ETV Bharat / city

ಕೊರೊನಾ ಜಾಗೃತಿಯಲ್ಲಿ ನಿರ್ಲಕ್ಷ್ಯ ಮಾಡಿದ್ರೆ ಅಧಿಕಾರಿಗಳ ವಿರುದ್ಧ ಕ್ರಮ : ಸಚಿವ ಹಾಲಪ್ಪ ಆಚಾರ್​ ಎಚ್ಚರಿಕೆ

author img

By

Published : Jan 26, 2022, 6:27 PM IST

Updated : Jan 26, 2022, 7:14 PM IST

minister-halappa-aachar
ಸಚಿವ ಹಾಲಪ್ಪ ಆಚಾರ್​

ಇನ್ನೊಂದು ವಾರದಲ್ಲಿ ಕೋವಿಡ್ ಕಡಿಮೆಯಾಗುವ ನಿರೀಕ್ಷೆ ಇದೆ. ಮದುವೆ ಸೇರಿದಂತೆ ಹಲವು ಕಾರ್ಯಕ್ರಮಗಳಿಂದ ಕೇಸ್ ಹೆಚ್ಚಾಗಿದೆ. ಈ ಹಿನ್ನೆಲೆ ಅಧಿಕಾರಿಗಳಿಗೂ ಸಹ ಜಾಗೃತಿ ಮೂಡಿಸುವಂತೆ ಸೂಚನೆ‌ ನೀಡಿದ್ದೇನೆ. ಅಧಿಕಾರಿಗಳು ನಿರ್ಲಕ್ಷ‌ ತೋರಿದರೆ‌ ಅಂತವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು..

ಧಾರವಾಡ : ಜಿಲ್ಲೆಯಲ್ಲಿ ನಿತ್ಯ 5 ಸಾವಿರ ಟೆಸ್ಟ್ ಮಾಡಲಾಗುತ್ತಿತ್ತು. ಕಳೆದ ಒಂದು ವಾರದಿಂದ ಪಾಸಿಟಿವಿಟಿ ರೇಟ್ 17 ರಿಂದ 20ರವರೆಗೆ ಇತ್ತು. ಈಗ ಅದರ ಪ್ರಮಾಣ ಕಡಿಮೆಯಾಗಿದೆ. ಸೋಂಕಿತರಿಗೆ ಸಕಲ ಉಪಚಾರ ನೀಡಲಾಗಿದೆ ಎಂದು‌ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

ಕೊರೊನಾ ಜಾಗೃತಿಯಲ್ಲಿ ನಿರ್ಲಕ್ಷ್ಯ ಮಾಡಿದ್ರೆ ಅಧಿಕಾರಿಗಳ ವಿರುದ್ಧ ಕ್ರಮ : ಸಚಿವ ಹಾಲಪ್ಪ ಆಚಾರ್​ ಎಚ್ಚರಿಕೆ

ಕೋವಿಡ್​ ಕುರಿತು ಕೈಗೊಂಡ ಮುಂಜಾಗೃತಾ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವ ಸೋಂಕಿತರೂ ಸೀರಿಯಸ್ ಇಲ್ಲ. ಜಿಲ್ಲೆಯಲ್ಲಿ 0.04 ಡೆತ್ ರೇಟ್ ಇದೆ. ಬಹಳಷ್ಟು ಜನ ಹೋಮ್ ಐಸೋಲೇಶನ್‌ಲ್ಲಿದಾರೆ. ಜಿಲ್ಲೆಯಲ್ಲಿ ತಪಾಸಣೆ, ಚಿಕಿತ್ಸೆ, ಜಾಗೃತಿ ಯಶಸ್ವಿಯಾಗಿದೆ ಎಂದು ಮಾಹಿತಿ ನೀಡಿದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಇನ್ನೊಂದು ವಾರದಲ್ಲಿ ಕೋವಿಡ್ ಕಡಿಮೆಯಾಗುವ ನಿರೀಕ್ಷೆ ಇದೆ. ಮದುವೆ ಸೇರಿದಂತೆ ಹಲವು ಕಾರ್ಯಕ್ರಮಗಳಿಂದ ಕೇಸ್ ಹೆಚ್ಚಾಗಿದೆ. ಈ ಹಿನ್ನೆಲೆ ಅಧಿಕಾರಿಗಳಿಗೂ ಸಹ ಜಾಗೃತಿ ಮೂಡಿಸುವಂತೆ ಸೂಚನೆ‌ ನೀಡಿದ್ದೇನೆ. ಅಧಿಕಾರಿಗಳು ನಿರ್ಲಕ್ಷ‌ ತೋರಿದರೆ‌ ಅಂತವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಆಯಾ‌ ಜಿಲ್ಲೆಯವರಿಗೆ ಉಸ್ತುವಾರಿ ಸ್ಥಾನ ನೀಡಬೇಕು ಎಂಬ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರು ನಮ್ಮ ಪಕ್ಷದ ಹಿರಿಯರು ಸಲಹೆ- ಸೂಚನೆ ನೀಡುತ್ತಾರೆ ಎಂದು ಉತ್ತರಿಸಿದರು.

ಇದನ್ನೂ ಓದಿ: ಆರು ತಿಂಗಳ ಕಂದಮ್ಮ ಸೇರಿ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ತಾಯಿ..

Last Updated :Jan 26, 2022, 7:14 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.