ETV Bharat / city

ಮಕ್ಕಳಿಗೂ ಲಸಿಕೆ : ಸೂಜಿ ನೋಡುತ್ತಲೇ ಕಣ್ಣೀರು ಹಾಕಿದ ಮಕ್ಕಳನ್ನು ಸಮಾಧಾನ ಪಡಿಸಿದ ಸಚಿವರು..

author img

By

Published : Mar 16, 2022, 1:23 PM IST

covid vaccination for children
12-14 ವರ್ಷದೊಳಗಿನ ಮಕ್ಕಳಿಗೂ ಲಸಿಕೆ

ಈಗಾಗಲೇ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇದೀಗ ಮತ್ತೊಂದು ಹಂತವಾಗಿ ಇಂದಿನಿಂದ 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕಾ ಡೋಸ್(ಬೂಸ್ಟರ್) ನೀಡಲಾಗ್ತಿದೆ..

ಬೆಂಗಳೂರು : ಇಂದಿನಿಂದ 12-14 ವರ್ಷದೊಳಗಿನ ಮಕ್ಕಳಿಗೆ ಕಾರ್ಬೆವ್ಯಾಕ್ಸ್ ಲಸಿಕೆ ನೀಡಲಾಗುವುದು. ಇಂದು ಶಿವಾಜಿನಗರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಸಂಸ್ಥೆಯಲ್ಲಿ ಲಸಿಕಾಕರಣ ಕಾರ್ಯಕ್ರಮವನ್ನು ಸಚಿವ ಸುಧಾಕರ್, ನಾಗೇಶ್ ಉದ್ಘಾಟಿಸಿದರು.‌

ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದ ಶಾಲಾ ಮಕ್ಕಳು ಸೂಜಿ ನೋಡುತ್ತಲೇ ಭಯ ಪಟ್ಟು ಕಣ್ಣೀರು ಹಾಕಿದ ಘಟನೆಯೂ ನಡೆಯಿತು. ನಂತರ ಇಬ್ಬರು ಸಚಿವರು ಮಕ್ಕಳನ್ನು ಸಮಾಧಾನಪಡಿಸಿ ಬಳಿಕ ಲಸಿಕೆಯನ್ನು ಕೊಡಿಸಿದರು. ಬೆಂಗಳೂರು ಉತ್ತರ ವಲಯದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಧನುಷ್ ಎಸ್.ಎಂ ಎಂಬ ವಿದ್ಯಾರ್ಥಿಯು ಮೊದಲ ಲಸಿಕೆಯನ್ನು ಪಡೆದುಕೊಂಡರು.

ಈಗಾಗಲೇ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇದೀಗ ಮತ್ತೊಂದು ಹಂತವಾಗಿ ಇಂದಿನಿಂದ 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕಾ ಡೋಸ್(ಬೂಸ್ಟರ್) ನೀಡಲಾಗ್ತಿದೆ.

12-14 ವರ್ಷದೊಳಗಿನ ಮಕ್ಕಳಿಗೂ ಲಸಿಕಾ ಅಭಿಯಾನದ ಕುರಿತಂತೆ ಸಚಿವದ್ವಯರು ಮಾತನಾಡಿರುವುದು..

ಲಸಿಕಾಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತಾನಾಡಿದ ಶಿಕ್ಷಣ ಸಚಿವ ನಾಗೇಶ್, ದೇಶದ ಎಲ್ಲ ಪ್ರಜೆಗಳಿಗೂ ಲಸಿಕೆ ನೀಡುತ್ತೇವೆಂದು ಪ್ರಧಾನಿ ಮೋದಿ ಭರವಸೆ ನೀಡಿದ್ದರು. ಹಾಗೆಯೇ ಎಲ್ಲರಿಗೂ ಉಚಿತ ಲಸಿಕೆ ನೀಡಲಾಗುತ್ತಿದೆ. ಎಲ್ಲ ಶಾಲಾ-ಕಾಲೇಜು ಹಂತದಲ್ಲಿ ಇನ್ನು ಮೂರು ದಿನಗಳಲ್ಲಿ ಲಸಿಕಾಕರಣ ಆರಂಭವಾಗಲಿದೆ.

ಶಾಲೆಗೆ ಬರದ ಮಕ್ಕಳಿಗೆ ಅವರು ಇದ್ದಲ್ಲಿಗೆ ಹೋಗಿ ವ್ಯಾಕ್ಸಿನ್ ನೀಡಲಾಗುವುದು.‌ ಇದಕ್ಕಾಗಿ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆದ ಕೂಡಲೇ ಶಾಲಾ-ಕಾಲೇಜುಗಳಲ್ಲಿ ಲಸಿಕೆ ನೀಡಲು ಶುರು ಮಾಡುತ್ತೇವೆಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಮುಂದುವರಿದ ಕೊರೊನಾ ಹೋರಾಟ.. ಇಂದಿನಿಂದ ದೇಶ್ಯಾದ್ಯಂತ 12 ರಿಂದ 14 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ

ಬಳಿಕ ಮಾತನಾಡಿದ ಸಚಿವ ಸುಧಾಕರ್, ಲಸಿಕೆಗೆ ಬಹಳ ನಿರೀಕ್ಷೆ, ಬೇಡಿಕೆ ಇತ್ತು. ಕಾರ್ಬೆವ್ಯಾಕ್ಸ್ ಲಸಿಕೆಯನ್ನು ಅನ್ನು ಮಕ್ಕಳಿಗೆ ನೀಡಿ ಲಸಿಕಾಕರಣಕ್ಕೆ ಚಾಲನೆ ನೀಡಿದ್ದೇವೆ. 20 ಲಕ್ಷ ಮಕ್ಕಳು ಈ ವಯೋಮಿತಿಯಲ್ಲಿದ್ದಾರೆ. 12 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡೋ ವಿಚಾರವಾಗಿಯೂ ಚಿಂತನೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಆ ಮಕ್ಕಳಿಗೂ ಲಸಿಕೆ ಬರಲಿದೆ ಎಂದರು.

ಇನ್ನು ಲಸಿಕೆ ಪಡೆಯಲು ಬಂದಿದ್ದ ವಿದ್ಯಾರ್ಥಿನಿ ಜಾನ್ಸಿ ಮಾತಾನಾಡಿ, ನಾವೆಲ್ಲರೂ ಸೇಫ್ ಆಗಿ ಇರಬೇಕು ಅಂದರೆ ಲಸಿಕೆ ಪಡೆಯಬೇಕು. ಕೊರೊನಾ ಬಂದಾಗ ನಮ್ಮ ವಿದ್ಯಾಭ್ಯಾಸಕ್ಕೆ ತೊಂದರೆ ಆಗಿತ್ತು. ನಾವೆಲ್ಲ ನಮ ಸ್ಕೂಲ್ ಅನ್ನು ಮಿಸ್ ಮಾಡಿಕೊಂಡಿದ್ದೆವು. ಹಾಗಾಗಿ ಕೊರೊನಾ ಲಸಿಕೆಯನ್ನು ಎಲ್ಲರೂ ಪಡೆಯಬೇಕು.

ಲಸಿಕೆಯಿಂದ ಸ್ವಲ್ಪ ನೋವು ಆಗುತ್ತೆ, ಅದು ಕೇವಲ 5 ನಿಮಿಷ ಅಷ್ಟೇ. ಆದರೆ ಕೊರೊನಾ ‌ಬೇಗ ಹರಡಲಿದ್ದು, ಇದರಿಂದ ಲೈಫ್ ಚೇಂಜ್ ಆಗಿ ಬಿಡುತ್ತದೆ. ಯಾರ ಜೊತೆಯೂ ಮಾತನಾಡಲು ಆಗಲ್ಲ, ಲಾಕ್​ಡೌನ್ ನಿಯಮಗಳೆಲ್ಲ ಬಂದು ಬಿಡುತ್ತದೆ. ಹೀಗಾಗಿ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.