ETV Bharat / city

RSS ನಿಂದ HDK ಪಾಠ ಕಲಿಯುವ ಅಗತ್ಯ ಇದೆ: ಸಚಿವ ನಾರಾಯಣ ಗೌಡ

author img

By

Published : Oct 23, 2021, 7:44 AM IST

minister narayanagowda and bhyrati basavaraj
ನಾರಾಯಣ ಗೌಡ - ಭೈರತಿ ಬಸವರಾಜ್

ಮಾಜಿ ಸಿಎಂ ಕುಮಾರಸ್ವಾಮಿಯವರು ಆ ರೀತಿ ಮಾತನಾಡುವುದರಿಂದ ಆರ್​ಎಸ್​ಎಸ್ ಗೌರವ ಕಡಿಮೆ ಆಗಲ್ಲ. ಇದೆಲ್ಲ ಎಲೆಕ್ಷನ್ ಗಿಮಿಕ್. ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಸಚಿವ ನಾರಾಯಣ ಗೌಡ ಟಾಂಗ್ ನೀಡಿದರು.

ದಾವಣಗೆರೆ: ಆರ್​ಎಸ್​ಎಸ್ ನಿಂದ ಹೆಚ್​ಡಿಕೆ ಪಾಠ ಕಲಿಯುವ ಅಗತ್ಯವಿದೆ. ಅದನ್ನು ಬಿಟ್ಟು ಟೀಕೆ ಟಿಪ್ಪಣಿ ಸರಿಯಲ್ಲ ಎಂದು ಮಾಜಿ‌ ಸಿಎಂ ಹೆಚ್ ​ಡಿ ಕುಮಾರಸ್ವಾಮಿ ವಿರುದ್ಧ ಸಚಿವ ನಾರಾಯಣ ಗೌಡ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕುಮಾರಸ್ವಾಮಿಯವರು ಆ ರೀತಿ ಮಾತನಾಡುವುದರಿಂದ ಆರ್​ಎಸ್​ಎಸ್ ಗೌರವ ಕಡಿಮೆ ಆಗಲ್ಲ. ಇದೆಲ್ಲ ಎಲೆಕ್ಷನ್ ಗಿಮಿಕ್. ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಟಾಂಗ್ ನೀಡಿದರು.

ಸಚಿವ ನಾರಾಯಣ ಗೌಡ - ಭೈರತಿ ಬಸವರಾಜ್ ಮಾತನಾಡಿರುವುದು...

ಲಸಿಕೆ ನೂರು ಕೋಟಿ ದಾಟಿದೆ, ಆದರೂ ಟೀಕೆ-ಟಿಪ್ಪಣಿ:

ಕೋವಿಡ್​ ತಡೆಗೆ ಲಸಿಕೆ ಹಾಕುತ್ತಿರುವುದು ನೂರು ಕೋಟಿ ದಾಟಿದೆ. ಆದರೂ ಟೀಕೆ ಟಿಪ್ಪಣಿ ನಡೆಯುತ್ತಿದೆ. ತಜ್ಞರನ್ನು ಹುಡುಕಿ ನಮ್ಮ ದೇಶ ಹಾಗೂ ಬೇರೆ ದೇಶಕ್ಕೂ ಲಸಿಕೆ ವಿತರಿಸುತ್ತಿದ್ದೇವೆ. ಟೀಕೆ ಮಾಡದೆ ಎದುರಿರುವವರು ಬಾಯಿ ಮುಚ್ಚಿಕೊಂಡು ಇರೋದು ಒಳ್ಳೆಯದು ಎಂದು ಕಿಡಿಕಾರಿದರು.

ಬೆಂಗಳೂರು ಉಸ್ತುವಾರಿಗೆ...!

ಬೆಂಗಳೂರು ಉಸ್ತುವಾರಿ ಬಗ್ಗೆ ಹಿರಿಯರು ತೀರ್ಮಾನ ಮಾಡುತ್ತಾರೆ. ಮಾಜಿ ಸಿಎಂ ಬಿಎಸ್​ವೈ ಅವರನ್ನು ನಂಬಿ ನಾವು ಹೋಗಿದ್ದೇವೆ. ಮುಂದೆ ಬಿಎಸ್​ವೈ ನೇತೃತ್ವದಲ್ಲೇ ನಡೆದುಕೊಂಡು ಹೋಗುತ್ತೇವೆ. ಚಿಕ್ಕಪುಟ್ಟ ಸಮಸ್ಯೆ ಸರಿ ಹೋಗಲಿದೆ ಎಂದರು. ಚೀಲದಲ್ಲಿ ಹಣ ಹಂಚುತ್ತಿದ್ದಾರೆ ಎಂಬ ಡಿಕೆಶಿ ಆರೋಪಕ್ಕೆ ಪ್ರತಿಕ್ರಿಯಿಸಿ, ಅವರೇನು ಎಲೆ ಅಡಿಕೆ‌ ಕೊಡ್ತಿದ್ದಾರಾ? ಎಲೆ ಅಡಿಕೆ ಕೊಟ್ಟರೆ ಒಳ್ಳೆಯದು. ನಾವೇನು ಹಣ ಹಂಚುತ್ತಿಲ್ಲ. ನಾವು ಎರಡು ಕ್ಷೇತ್ರದಲ್ಲೂ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಪಚುನಾವಣೆಯಲ್ಲಿ ಗೆದ್ದು ಬೊಮ್ಮಾಯಿ ಕೈ ಬಲ ಆಗುತ್ತೆ: ಭೈರತಿ ಬಸವರಾಜ್

ಸಿಂದಗಿ, ಹಾನಗಲ್ ಉಪಚುನಾವಣೆಯಲ್ಲಿ ಗೆದ್ದು ಬೊಮ್ಮಾಯಿ ಕೈ ಬಲ ಆಗುತ್ತೆ ಎಂದು ಸಚಿವ ಭೈರತಿ ಬಸವರಾಜ್ ತಿಳಿಸಿದರು. ಎರಡೂ ಕ್ಷೇತ್ರಗಳಲ್ಲೂ ಜಯ ನಮ್ಮದೇ, ಇದರಲ್ಲಿ ಯಾವುದೇ ಸಂಶಯ ಬೇಡ. ಅಂದು ಬಿಎಸ್​ವೈ ಉಪಚುನಾವಣೆಯಲ್ಲಿ ಗೆಲುವು ಕಠಿಣ ಅಂತಾ ಹೇಳಿದ್ದರು. ಅದ್ರೆ ಇದೀಗ ಆ ವಾತವಾರಣ ಎರಡೂ ಉಪಚುನಾವಣೆಯಲ್ಲಿ ಇಲ್ಲ. ಸಿಂದಗಿ, ಹಾನಗಲ್ ಕ್ಷೇತ್ರದಲ್ಲಿ ಗೆದ್ದು ಬೊಮ್ಮಾಯಿಯವರ ಕೈ ಬಲ ಆಗಲಿದೆ ಎಂದು ಭವಿಷ್ಯ ನುಡಿದರು.

ಇದನ್ನೂ ಓದಿ: ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಕೊಲೆ: ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಮತದಾರರಿಗೆ ಚೀಲದಲ್ಲಿ ಹಣ ಹಂಚುತ್ತಿದ್ದಾರೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ಹಣ ಹಂಚೋದು ಕಾಂಗ್ರೆಸ್ ಸಂಸ್ಕೃತಿ. ನಾವೆಲ್ಲೂ ಹಣ ಹಂಚಿಲ್ಲ ಎಂದು ಸಮಜಾಯಿಷಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.