ETV Bharat / city

ಬೆಳ್ಳಂಬೆಳಗ್ಗೆ ಸಿಟಿ ರೌಂಡ್ಸ್ ಹಾಕಿದ ಭೈರತಿ ಬಸವರಾಜ್: ಅಧಿಕಾರಿಗಳಿಗೆ ಮೈ ಚಳಿ ಬಿಡಿಸಿದ ಸಚಿವ

author img

By

Published : Jan 11, 2021, 9:41 AM IST

ದಾವಣಗೆರೆ ನಗರ ರೌಂಡ್ಸ್ ಹಾಕಿದ ಭೈರತಿ ಬಸವರಾಜ್
ದಾವಣಗೆರೆ ನಗರ ರೌಂಡ್ಸ್ ಹಾಕಿದ ಭೈರತಿ ಬಸವರಾಜ್

ಇಂದು ಮಂಜಾನೆ ಸಚಿವ ಭೈರತಿ ಬಸವರಾಜ್ ಅವರು ದಾವಣಗೆರೆ ನಗರದ ಬನಶಂಕರಿ ಬಡಾವಣೆ, ವಿದ್ಯಾನಗರದ ಎಲ್ಐಸಿ ಬಡಾವಣೆ ಸೇರಿದಂತೆ ಕುಂದವಾಡ ಕೆರೆಯ ಬಾಲಾಜಿ ನಗರದ ಬಳಿ ಭೇಟಿ ನೀಡಿ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.

ದಾವಣಗೆರೆ: ಬೆಳ್ಳಂಬೆಳಗ್ಗೆ ನಗರಾಭಿವೃದ್ಧಿ ಹಾಗೂ ದಾವಣಗೆರೆ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಸಿಟಿ ರೌಂಡ್ಸ್ ಹಾಕಿ ಮುಂಜಾನೆ‌ ನಿದ್ದೆ ಮಂಪರಿನಲ್ಲಿದ್ದ ಅಧಿಕಾರಿಗಳ ಮೈ ಚಳಿ ಬಿಡಿಸಿದರು.

ದಾವಣಗೆರೆ ನಗರ ರೌಂಡ್ಸ್ ಹಾಕಿದ ಭೈರತಿ ಬಸವರಾಜ್

ಇಂದು ಮಂಜಾನೆ ಸಚಿವ ಭೈರತಿ ಬಸವರಾಜ್ ಅವರು ನಗರದ ಬನಶಂಕರಿ ಬಡಾವಣೆ, ವಿದ್ಯಾನಗರದ ಎಲ್ಐಸಿ ಬಡಾವಣೆ ಸೇರಿದಂತೆ ಕುಂದವಾಡ ಕೆರೆಯ ಬಾಲಾಜಿ ನಗರದ ಬಳಿ ಭೇಟಿ ನೀಡಿ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.

ದಾವಣಗೆರೆ ನಗರದ ಶಾಮನೂರು ದ್ವಿಮುಖ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಕೆಂಡಾಮಂಡಲರಾದ ಸಚಿವ ಭೈರತಿ ಬಸವರಾಜ್, ಪಾಲಿಕೆ ಆಯುಕ್ತ ವಿಶ್ವನಾಥ್ ಅವರನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಅದೇ ರಸ್ತೆಯ ಇಕ್ಕೆಲಗಳಲ್ಲಿ ರಾಶಿ ರಾಶಿ ಕಸ ಹಾಗೂ ಮದ್ಯದ ಬಾಟಲ್​ಗಳನ್ನು ಕಂಡು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

ಪಾಲಿಕೆ‌ ಆಯುಕ್ತ ವಿಶ್ವನಾಥ್ ಅವರಿಗೆ, "ರೀ ಈ ಕೆಲಸವನ್ನು ಯಾರು ಮಾಡಬೇಕು, ಇನ್ನೂ ಕಾಮಗಾರಿ ಮುಗಿಸದಿದ್ದರೆ ಗುತ್ತಿಗೆದಾರನಿಗೆ ನೋಟಿಸ್ ನೀಡಿ. ಮುಂದಿನ ದಿನ ಮತ್ತೆ ನಾನು ಇಲ್ಲಿಗೆ ಬಂದಾಗ ಎಲ್ಲಾ ಸ್ಮಾರ್ಟ್ ಸಿಟಿ ಕಾಮಗಾರಿಗಳು ಪೂರ್ಣಗೊಂಡಿರಬೇಕು" ಎಂದು ಅಧಿಕಾರಿಗಳಿಗೆ ಗಡುವು ನೀಡಿದರು. ಈ ವೇಳೆ ಸಂಸದ ಜಿ.ಎಂ. ಸಿದ್ದೇಶ್ವರ್, ಮೇಯರ್ ಅಜಯ್ ಕುಮಾರ್ ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.