ETV Bharat / city

Kalaburagi: ಪ್ರವಾಹ ಸಂದರ್ಭ ಸಂತ್ರಸ್ಥರ ರಕ್ಷಣೆ, NDRF ಟೀಂ ನೇತೃತ್ವದಲ್ಲಿ ತರಬೇತಿ

author img

By

Published : Jun 19, 2021, 8:50 PM IST

ಕಲಬುರಗಿ ಜಿಲ್ಲೆಯಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ಜಿಲ್ಲೆಯ ಚಿಂಚೋಳಿ ತಾಲೂಕಿನ ಮುಲ್ಲಾಮಾರಿ‌ ಜಲಾಶಯ ಮತ್ತು ಕಮಲಾಪುರ ತಾಲೂಕಿನ ಬೆಣ್ಣೆತೋರಾ ಜಲಾಶಯಗಳು ಸಂಪೂರ್ಣ ಭರ್ತಿಯಾಗಿವೆ. ಮುಲ್ಲಾಮಾರಿ ಜಲಾಶಯದಿಂದ ಈಗಾಗಲೇ 300 ಕ್ಯೂಸೆಕ್​ ನೀರು ನದಿಗೆ ಬಿಟ್ಟಿರುವುದರಿಂದ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.

ndrf-team-training-
NDRF ಟೀಂ ನೇತೃತ್ವದಲ್ಲಿ ತರಬೇತಿ

ಕಲಬುರಗಿ: ಮಹಾಮಾರಿ ಕೊರೊನಾ ಎರಡನೇ ಅಲೆ ಕಟ್ಟಿಹಾಕಲು ಹಗಲಿರುಳು ಶ್ರಮಿಸಿ ಯಶಸ್ವಿಯಾಗಿರುವ ಕಲಬುರಗಿ ಜಿಲ್ಲಾಡಳಿತಕ್ಕೆ ಇದೀಗ ಪ್ರವಾಹ ತಲೆನೋವು ಶುರುವಾಗಿದೆ.

ನೆರೆ ಉಂಟಾದರೆ ಪರಿಸ್ಥಿತಿ ಎದುರಿಸಿ ಜನರ ರಕ್ಷಣೆ ಮಾಡಲು ಜಿಲ್ಲಾಡಳಿತ ಯೋಜನೆ ರೂಪಿಸುತ್ತಿದೆ. ಪ್ರವಾಹವನ್ನು ಸನ್ನದ್ಧವಾಗಿ ಎದುರಿಸಲು ಜಿಲ್ಲಾಡಳಿತ ಪ್ಲಾನ್ ಮಾಡಿಕೊಂಡು ರಕ್ಷಣಾ ತರಬೇತಿ ಜೊತೆಗೆ ಟ್ರಯಲ್ ಪ್ರಾಕ್ಟೀಸ್ ಮಾಡುತ್ತಿದೆ. ಮುಂದೆ ಪ್ರವಾಹ ಪರಿಸ್ಥಿತಿ ಎದುರಿಸಲು ಕಲಬುರಗಿ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ.‌

NDRF ಟೀಂ ನೇತೃತ್ವದಲ್ಲಿ ತರಬೇತಿ

ಓದಿ: ಕೃಷ್ಣಾ ನದಿಯಲ್ಲಿ ಒಳ ಹರಿವು ಹೆಚ್ಚಳ.. ನದಿ ತೀರದ ರೈತರಲ್ಲಿ ಮತ್ತೆ ಆತಂಕ

ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರ ರಕ್ಷಣೆಗಾಗಿ ಎನ್​​ಡಿಆರ್​​ಎಫ್ ಟೀಂ ನೇತೃತ್ವದಲ್ಲಿ ತರಬೇತಿ ಭರ್ಜರಿಯಾಗಿ ನಡೆದಿದೆ. ವಿಜಯವಾಡದಿಂದ ಆಗಮಿಸಿರುವ ನಾಲ್ವರನ್ನೊಳಗೊಂಡ ಎನ್​​ಡಿಆರ್​​ಎಫ್ ಟೀಂ, ಎಸ್​​​ಡಿಆರ್​​ಎಫ್​​ನ 45 ಜನ ಹಾಗೂ ಹೋಂ ಗಾರ್ಡ್ 30 ಸಿಬ್ಬಂದಿಗೆ ರಕ್ಷಣಾ ಕಾರ್ಯಾಚರಣೆಯ ತರಬೇತಿ ನೀಡಲಾಗುತ್ತಿದೆ. ಕಲಬುರಗಿ ನಗರದ ಶರಣಬಸವೇಶ್ವರ ಅಪ್ಪಾ ಕೆರೆಯಲ್ಲಿ ತರಬೇತಿ ನೀಡಲಾಗುತ್ತಿದ್ದು, ಪ್ರವಾಹದಲ್ಲಿ ಸಿಲುಕಿದ ವ್ಯಕ್ತಿಯ ರಕ್ಷಣೆಯ ಅಣಕು ಕಾರ್ಯಾಚರಣೆ ಸಹ ನಡೆಸಲಾಯಿತು.

ಜಿಲ್ಲೆಯಲ್ಲಿ ಮುಂಗಾರು ಮಳೆ ಆರ್ಭಟ:

ಇನ್ನು ಜಿಲ್ಲೆಯಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ಜಿಲ್ಲೆಯ ಚಿಂಚೋಳಿ ತಾಲೂಕಿನ ಮುಲ್ಲಾಮಾರಿ‌ ಜಲಾಶಯ ಮತ್ತು ಕಮಲಾಪುರ ತಾಲೂಕಿನ ಬೆಣ್ಣೆತೋರಾ ಜಲಾಶಯಗಳು ಸಂಪೂರ್ಣ ಭರ್ತಿಯಾಗಿವೆ.

ಮುಲ್ಲಾಮಾರಿ ಜಲಾಶಯದಿಂದ ಈಗಾಗಲೇ 300 ಕ್ಯೂಸೆಕ್ಸ್ ನೀರು ನದಿಗೆ ಬಿಟ್ಟಿರುವುದರಿಂದ ನದಿ ಪಾತ್ರದ ಗ್ರಾಮಗಳಾದ ಚಿಮ್ಮನಚೋಡ, ತಾಜಲಾಪುರ, ಕನಕಪುರ, ಗಾರಂಪಳ್ಳಿ, ದೇಗಲಮಡಿ, ಚಿಂಚೋಳಿ, ಅನವಾರ ಸೇರಿದಂತೆ ಹಲವು ಗ್ರಾಮಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.

ಹಾಗಾಗಿ ಜನರು ನದಿಯಲ್ಲಿ ‌ಮೀನು ಹಿಡಿಯಲು, ಬಟ್ಟೆ ಒಗೆಯಲು, ಜಾನುವಾರುಗಳಿಗೆ ನೀರು ಕುಡಿಸಲು ಹೋಗಬಾರದೆಂದು ನೀರಾವರಿ ಇಲಾಖೆ ಎಚ್ಚರಿಕೆ ನೀಡಿದೆ. ಯಾವ ಸಂದರ್ಭದಲ್ಲೂ ಪ್ರವಾಹ ಎದುರಾಗೋ ಸಾಧ್ಯತೆ, ಆತಂಕ‌ ಇರುವುದರಿಂದ ಎನ್‌ಡಿಆರ್‌ಎಫ್ ತಂಡ ಬರುವ ಮುನ್ನವೇ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಮಾಜಿ ಸೈನಿಕರಿಗೆ ಪ್ರವಾಹದಲ್ಲಿ ಸಿಲುಕಿಕೊಂಡಿರುವ ಜನರ ರಕ್ಷಣೆ ಮಾಡುವ ಬಗ್ಗೆ ತರಬೇತಿ ‌ನೀಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.