ETV Bharat / city

ರಾಜ್ಯದಲ್ಲಿಂದು ನೂರಕ್ಕಿಂತ ಕಡಿಮೆ ಸೋಂಕಿತರು ಪತ್ತೆ.. ಕೊರೊನಾಗೆ ಒಂದು ಬಲಿ

author img

By

Published : Mar 23, 2022, 9:06 PM IST

corona
ಕೊರೊನಾ

ರಾಜ್ಯದಲ್ಲಿ ಕೊರೊನಾ ಸೋಂಕು ತೀವ್ರ ಇಳಿಮುಖವಾಗಿದೆ. ಇಂದು 32,915 ಮಂದಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಇದರಲ್ಲಿ 93 ಮಂದಿಗೆ ಮಾತ್ರ ಸೋಂಕು ದೃಢಪಟ್ಟಿದೆ. ಅಲ್ಲದೇ ಒಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ತೀವ್ರ ಇಳಿಮುಖಗೊಂಡಿದೆ. ಇಂದು 32,915 ಮಂದಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಇದರಲ್ಲಿ 93 ಮಂದಿಗೆ ಮಾತ್ರ ಸೋಂಕು ದೃಢಪಟ್ಟಿದೆ. ಅಲ್ಲದೇ ಒಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆ 39,44,970ಕ್ಕೆ ಏರಿಕೆ ಆಗಿದೆ.‌ ಪಾಸಿಟಿವ್ ದರ 0.28% ರಷ್ಟಿದೆ. ಇತ್ತ 128 ಸೋಂಕಿತರು ಗುಣಮುಖರಾಗಿದ್ದು ಈತನಕ 39,03,084 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

ರಾಜ್ಯದಲ್ಲಿ ಸದ್ಯ ಸಕ್ರಿಯ ಪ್ರಕರಣಗಳು 1802 ರಷ್ಟಿವೆ. ಸೋಂಕಿಗೆ ಒಬ್ಬ ಮೃತಪಟ್ಟಿದ್ದು, ಸಾವಿನ ಸಂಖ್ಯೆ 40,042 ರಷ್ಟಾಗಿದೆ. ಡೆತ್ ರೇಟ್​ 1.07% ಇದೆ. ಬೆಂಗಳೂರಿನಲ್ಲಿ 75 ಮಂದಿಗೆ ಸೋಂಕು ತಗುಲಿದ್ದು, 17,81,216 ಕ್ಕೆ ಏರಿಕೆ ಆಗಿದೆ. 92 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ 17,62,648 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ರೂಪಾಂತರಿ ವೈರಸ್ ಅಪ್​ಡೇಟ್ಸ್.. ಅಲ್ಪಾ- 156, ಬೀಟಾ-08, ಡೆಲ್ಟಾ ಸಬ್ ಲೈನೇಜ್- 4620, ಇತರೆ- 311, ಒಮಿಕ್ರಾನ್- 3081, BAI.1.529- 828, BA1- 98, BA2- 2155

ಓದಿ: ಕೊರೊನಾ ದಾಳಿಯಿಂದ ಟೈಪ್ 2 ಮಧುಮೇಹದ ಅಪಾಯ ಹೆಚ್ಚು: ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.