ETV Bharat / city

ಪುನೀತ್ ರಾಜ್‍ಕುಮಾರ್ ನುಡಿನಮನ ಕಾರ್ಯಕ್ರಮಕ್ಕೆ ಹೊರಟ ಶಕ್ತಿಧಾಮದ ಮಕ್ಕಳು

author img

By

Published : Nov 16, 2021, 2:34 PM IST

ಬೆಂಗಳೂರಿನ ಅರಮನೆ ಆವರಣದಲ್ಲಿ ಚಿತ್ರರಂಗದಿಂದ ಇಂದು(ನ.16) ಹಮ್ಮಿಕೊಂಡಿರುವ ನಟ ಪುನೀತ್​​ ರಾಜ್​ಕುಮಾರ್​ (Actor puneeth rajkumar) ಅವರಿಗೆ ನುಡಿ ನಮನ ಕಾರ್ಯಕ್ರಮಕ್ಕೆ ಮೈಸೂರಿನ ಶಕ್ತಿಧಾಮದ 150 ಮಕ್ಕಳು ಬೆಂಗಳೂರಿಗೆ ತೆರಳಿದರು..

punneth rajkumar tribute
ಪುನೀತ್ ರಾಜ್‍ಕುಮಾರ್ ನುಡಿನಮನ

ಮೈಸೂರು : ಬೆಂಗಳೂರಿನ ಅರಮನೆ ಆವರಣದಲ್ಲಿ ಚಿತ್ರರಂಗದಿಂದ ಇಂದು(ನ.16) ಹಮ್ಮಿಕೊಂಡಿರುವ ನಟ ಪುನೀತ್​​ ರಾಜ್​ಕುಮಾರ್​ ಅವರಿಗೆ ನುಡಿ ನಮನ ಕಾರ್ಯಕ್ರಮಕ್ಕೆ ಇಲ್ಲಿನ ಶಕ್ತಿಧಾಮದ ಮಕ್ಕಳು ಬೆಂಗಳೂರಿಗೆ ತೆರಳಿದರು.

ಮೈಸೂರಿನ ಶಕ್ತಿಧಾಮದ 150 ಮಕ್ಕಳು ಮೇಲ್ವಿಚಾರಕಿ ಸುಮನಾ ನೇತೃತ್ವದಲ್ಲಿ ಬೆಂಗಳೂರಿಗೆ ಖಾಸಗಿ ಬಸ್​ನಲ್ಲಿ ತೆರಳಿದರು. ಕಾರ್ಯಕ್ರಮದಲ್ಲಿ ಅಗಲಿದ ನಟ ಪುನೀತ್​ ರಾಜ್​ಕುಮಾರ್​ಗೆ ಮಕ್ಕಳು ಪ್ರಾರ್ಥನೆ ಸಲ್ಲಿಸಿದ್ದಾರೆ.

ಶಕ್ತಿಧಾಮ ಶಕ್ತಿಯಾಗಿದ್ದ ಪುನೀತ್ : ಮೈಸೂರಿನ ಊಟಿ ರಸ್ತೆಯ ಚಾಮುಂಡಿ ಬೆಟ್ಟದ ಪಕ್ಕದಲ್ಲಿರುವ ಶಕ್ತಿಧಾಮ ಅಶಕ್ತ ಮಹಿಳೆಯರ ಪುನರ್ವಸತಿ ಹಾಗೂ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಕೇಂದ್ರವಾಗಿದೆ. ಈ ಶಕ್ತಿಧಾಮವನ್ನು ದಿ.ಪಾರ್ವತಮ್ಮ ರಾಜ್‍ಕುಮಾರ್ ಹಾಗೂ ಇತರ ಸ್ಥಳೀಯರ ನೆರವಿನಿಂದ ಸ್ಥಾಪನೆ ಮಾಡಲಾಗಿದೆ.

ಪುನೀತ್ ರಾಜ್‍ಕುಮಾರ್ ನುಡಿನಮನ

ಡಾ.ರಾಜ್​ ಕುಟುಂಬವೇ ಕೇಂದ್ರದ ಜವಾಬ್ದಾರಿ ಹೊತ್ತಿದೆ. ನಟ ಶಿವರಾಜ್​ ಕುಮಾರ್​ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಧಾಮದ ಅಧ್ಯಕ್ಷರಾಗಿದ್ದಾರೆ. ಪುನೀತ್ ರಾಜ್‍ಕುಮಾರ್ ಅವರು ತಮ್ಮ ಜನ್ಮದಿನವನ್ನು ಹಲವಾರು ಬಾರಿ ಇಲ್ಲಿಯೇ ಆಚರಿಸಿಕೊಂಡಿದ್ದರು. ಅಲ್ಲದೇ, ಆರ್ಥಿಕ ನೆರವನ್ನೂ ಒದಗಿಸಿದ್ದರು.

ಇಲ್ಲಿನ ಮಕ್ಕಳಿಗೆ ಪುನೀತ್ ಎಂದರೆ ಎಲ್ಲಿಲ್ಲದ ಪ್ರೀತಿ. ಆ ದೃಷ್ಟಿಯಿಂದ ಮಕ್ಕಳನ್ನು ಇಂದು ಬೆಂಗಳೂರಿನಲ್ಲಿ ನಡೆಯಲಿರುವ ನುಡಿ ನಮನ ಕಾರ್ಯಕ್ರಮದಲ್ಲಿ ಪ್ರಾರ್ಥನೆ ಮಾಡಲು ಕರೆದುಕೊಂಡು ಹೋಗಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.