ETV Bharat / city

ಎಂಗೇಜ್ಮೆಂಟ್​ ಇದೆ ಅಂತ ಗ್ರಾಹಕನ ಸೋಗಿನಲ್ಲಿ ಬಂದ.. ಕ್ಷಣದಲ್ಲೇ ಚಿನ್ನದ ಸರ​ ಕದ್ದು ಖದೀಮ ಎಸ್ಕೇಪ್- ವಿಡಿಯೋ ನೋಡಿ

author img

By

Published : Dec 4, 2021, 4:34 PM IST

Updated : Dec 4, 2021, 5:13 PM IST

gold-chain-theft-in-bangalore
ಚಿನ್ನದ ಚೈನ್​ ಕದ್ದು ಕಳ್ಳ ಎಸ್ಕೇಪ್

ಮದುವೆ ನಿಶ್ಚಿತಾರ್ಥ ಕಾರ್ಯಕ್ರಮ ಅಗೋದಿದೆ ಒಳ್ಳೆಯ ಚಿನ್ನದ ಚೈನ್ ತೋರಿಸಿ ಎಂದು ಆಭರಣದ ಅಂಗಡಿಗೆ ಬಂದ ಕಳ್ಳ ಕತ್ತಿಗೆ 22.5 ಗ್ರಾಮ್ ತೂಕದ ಚಿನ್ನದ ಸರ ಹಾಕಿಕೊಂಡು ಎಸ್ಕೇಪ್​ ಆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು: ಗ್ರಾಹಕನ ಸೋಗಿನಲ್ಲಿ ಆಭರಣ ಮಳಿಗೆಗೆ ಬಂದ ಕಳ್ಳನೊಬ್ಬ ಚೈನ್​ ಖರೀದಿಸುವ ನೆಪದಲ್ಲಿ ಅದನ್ನು ಕತ್ತಿಗೆ ಹಾಕಿಕೊಂಡು ಕ್ಷಣಮಾತ್ರದಲ್ಲಿ ಪರಾರಿಯಾದ ಘಟನೆ ಇಲ್ಲಿನ ಎಸ್.ಆರ್. ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅನಿತಾ ಜುವೆಲರ್ಸ್​ನಲ್ಲಿ ನಡೆದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಣದಲ್ಲೇ ಚಿನ್ನದ ಸರ​ ಕದ್ದು ಖದೀಮ ಎಸ್ಕೇಪ್

ಚಿನ್ನದ ಚೈನ್​ ಕದ್ದು ಕಳ್ಳ ಎಸ್ಕೇಪ್: ಎಂಗೇಜ್ಮೆಂಟ್ ಅಗೋದಿದೆ ಒಳ್ಳೆಯ ಚಿನ್ನದ ಚೈನ್ ತೋರಿಸಿ ಎಂದು ಆಭರಣದ ಅಂಗಡಿಗೆ ಬಂದ ಕಳ್ಳ ಹಲವು ಡಿಸೈನ್ ನೋಡಿ ದೊಡ್ಡ ಚೈನ್ ಯಾವುದಿದೆ ಕೊಡಿ ಎಂದು ಕೇಳಿದ್ದಾನೆ. ಈ ವೇಳೆ ಸಿಬ್ಬಂದಿ ಒಳ್ಳೆಯ ಕಸ್ಟಮರ್ ಎಂದು ನಂಬಿ 22.5 ಗ್ರಾಮ್ ತೂಕದ ಚಿನ್ನದ ಸರ ತೋರಿಸಿದ್ದರು. ಈ ವೇಳೆ ಚೆಕ್ ಮಾಡಿಕೊಳ್ಳುವ ರೀತಿಯಲ್ಲಿ ನಟಿಸಿ ಕೊರಳಿಗೆ ಚೈನ್ ಹಾಕೊಂಡು ಅಲ್ಲಿಂದ ಆರೋಪಿ ಪರಾರಿ ಆಗಿದ್ದಾನೆ.

ಖತರ್ನಾಕ್ ಕಳ್ಳನ ಕೈಚಳಕ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಸಂಬಂಧ ಎಸ್.ಆರ್.ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Last Updated :Dec 4, 2021, 5:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.