ETV Bharat / city

Watch... ಬೆಣ್ಣೆನಗರಿಯಲ್ಲಿ ಸದ್ದು ಮಾಡಿತು ಟಗರು ಕಾಳಗ.. ಜನ್ರಿಗೆ ಸಿಕ್ತು ಭಾರಿ ಮನೋರಂಜನೆ

author img

By

Published : Sep 29, 2021, 7:52 AM IST

Updated : Sep 29, 2021, 10:43 AM IST

tagaru kalaga
ಟಗರು ಕಾಳಗ

ನಿನ್ನೆ ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಹುಟ್ಟು ಹಬ್ಬದ ನಿಮಿತ್ತ ಅವರ ಅಭಿಮಾನಿಗಳು ದಾವಣಗೆರೆ ನಗರದ ಹಳೇ ಕುಂದವಾಡ ಗ್ರಾಮದ ಬಳಿ ಇರುವ ಮೈದಾನದಲ್ಲಿ ರಾಜ್ಯ ಮಟ್ಟದ ಟಗರು ಕಾಳಗ ಏರ್ಪಡಿಸಿದ್ದು, ಭಾರಿ ಸ್ಪರ್ಧೆ ನಡೆಯಿತು.

ದಾವಣಗೆರೆ: ದಾವಣಗೆರೆಯಲ್ಲಿ ಟಗರು ಕಾಳಗ ಜೋರಾಗಿರುತ್ತದೆ. ಎರಡು ವರ್ಷಗಳ ನಿರಂತರ ಪರಿಶ್ರಮ ವಹಿಸುವ ಟಗರುಗಳು ಮೈದಾನದಲ್ಲಿ ಪರಸ್ಪರ ಗೆಲುವಿಗೆ ಹೋರಾಡುತ್ತವೆ. ನಿನ್ನೆ ಟಗರು ಕಾಳಗ ನಡೆದಿದ್ದು, ಜನರಿಗೆ ಭಾರಿ ಮನೋರಂಜನೆಯೂ ಸಿಕ್ಕಿದೆ.

ಟಗರು ಕಾಳಗ

ಮನೆಗೊಂದು ಟಗರಿದ್ದ ಕಾಲದಲ್ಲಿ ಈ ಕಾಳಗ ಹೆಚ್ಚು ಹೆಸರುವಾಸಿಯಾಗಿತ್ತು.‌ ಆದರೆ ಇದೀಗ‌ ಟಗರುಗಳ ಸಾಕಣೆ ಪ್ರಮಾಣ ಕಡಿಮೆ ಆಗಿದ್ದರೂ ಆ ಸ್ಪರ್ಧೆ ತೀವ್ರತೆ ಮಾತ್ರ ಕಮ್ಮಿ ಆಗಿಲ್ಲ. ವಿಶೇಷವಾಗಿ ವರ್ಷಕ್ಕೊಮ್ಮೆ ಇಲ್ಲಿ ನಡೆಯುವ ರಾಜ್ಯ ಮಟ್ಟದ ಟಗರು ಕಾಳಗ ಸ್ಪರ್ಧೆಯಲ್ಲಿ ರಾಜ್ಯದ ಟಗರುಗಳು ಗೆಲುವಿಗೆ ಸೆಣಸಾಡುತ್ತವೆ.

ಈ ಬಾರಿ ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ದಾವಣಗೆರೆ ನಗರದ ಹಳೇ ಕುಂದವಾಡ ಗ್ರಾಮದ ಬಳಿ ಇರುವ ಮೈದಾನದಲ್ಲಿ ರಾಜ್ಯ ಮಟ್ಟದ ಟಗರು ಕಾಳಗ ಏರ್ಪಡಿಸಿದ್ದರು. ಟಗರು ಕಾಳಗ ಕಣ್ತುಂಬಿಕೊಳ್ಳಲು ಈ ಮೈದಾದತ್ತ ಜನಸಾಗರವೇ ಹರಿದು ಬಂದಿತ್ತು. ನಿರಂತರ ಅಭ್ಯಾಸ ಹಾಗೂ ಕಾಳಗಕ್ಕಾಗಿ ಸಜ್ಜಾದ ಟಗರುಗಳು ಸ್ಪರ್ಧೆಯಲ್ಲಿ ಭಾರಿ ಪೈಪೋಟಿ ನಡೆಸಿದ್ವು.

ವಿವಿಧ ವಿಭಾಗಗಳಲ್ಲಿ ಟಗರು ಕಾಳಗ

ಈ ಕಾಳಗಕ್ಕೆ 22 ಮರಿ ಟಗರುಗಳು, ಎಂಟು ಹಲ್ಲಿನ 18 ಟಗರುಗಳು, ಆರು ಹಲ್ಲಿನ 20 ಟಗರುಗಳು, ನಾಲ್ಕು ಹಲ್ಲಿನ 17 ಟಗರುಗಳು ಹಾಗೂ ಎರಡು ಹಲ್ಲಿನ 11 ಟಗರುಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮುಖೇನ ತಮ್ಮ ತಾಕತ್ತು ಪ್ರದರ್ಶಿಸಿದವು.

ಮರಿ ಟಗರು, ಎರಡು ಹಲ್ಲಿನ ಟಗರು , ನಾಲ್ಕು ಹಲ್ಲಿನ ಟಗರು, ಆರು ಹಲ್ಲಿನ ಟಗರು ಹಾಗೂ ಕೊನೆಗೆ ಎಂಟು ಹಲ್ಲಿನಂತೆ ಒಟ್ಟು ಐದು ವಿಭಾಗದಲ್ಲಿ ಸ್ಪರ್ಧೆಗಳು ನಡೆಯುತ್ತವೆ. ಇದರಲ್ಲಿ ಆರು ಮತ್ತು ಎಂಟು ಹಲ್ಲಿನ ಟಗರುಗಳ ಕಾಳಗ ಮಾತ್ರ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿರುತ್ತದೆ.

ಇದನ್ನೂ ಓದಿ: 2ಎ ಮೀಸಲಾತಿಗೆ ಒತ್ತಾಯಿಸಿ ಪ್ರತಿಜ್ಞಾ ಪಂಚಾಯತ್ ಅಭಿಯಾನ: ಶ್ರೀ ಜಯಮೃತ್ಯುಂಜಯ ಸ್ವಾಮೀಜಿ

ಈ ಹಿಂದೆ ಟಗರು ಕಾಳಗ ಅಂದ್ರೆ ಜೂಜು ಅಡ್ಡೆಯ ಮತ್ತೊಂದು ಕೇಂದ್ರವಾಗಿತ್ತು. ಆದ್ರೆ ಈಗ ಶಾತಿಯುತವಾಗಿ ಮನೋರಂಜನೆಗೆ ಟಗರು ಕಾಳಗ ನಡೆಯುವುದು ವಿಶೇಷ. ಇತ್ತೀಚಿನ ದಿನಗಳಲ್ಲಿ ಯುವಕರು ಕ್ರಿಕೆಟ್, ಮೊಬೈಲ್ ಗೇಮ್ ಮೊರೆ ಹೋಗ್ತಾರೆ. ಆದರೆ ಹಳೆಯ ಪರಂಪರೆಯಿಂದ ನಡೆದುಕೊಂಡ ಬಂದ ಟಗರು ಕಾಳಗವನ್ನು ನೋಡುವುದು ಕೂಡ ಅಪರೂಪ. ಅಂತಹದರಲ್ಲಿ ಹಳೇ ಕುಂದುವಾಡ ಗ್ರಾಮದಲ್ಲಿ ಟಗರು ಕಾಳಗ ಏರ್ಪಡಿಸಿದ್ದು, ನಿಜಕ್ಕೂ ಖುಷಿಯ ಸಂಗತಿ ಮತ್ತು ಈ ಕಾಳಗ ನೋಡಲು ಹೆಚ್ಚಿನ ಸಂಖ್ಯೆಯ ಜನರು ಬಂದು ಸೇರಿದ್ದರು.

ಹೀಗೆ ಐದು ವಿಭಾಗದಲ್ಲಿ ಗೆದ್ದ ಟಗರುಗಳಿಗೆ ಪ್ರಥಮ ಮತ್ತು ದ್ವಿತೀಯ ಬಹುಮಾನಗಳನ್ನು ನೀಡಲಾಗುತ್ತದೆ. ಆರು ಮತ್ತು ಎಂಟು ಹಲ್ಲಿನ ಟಗರುಗಳಿಗೆ 30 ಸಾವಿರ ರೂಪಾಯಿ ನೀಡಿ ಗೌರವಿಸಲಾಯಿತು.

Last Updated :Sep 29, 2021, 10:43 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.