕುಡಿತದ ಚಟವಿದ್ದು ಗೆಳೆಯರಲ್ಲಿ ಸಾಲ ಮಾಡಿಕೊಂಡಿದ್ದ. ಕೆಲಸಕ್ಕೆ ರಜೆ ಹಾಕಿದ್ದ ಯುವಕ ನಿನ್ನೆ ಸುಮಾರು 11.30 ಕ್ಕೆ ಮನೆಯಿಂದ ಹೊರಟು ಹೋಗಿದ್ದ. ಬಳಿಕ ಎಲ್ಲೆಡೆ ಹುಡುಕಾಡಿದಾಗ ನಿನ್ನೆ ಸಂಜೆ ಸುರತ್ಕಲ್ ಠಾಣಾ ವ್ಯಾಪ್ತಿಯ ಮಲ್ಲಮಾರ್ ಬೀಚ್ ಬಳಿ ಯುವಕನ ಮೃತದೇಹ ಪತ್ತೆಯಾಗಿದೆ.

ಈತ ತನ್ನ ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ನಾನೇ ಕಾರಣ. ನಾನು ಹಲವರಿಗೆ ಹಣ ಕೊಡಲು ಬಾಕಿ ಇದೆ. ಅಮ್ಮನ ಬಂಗಾರ ಅಡವಿಟ್ಟು ತಂದ ಹಣವು ಖರ್ಚಾಯಿತು. ಹರ್ಷಿತ್ 6 ಸಾವಿರ, ಶರೊಲಿನ್ ಡಿಸೋಜ 3 ಸಾವಿರ, ಸುಧಾಕರ್ 3 ಸಾವಿರ, ಅಮ್ಮ ನಿಗೆ ( ಬಂಗಾರದ ಹಣ) 12 ಸಾವಿರ ನೀಡಬೇಕಿತ್ತು. ಸಾರಿ ಅಮ್ಮ ಮತ್ತು ಕುಟುಂಬಿಕರಿಗೆ ಎಂದು ಬರೆಯಲಾಗಿದೆ. ಸದ್ಯ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ : ಪರೀಕ್ಷೆ ಬರೆಯಲು ಹೋಗುತ್ತಿದ್ದಾಗ ಅಪಘಾತ : ಆಂಬ್ಯುಲೆನ್ಸ್​ನಲ್ಲಿ ಕರೆತಂದು ಪರೀಕ್ಷೆಗೆ ಕೂರಿಸಿದ ಆಡಳಿತ‌ ಮಂಡಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.