ETV Bharat / city

ದಾವಣಗೆರೆ ದುರ್ಗಾಂಬಿಕಾ ಜಾತ್ರೆ: ರಾಷ್ಟ್ರೀಯ ಮಟ್ಟದ ಕುರಿಕಾಳಗ

author img

By

Published : Mar 11, 2022, 10:59 PM IST

durgamba Fair Sheep Fight in davanagere
ದಾವಣಗೆರೆ ದುರ್ಗಾಂಭಿಕ ಜಾತ್ರೆ: ರಾಷ್ಟ್ರೀಯ ಮಟ್ಟದ ಕುರಿಕಾಳಗ

ದುರ್ಗಾಂಬಿಕಾ ಜಾತ್ರೆಯ ಕುರಿಕಾಳಗದಲ್ಲಿ 600 ಕುರಿಗಳು ಪಾಲ್ಗೊಂಡಿದ್ದವು. ಈ ಸ್ಪರ್ಧೆಗೆ ಆಂಧ್ರಪ್ರದೇಶ, ಮಹಾರಾಷ್ಟ್ರ, ಉತ್ತರಪ್ರದೇಶ ರಾಜ್ಯಗಳಿಂದ ಟಗರುಗಳನ್ನು ಕರೆತರಲಾಗಿತ್ತು.

ದಾವಣಗೆರೆ: ಎರಡು ವರ್ಷಗಳಿಗೊಮ್ಮೆ ನಡೆಯುವ ದುರ್ಗಾಂಬಿಕಾ ಜಾತ್ರೆ ಪ್ರಯುಕ್ತ ಮಧ್ಯ ಕರ್ನಾಟಕದ‌ ಕೇಂದ್ರ ಬಿಂದು ದಾವಣಗೆರೆಯಲ್ಲಿ ನಡೆಯುವ ರಾಷ್ಟ್ರಮಟ್ಟದ ಕುರಿಕಾಳಗದಲ್ಲಿ ಅಕ್ಕಪಕ್ಕದ ರಾಜ್ಯಗಳ ಟಗರುಗಳು ಸ್ಪರ್ಧಿಸಿದ್ದವು.


ಜಿಲ್ಲೆಯ ದೇವರಾಜ್ ಅರಸು ಕ್ರೀಡಾಂಗಣದಲ್ಲಿ ನಡೆದ ಟಗರು ಕಾಳಗದಲ್ಲಿ ಸರಿಸುಮಾರು 600 ಕುರಿಗಳು ಪಾಲ್ಗೊಂಡಿದ್ದವು. ಮರಿ ಟಗರು, ಎರಡು, ನಾಲ್ಕು, ಆರು ಹಾಗೂ ಕೊನೆಗೆ ಎಂಟು ಹಲ್ಲಿನಂತೆ ಒಟ್ಟು ಐದು ವಿಭಾಗದಲ್ಲಿ ಸ್ಪರ್ಧೆಗಳು ನಡೆಯುತ್ತವೆ. ಇದರಲ್ಲಿ ಆರು ಮತ್ತು ಎಂಟು ಹಲ್ಲಿನ ಟಗರುಗಳ ಕಾಳಗ ಮಾತ್ರ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿರುತ್ತವೆ.

ಐದು ವಿಭಾಗದಲ್ಲಿ ಗೆದ್ದ ಟಗರುಗಳಿಗೆ ಪ್ರಥಮ ಮತ್ತು ದ್ವಿತೀಯ ಬಹುಮಾನ ನೀಡಲಾಗುತ್ತದೆ. ಆರು ಮತ್ತು ಎಂಟು ಹಲ್ಲಿನ ಟಗರುಗಳಿಗೆ ಮೊದಲ ಸ್ಥಾನಕ್ಕೆ 2 ಲಕ್ಷ, ಎರಡನೇ ಬಹುಮಾನ 1 ಲಕ್ಷ, ಮೂರನೇ ಸ್ಥಾನಕ್ಕೆ 50 ಸಾವಿರ ರೂಪಾಯಿ ನೀಡಿ ಗೌರವಿಸಲಾಗಿದೆ.

ಇದನ್ನೂ ಓದಿ: ಮೇ 4 ರಿಂದ ಸ್ಯಾಂಡಲ್‍ವುಡ್ ಕ್ರಿಕೆಟ್ ಕಪ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.