ETV Bharat / city

ಮಾದಕ ವಸ್ತು ಸೇವನೆ ದೃಢ: ಇಂದಿರಾನಗರದ ವಿಷ್ಣು ಭಟ್ ನಿವಾಸದ ಮೇಲೆ ಪೊಲೀಸ್ ದಾಳಿ

author img

By

Published : Nov 7, 2021, 10:56 PM IST

Updated : Nov 8, 2021, 6:18 AM IST

ಬಂಧನಕ್ಕೆ ಒಳಗಾಗಿರುವ ಹ್ಯಾಕರ್​, ಬಿಟ್​ ಕಾಯಿನ್​ ಕಿಂಗ್​ ಶ್ರೀಕಿ ಅಲಿಯಾಸ್​ ಶ್ರೀಕೃಷ್ಣ ಮತ್ತು ವಿಷ್ಣು ಭಟ್​​​ ಮಾದಕ ದ್ರವ್ಯ ಸೇವಿಸಿರುವುದು ಪರೀಕ್ಷೆ ವೇಳೆ ದೃಢವಾಗಿದೆ. ತಕ್ಷಣ ಎಚ್ಚೆತ್ತ ಜೀವನ್‌ಭೀಮಾನಗರ ಪೊಲೀಸರು ಇಂದಿರಾನಗರದಲ್ಲಿರುವ ವಿಷ್ಣುಭಟ್ ಮನೆ ಮೇಲೆ ದಾಳಿ ನಡೆಸಿದ್ದಾರೆ.

police-raid-vishnubhat-residence
ವಿಷ್ಣುಭಟ್

ಬೆಂಗಳೂರು: ಪಂಚತಾರಾ ಹೋಟೆಲಿನ ಭದ್ರತಾ ಸಿಬ್ಬಂದಿ ಹಾಗೂ ವ್ಯವಸ್ಥಾಪಕರ ಮೇಲೆ ಹಲ್ಲೆ ಮಾಡಿರುವ ಆರೋಪದಡಿ ಬಂಧನವಾಗಿರುವ ವೆಬ್‌ಸೈಟ್ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹಾಗೂ ಭೀಮಾ ಜ್ಯುವೆಲ್ಲರಿ ಮಳಿಗೆಯ ಮಾಲೀಕರ ಪುತ್ರ ವಿಷ್ಣು ಭಟ್ ಮಾದಕ ವಸ್ತು ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢವಾಗಿದೆ ಎನ್ನುವ ಮಾಹಿತಿ ದೊರೆತಿದೆ.

ಶ್ರೀಕಿ ವಾಸವಿದ್ದ ಹೋಟೆಲ್ ಭದ್ರತಾ ಸಿಬ್ಬಂದಿ ಹಾಗೂ ವ್ಯವಸ್ಥಾಪಕರ ಮೇಲೆ ಹಲ್ಲೆ ನಡೆಸಿದ ಸಂಬಂಧ ಶ್ರೀಕಿ ಹಾಗೂ ವಿಷ್ಣು ಭಟ್‌ನನ್ನು ಶನಿವಾರ ಜೀವನ್‌ಭೀಮಾನಗರ ಪೊಲೀಸರು ಬಂಧಿಸಿದ್ದರು. ಮದ್ಯ ಸೇವಿಸಿ ನಶೆಯಲ್ಲಿದ್ದ ಇಬ್ಬರನ್ನೂ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿತ್ತು. ಪರೀಕ್ಷೆಯ ವರದಿಯಲ್ಲಿ ಇಬ್ಬರು ಮಾದಕ ವಸ್ತು ಸೇವಿಸಿರುವುದು ತಿಳಿದುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಷ್ಣುಭಟ್​ ಮನೆ ಮೇಳೆ ಪೊಲೀಸ್​​ ದಾಳಿ:

ಮಾದಕ ವಸ್ತು ಸೇವಿಸಿರುವುದು ದೃಢವಾಗುತ್ತಿದ್ದಂತೆ ಜೀವನ್‌ಭೀಮಾನಗರ ಪೊಲೀಸರು ಇಂದಿರಾನಗರದಲ್ಲಿರುವ ವಿಷ್ಣುಭಟ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿ ಆಲ್ಪಜೋಲಂ ಮಾದಕ ವಸ್ತು ಗಾಂಜಾ ಪೌಡರ್ ತುಂಬಿರುವ ಐದು ಸಿಗರೇಟ್‌ಗಳು ಹಾಗೂ ಗಾಂಜಾ ಪೌಡರ್ ಇದ್ದ ಪ್ಯಾಕೆಟ್ ಕೂಡ ಪತ್ತೆಯಾಗಿದೆ. ಶ್ರೀಕಿ ವಾಸವಿದ್ದ ಹೋಟೆಲ್ ಕೊಠಡಿಯಲ್ಲಿ ಯಾವುದೇ ಮಾದಕ ವಸ್ತು ಪತ್ತೆಯಾಗಿಲ್ಲ. ವಿಷ್ಣುಭಟ್ ನಗರದಲ್ಲಿ ವಾಸವಿರುವ ವಿದೇಶಿ ಪ್ರಜೆಗಳಿಂದ ಮಾದಕವಸ್ತು ತರಿಸಿಕೊಳ್ಳುತ್ತಿದ್ದ ಎನ್ನಲಾಗ್ತಿದೆ.

ಯಾರು ವಿಷ್ಣುವಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದರು ಎಂಬುದು ನಿಖರವಾಗಿ ತಿಳಿದಿಲ್ಲ. ಈ ಸಂಬಂಧ ವಿಷ್ಣುಭಟ್​ನನ್ನು ಕೋರ್ಟ್ ಮುಂದೆ ಹಾಜರುಪಡಿಸಿ ಐದು ದಿನಗಳ ಕಾಲ ವಶಕ್ಕೆ ಪಡೆದು ಮುಂದಿನ ತನಿಖೆ ನಡೆಸುತ್ತೇವೆ. ಈ ವೇಳೆ ಮಾದಕ ವಸ್ತು ಹೇಗೆ ಬಂತು, ಯಾರು ಸರಬರಾಜು ಮಾಡುತ್ತಿದ್ದರು. ಈತನಿಂದ ಯಾರು ಮಾದಕ ವಸ್ತು ಪಡೆಯುತ್ತಿದ್ದರು, ಈತನ ಸಂಪರ್ಕದಲ್ಲಿ ಇನ್ನೂ ಯಾರಿದ್ದಾರೆ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನಶೆಯಲ್ಲಿರುವ ಆರೋಪಿಗಳು:

ಶ್ರೀಕೃಷ್ಣ ಹಾಗೂ ವಿಷ್ಣುಭಟ್ ಇಬ್ಬರು ಮಾದಕ ವಸ್ತುವಿನ ಮತ್ತಿನಲ್ಲಿರುವುದರಿಂದ ವಿಚಾರಣೆಗೆ ಸಹಕರಿಸುತ್ತಿಲ್ಲ. ನಶೆಯಿಂದ ಹೊರಬಾರದ ಕಾರಣ ನ್ಯಾಯಾಲಯಕ್ಕೂ ಒಪ್ಪಿಸಿಲ್ಲ. ನಶೆಯಿಂದ ಹೊರಬಂದ ಬಳಿಕ ವಿಷ್ಣುಭಟ್ ಕೋರ್ಟ್‌ಗೆ ಹಾಜರುಪಡಿಸಿ ಐದು ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು. ಆದರೆ ಶ್ರೀಕಿ ಕೊಠಡಿಯಲ್ಲಿ ಯಾವುದೇ ಮಾದಕ ವಸ್ತು ಕಂಡುಬಾರದ ಕಾರಣ ಆತನನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹ್ಯಾಕರ್​ ಶ್ರೀಕಿ ನನಗೂ ಸಂಬಂಧವಿಲ್ಲ, ವಿಷ್ಣು ಹೊಸ ಕಥೆ: ಹೋಟೆಲ್ ಒಳಗೆ ಹೋದಾಗ ಲಿಫ್ಟ್ ಹತ್ತಿ ಅಭಯ್ ಇದ್ದ ರೂಂ ಕಡೆ ಹೊರಟಿದ್ದೆ, ಆದರೆ ನಶೆಯಲ್ಲಿದ್ದ ಕಾರಣ ಅಭಯ್ ಇದ್ದ ರೂಂ ಮಿಸ್ಸಾಗಿ ಶ್ರೀಕಿ ರೂಂ ಬಾಗಿಲು ತಟ್ಟಿದೆ. ಲಿಫ್ಟ್‌ನಲ್ಲೇ ಮ್ಯಾನೇಜರ್ ಮೇಲೆ ಹಲ್ಲೆ ಮಾಡಿದಕ್ಕೆ ಹೋಟೆಲ್ ಸಿಬ್ಬಂದಿ ಹೊಯ್ಸಳಕ್ಕೆ ಕರೆ ಮಾಡಿದ್ದರು ಎಂದು ವಿಷ್ಣು ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಪೊಲೀಸರು ಹೋಗೋದಕ್ಕೂ ಶ್ರೀಕಿ ಬಾಗಿಲು ತೆಗೆಯೋದಕ್ಕೂ ಒಂದೇ ಟೈಮಿಂಗ್ಸ್ ಆಗಿತ್ತು. ಈ ವೇಳೆ ಶ್ರೀಕಿ‌ ಹಾಗೂ ನನ್ನ ನಡುವೆ ಮಾತಿಗೆ ಮಾತು‌ ಬೆಳೆದು ತಳ್ಳಾಟವಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಶ್ರೀಕಿ ಹಾಗೂ ನನ್ನನ್ನು ಠಾಣೆಗೆ ಕರೆತಂದರು ಎಂದು ವಿಷ್ಣು ಭಟ್​ ವಿಚಾರಣೆ ವೇಳೆ ಎಸಿಪಿ ಕುಮಾರ್ ಮುಂದೆ ಹೇಳಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ.

Last Updated :Nov 8, 2021, 6:18 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.