ETV Bharat / city

ಶಿವಮೊಗ್ಗ ಯುವಕನ ಕೊಲೆ ಪ್ರಕರಣ.. ತಪ್ಪಿತಸ್ಥರು ಯಾರೇ ಇರಲಿ ಅವರನ್ನ ಗಲ್ಲಿಗೇರಿಸಿ.. ಸಿದ್ದರಾಮಯ್ಯ

author img

By

Published : Feb 21, 2022, 12:21 PM IST

siddaramaiah reaction
ಸಿದ್ದರಾಮಯ್ಯ ಪ್ರತಿಕ್ರಿಯೆ

ಭಾನುವಾರ ರಾತ್ರಿ ಶಿವಮೊಗ್ಗದಲ್ಲಿ ನಡೆದ ಯುವಕನ ಕೊಲೆ ಪ್ರಕಣದಲ್ಲಿ ಯಾರೇ ಇರಲಿ, ಯಾವುದೇ ಸಂಘಟನೆ ಇದ್ರೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ..

ಬೆಂಗಳೂರು : ಗೃಹ ಸಚಿವರು ಶಿವಮೊಗ್ಗ ಜಿಲ್ಲೆಯವರು. ಸರ್ಕಾರ ಜವಾಬ್ದಾರರಲ್ವಾ? ಹೋಮ್ ಮಿನಿಸ್ಟರ್, ಈಶ್ವರಪ್ಪ ಜವಾಬ್ದಾರರಲ್ವಾ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ವಿಧಾನಸೌಧದಲ್ಲಿ ಶಿವಮೊಗ್ಗ ಕೊಲೆ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ನಾವು ಅಹಿಂಸೆಯಲ್ಲಿ ನಂಬಿಕೆ ಇಟ್ಟಿರೋರು. ಯಾರದ್ದೇ ಕೊಲೆಯಾದ್ರೂ ಕಠಿಣ ಶಿಕ್ಷೆ ಆಗಬೇಕು. ಕೊಲೆ ಖಂಡಿಸ್ತೇವೆ.

ಕಾರ್ಯಕರ್ತ ಹರ್ಷ ಅನ್ನೋ ಯುವಕನ ಕೊಲೆಯಾಗಿದೆ. ಕಾರಿನಲ್ಲಿ ಬಂದು ಕೊಲೆ ಮಾಡಲಾಗಿದೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ. ತಪ್ಪಿತಸ್ಥರು ಯಾರೇ ಇರಲಿ, ಯಾವುದೇ ಸಂಘಟನೆ ಇದ್ರೂ ಕಠಿಣ ಕ್ರಮ ತೆಗೆದುಕೊಳ್ಳಲಿ‌ ಎಂದು ಆಗ್ರಹಿಸಿದರು.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿರುವುದು..

ಇಂತಹ ಪ್ರಕರಣದಲ್ಲಿ ಅರೆಸ್ಟ್ ಮಾಡಿ ಮೊದಲು. ತಪ್ಪಿತಸ್ಥರು ಯಾರು ಅಂತಾ ಮೊದಲು ಪತ್ತೆ ಮಾಡಲಿ. ಕಾಂಗ್ರೆಸ್, SDPI ಅಂತಾ ಹೇಳಬಾರದು. ಯಾರೇ ಆದ್ರೂ ಪತ್ತೆ ಹಚ್ಚಿ ಶಿಕ್ಷೆ ನೀಡಲಿ ಎಂದು ಒತ್ತಾಯಿಸಿದರು.

ಅಧಿವೇಶನ ಸಮಯ ವ್ಯರ್ಥ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸದನ ನಡೆಯುತ್ತಿದೆ ಅಂತಾ ಗೊತ್ತಿದ್ರೂ ಈ ಪ್ರಶ್ನೆ ಕೇಳಬಾರದು. ರಾಷ್ಟ್ರ ಧ್ವಜಕ್ಕೆ ಅಪಮಾನ ಆಗಿದೆ. ಹೇಗಿದ್ರೂ ಧರಣಿ ಮಾಡ್ತಾರೆ ಅಂತಾ ಗೊತ್ತಿದೆ ಅವರಿಗೆ.

ಬಿಟ್ ಕಾಯಿನ್, ಬೇರೆ ಬೇರೆ ವಿಚಾರ ಚರ್ಚೆ ಮಾಡಬಹುದಿತ್ತು. ಇಡೀ ದೇಶದ ಗೌರವದ ಸಂಕೇತಕ್ಕೆ ಅವಮಾನ ಮಾಡಿದಾಗ ಸುಮ್ಮನೆ ಕೂರಲು ಆಗಲ್ಲ. ರಾಜೀನಾಮೆ ಕೊಡಲು ಸಾಧ್ಯವಿಲ್ಲ ಅಂತಾ ಕೂತಿದ್ದಾರೆ ಎಂದು ಸಮರ್ಥಸಿಕೊಂಡರು.

ಜೆಡಿಎಸ್ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರು ಅಸೆಂಬ್ಲಿಗೆ ಸರಿಯಾಗಿ ಬರಲ್ಲ. ಅವರು ಪ್ರತಿಭಟನೆ ಮಾಡಲಿ, ನಮ್ಮ ತಕರಾರು ಇಲ್ಲ. ಅವರಿಗೆ ಅವಕಾಶ ತಪ್ಪಿಸಬೇಕು ಅಂತಾ ನಾವು ಮಾಡಿಲ್ಲ. ಅಧಿಕೃತ ವಿರೋಧ ಪಕ್ಷ ನಾವು, ನಾವು ಚರ್ಚೆ ಮಾಡುತ್ತಿದ್ದೇವೆ ಎಂದರು.

(ಇದನ್ನೂ ಓದಿ: ನಾಲ್ಕನೇ ಮಹಡಿಯಲ್ಲಿ ಕಿಟಕಿ ಸ್ವಚ್ಛಗೊಳಿಸಲು ಮಹಿಳೆಯ ದುಸ್ಸಾಹಸ ನೋಡಿ: ವಿಡಿಯೋ ವೈರಲ್​)

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.