ETV Bharat / city

ಜಮೀನು ವಿವಾದ: ದಾವಣಗೆರೆಯ ಎರಡು ಗ್ರಾಮದವರ ನಡುವೆ ಮಾರಾಮಾರಿ

author img

By

Published : Oct 28, 2021, 11:44 AM IST

Updated : Oct 28, 2021, 12:38 PM IST

fight between people of 2 villages of davanagere
2 ಗ್ರಾಮದವರ ನಡುವೆ ಮಾರಾಮಾರಿ!

ಜಮೀನು ವಿವಾದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕಂಚಿಕೊಪ್ಪ ಹಾಗೂ ಹೊನ್ನಾಳಿಯ ತುಗ್ಗಲಹಳ್ಳಿ ಗ್ರಾಮಸ್ಥರ ನಡುವೆ ಗಲಾಟೆ ನಡೆದಿದೆ.

ದಾವಣಗೆರೆ: ಜಮೀನು ವಿವಾದಕ್ಕೆ ಎರಡು ಗ್ರಾಮಗಳ ಜನರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕತ್ತಿ, ದೊಣ್ಣೆ, ಕುಡುಗೋಲುಗಳಿಂದ ಪರಸ್ಪರ ಸಿನಿಮೀಯ ರೀತಿ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದೆ.

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕಂಚಿಕೊಪ್ಪ ಹಾಗೂ ಹೊನ್ನಾಳಿಯ ತುಗ್ಗಲಹಳ್ಳಿ ಗ್ರಾಮಸ್ಥರ ನಡುವೆ ಈ ಗಲಾಟೆ ನಡೆದಿದೆ. ಕಂಚಿಕೊಪ್ಪ ಗ್ರಾಮದ 30 ದಲಿತ ಕುಟುಂಬಗಳು ತುಗ್ಗಲಹಳ್ಳಿ ಗ್ರಾಮದ ಬಳಿ ಇರುವ ಸರ್ವೇ ನಂಬರ್ 29-30ರಲ್ಲಿನ 40 ಎಕರೆ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದು, ಸಾಗುವಳಿ ಚೀಟಿ, ಪಹಣಿ ಪತ್ರ ಕೂಡ ನೀಡಲಾಗಿದೆ. ಈ ಜಮೀನು ಖಾತೆ ಮಾಡಿಕೊಡುವಂತೆ ಕಂಚಿಕೊಪ್ಪ ಗ್ರಾಮದ ದಲಿತ ಕುಟುಂಬಗಳು ಕೋರ್ಟ್ ಮೊರೆ ಹೋಗಿದ್ದವು. ಅದ್ರೆ ಇದೇ ಸಂದರ್ಭದಲ್ಲಿ ತುಗ್ಗಲಹಳ್ಳಿ ಗ್ರಾಮದ ಕೆಲವರು, ದಲಿತರು ಉಳುಮೆ ಮಾರುತ್ತಿರುವ ಜಮೀನು ನಮಗೆ ಸೇರಿದ್ದು ಎಂದು ತಕರಾರು ತೆಗೆದಿದ್ದಾರೆ.

ದಾವಣಗೆರೆಯ ಎರಡು ಗ್ರಾಮದವರ ನಡುವೆ ಮಾರಾಮಾರಿ

ನಿನ್ನೆ ಸಂಜೆ ಏಕಾಏಕಿ ಜಮೀನಿನಲ್ಲಿದ್ದ ಬೆಳೆಯನ್ನು ನಾಶ ಮಾಡಿದ್ದರು. ಇದರಿಂದ ಮಾತಿನ ಚಕಮಕಿಯಾಗಿ, ಬಳಿಕ ಎರಡೂ ಗ್ರಾಮಗಳ ಜನರ ನಡುವೆ ಕುಡುಗೋಲು, ದೊಣ್ಣೆಗಳಿಂದ ಪರಸ್ಪರ ಹಲ್ಲೆ ನಡೆದಿದೆ. ಹಲ್ಲೆಗೊಳಗಾದ ಕಂಚಿಕೊಪ್ಪದ 13 ಜನರು ಆಸ್ಪತ್ರೆಗೆ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಹೊನ್ನಾಳಿ ಸಿಪಿಐ ದೇವರಾಜ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ಮಗುವನ್ನೆತ್ತಿಕೊಂಡು ಕೆಳಗೆ ಕುಳಿತು ಮೆಟ್ರೋ ಪ್ರಯಾಣ: ಮಾನವೀಯತೆ ಮರೆತ ಮಂದಿಗೆ ಸುಧಾಮೂರ್ತಿ ಸಂದೇಶ

ಹಲ್ಲೆಗೊಳಗಾದವರು ಹೊನ್ನಾಳಿ ಠಾಣೆಗೆ ದೂರು ನೀಡಿದ್ದಾರೆ. ತುಗ್ಗಲಹಳ್ಳಿ ಗ್ರಾಮದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Last Updated :Oct 28, 2021, 12:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.