ETV Bharat / city

6 ಕಂಟೈನರ್​ಗಳಲ್ಲಿ‌ 120 ಟನ್ ಪ್ರಾಣವಾಯು ಹೊತ್ತು ರಾಜ್ಯಕ್ಕೆ ಬಂದ ಆಕ್ಸಿಜನ್ ಎಕ್ಸ್‌ಪ್ರೆಸ್‌

author img

By

Published : May 23, 2021, 4:03 PM IST

ಆಕ್ಸಿಜನ್ ಎಕ್ಸ್‌ಪ್ರೆಸ್‌
ಆಕ್ಸಿಜನ್ ಎಕ್ಸ್‌ಪ್ರೆಸ್‌

9ನೇ ಹಂತದ ಆಕ್ಸಿಜನ್ ಟ್ಯಾಂಕರ್​​ ಹೊತ್ತ ರೈಲು ಜಾರ್ಖಂಡ್​ನ ಟಾಟಾ ನಗರದಿಂದ ಮೇ 22ರಂದು ಪ್ರಯಾಣ ಆರಂಭಿಸಿತ್ತು. ಇಂದು ಬೆಳಗ್ಗೆ ನಗರದ ವೈಟ್ ಫೀಲ್ಡ್ ರೈಲ್ವೆ ನಿಲ್ದಾಣಕ್ಕೆ ಬಂದಿದೆ. ತ್ವರಿತ ಸಾಗಾಣಿಕೆಗಾಗಿ 'ಗ್ರೀನ್​ ಕಾರಿಡಾರ್​​' ವ್ಯವಸ್ಥೆ ಮಾಡಲಾಗಿತ್ತು.

ಬೆಂಗಳೂರು: ಒಂಭತ್ತನೇ ಹಂತದಲ್ಲಿ 120 ಟನ್ ಆಕ್ಸಿಜನ್​​ಅನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಕಳುಹಿಸಿಕೊಟ್ಟಿದ್ದು, ಆರು ಆಮ್ಲಜನಕ ಕಂಟೈನರ್​​ಗಳನ್ನ ಹೊತ್ತು ತಂದ ರೈಲು ಇಂದು ಬೆಳಗ್ಗೆ 9 ಗಂಟೆಗೆ ನಗರವನ್ನು ತಲುಪಿದೆ.

9ನೇ ಹಂತದ ಆಕ್ಸಿಜನ್ ಟ್ಯಾಂಕರ್​​ ಹೊತ್ತ ರೈಲು ಜಾರ್ಖಂಡ್​ನ ಟಾಟಾ ನಗರದಿಂದ ಮೇ 22ರಂದು ಪ್ರಯಾಣ ಆರಂಭಿಸಿತ್ತು. ಇಂದು ಬೆಳಗ್ಗೆ ನಗರದ ವೈಟ್ ಫೀಲ್ಡ್ ರೈಲ್ವೆ ನಿಲ್ದಾಣಕ್ಕೆ ಬಂದಿದೆ. ತ್ವರಿತ ಸಾಗಾಣಿಕೆಗಾಗಿ 'ಗ್ರೀನ್​ ಕಾರಿಡಾರ್​​' ವ್ಯವಸ್ಥೆ ಮಾಡಲಾಗಿತ್ತು.

6 ಕಂಟೈನರ್​ಗಳಲ್ಲಿ‌ 120 ಟನ್ ಪ್ರಾಣವಾಯು ಹೊತ್ತು ರಾಜ್ಯಕ್ಕೆ ಬಂದ ಆಕ್ಸಿಜನ್ ಎಕ್ಸ್‌ಪ್ರೆಸ್‌

ಇಲ್ಲಿಯವರೆಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ 1080 ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು ನೀಡಿದೆ. ಇದರಿಂದಾಗಿ ರಾಜ್ಯದಲ್ಲಿ ಆಕ್ಸಿಜನ್​​ ಕೊರತೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಸದ್ಯ ಯಾವುದೇ ಆಸ್ಪತ್ರೆಗಳಲ್ಲಿ ಪ್ರಾಣವಾಯು ಕೊರತೆ ಉಂಟಾಗದಂತೆ ರಾಜ್ಯ ಸರ್ಕಾರ ಕ್ರಮ ವಹಿಸಿದೆ.

ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ 1200 ಟನ್ ಆಮ್ಲಜನಕವನ್ನು ನೀಡುವಂತೆ ಕೇಂದ್ರಕ್ಕೆ ಆದೇಶ ನೀಡಿತ್ತು. ಕೋರ್ಟ್​​ ತೀರ್ಪಿನಂತೆ ಇದುವರೆಗೂ 1080 ಟನ್​​ಗಳಷ್ಟು ಆಕ್ಸಿಜನ್ ನೀಡಿದೆ. ಇನ್ನೂ ಬಾಕಿ 120 ಟನ್ ಆಕ್ಸಿಜನ್ ರಾಜ್ಯಕ್ಕೆ ಬರಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.