ETV Bharat / city

ಬೆಂಗಳೂರು ವಿಶ್ವವಿದ್ಯಾಲಯದ 56ನೇ ಘಟಿಕೋತ್ಸವ, ಮೂವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ

author img

By

Published : Apr 30, 2022, 9:23 AM IST

56th-convocation-of-bangalore-university
ಬೆಂಗಳೂರು ವಿಶ್ವವಿದ್ಯಾಲಯದ 56ನೇ ಘಟಿಕೋತ್ಸವ, ಮೂವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ

ಬೆಂಗಳೂರು ವಿಶ್ವವಿದ್ಯಾಲಯದ 56ನೇ ಘಟಿಕೋತ್ಸವ ನಗರದ ಸೆಂಟ್ರಲ್‌ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದಿದೆ. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದರು. ಘಟಿಕೋತ್ಸವದಲ್ಲಿ ಸಮಾಜ ಸೇವಕ ಎಂ.ಎಸ್‌. ಮುತ್ತುರಾಜ್‌, ಕಲಾವಿದ ಎಸ್.ಜಿ. ವಾಸುದೇವ್‌ ಮತ್ತು ಅಕ್ಷಯ ಪಾತ್ರ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಮಧು ಪಂಡಿತ್‌ ದಾಸರಿಗೆ ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡಲಾಯಿತು.

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ 56ನೇ ಘಟಿಕೋತ್ಸವವೂ ನಗರದ ಸೆಂಟ್ರಲ್‌ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಿತು. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದರು. ಘಟಿಕೋತ್ಸವದಲ್ಲಿ ಸಾಮಾಜಿಕ ಅಸಮಾನತೆ ತೊಡೆದು ಹಾಕಲು ವಿಶಿಷ್ಟ ವಿಧಾನಗಳನ್ನು ಬಳಸಿ ಯಶಸ್ವಿಯಾದ ಸಮಾಜ ಸೇವಕ ಎಂ.ಎಸ್‌. ಮುತ್ತುರಾಜ್‌, ದೃಶ್ಯಕಲೆ ಕ್ಷೇತ್ರಕ್ಕೆ ಪ್ರಮುಖ ಕೊಡುಗೆ ನೀಡಿದ ಕಲಾವಿದ ಎಸ್.ಜಿ. ವಾಸುದೇವ್‌ ಮತ್ತು ಅಧ್ಯಾತ್ಮ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ಅಕ್ಷಯ ಪಾತ್ರ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಮಧು ಪಂಡಿತ್‌ ದಾಸರಿಗೆ ಈ ಸಂದಭ೯ದಲ್ಲಿ ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡಲಾಯಿತು.

ಈ ಸಲದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಒಟ್ಟು 321ಚಿನ್ನದ ಪದಕಗಳು ಹಾಗೂ 132 ನಗದು ಬಹುಮಾನಗಳನ್ನು ವಿತರಿಸಲಾಗಿದೆ. ಒಟ್ಟು 127 ಅಭ್ಯಥಿ೯ಗಳಿಗೆ ಡಾಕ್ಟರೇಟ್‌ ಪದವಿ ಪ್ರದಾನ ಮಾಡಲಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದ 56ನೇ ಘಟಿಕೋತ್ಸವದಲ್ಲಿ ಮೂವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.

ವಿವಿಧ ವಿದ್ಯಾರ್ಥಿಗಳಿಗೆ ಪದಕ ಪ್ರದಾನ: ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ರಸಾಯನ ಶಾಸ್ತ್ರ ವಿಭಾಗದ ಸುಷ್ಮಾ ಎಚ್‌. ಅತಿ ಹೆಚ್ಚು ಅಂದರೆ ಏಳು ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ನಂತರ ಸಂಸ್ಕೃತ ವಿಭಾಗದ ಐಶ್ವಯ೯ ಪಿ.ಸಿ. ಮತ್ತು ಕನ್ನಡ ಅಧ್ಯಯನ ಕೇಂದ್ರದ ವಿದ್ಯಾರ್ಥಿ ಶ್ರೀನಿವಾಸ ಎಸ್‌ ತಲಾ ಆರು ಚಿನ್ನದ ಪದಕವನ್ನು ಪಡೆದಿದ್ದಾರೆ. ಗಣಿತಶಾಸ್ತ್ರ ವಿಭಾಗದ ಸುರಭಿ ಎನ್, ಸಸ್ಯಶಾಸ್ತ್ರ ವಿಭಾಗದ ಸುರೇಶ್‌ ಬಾಬು ಎನ್‌, ಪ್ರಾಣಿಶಾಸ್ತ್ರ ವಿಭಾಗದ ಚಂದನ ಆರ್‌. ತಲಾ ಐದು ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ಬಿಎಸ್ಸಿ ಪದವಿ ವಿಭಾಗದಲ್ಲಿ ಯಲಹಂಕ ಪ್ರಥಮ ದರ್ಜೆ ಕಾಲೇಜಿನ ನಂದಿನಿ ವಿ. ಆರು ಚಿನ್ನದ ಪದಕಗಳನ್ನು ಗಳಿಸಿದ್ದು, ಬಿಬಿಎ ಪದವಿಯಲ್ಲಿ ಬೆಂಗಳೂರಿನ ಸೆಂಟ್‌ ಆನ್ಸ್‌ ಪದವಿ ಕಾಲೇಜಿನ ಮುಸ್ಕಾನ್‌ ಖಾನಂ ಹಾಗೂ ಬಿಇ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ನಲ್ಲಿ ರಕ್ಷಿತ ಬಿ.ವಿ. ತಲಾ ಐದು ಚಿನ್ನದ ಪದಕಗಳನ್ನು ಗಳಿಸಿದ್ದಾರೆ.

54 ನೇ ಘಟಿಕೋತ್ಸವದವರೆಗೂ ವಿದ್ಯಾರ್ಥಿಗಳಿಗೆ ಚಿನ್ನ ಲೇಪಿತ ಪದಕಗಳನ್ನು ನೀಡಲಾಗುತ್ತಿತ್ತು. ಆದರೆ 55ನೇ ಘಟಿಕೋತ್ಸವದಿಂದ ಬೆಳ್ಳಿಯ ಮೇಲೆ 1.3ಗ್ರಾಂ. ಚಿನ್ನದಿಂದ ಕೆತ್ತಲಾದ ಪದಕಗಳನ್ನು ನೀಡಲಾಗುತ್ತಿದೆ. ಈ ಘಟಿಕೋತ್ಸವ ಸಂದಭ೯ದಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ವಿದ್ಯಾಥಿ೯ಗಳು ಸೇರಿದಂತೆ ಒಟ್ಟು 68,211ಮಂದಿ ಪದವಿ ಪ್ರಮಾಣ ಪತ್ರಗಳನ್ನು ಪಡೆಯಲು ಅರ್ಹರಾಗಿದ್ದು, ಘಟಿಕೋತ್ಸವದಲ್ಲಿ ಭಾಗವಹಿಸದೇ ಇರುವವರು ನ್ಯಾಡ್‌ (ನ್ಯಾಷನಲ್‌ ಅಕಾಡೆಮಿಕ್‌ ಡೈರೆಕ್ಟರಿ)ಯ ಪೋರ್ಟಲ್‌ನಲ್ಲಿ ಡಿಜಿಲಾಕರ್‌ನಿಂದ ಈ ದಿನದಂದೇ ಪದವಿ ಪ್ರಮಾಣಪತ್ರಗಳನ್ನು ಆನ್​ಲೈನ್ ಮೂಲಕ ಪಡೆದುಕೊಳ್ಳಬಹುದಾಗಿದೆ.

ಗೌರವ ಡಾಕ್ಟರೇಟ್ ಪಡೆದ ಮಧು ಪಂಡಿತ ದಾಸ ರವರು ಮಾತನಾಡಿ, ಈ ರೀತಿಯ ಮನ್ನಣೆ ಮೂಲಕ ನಮ್ಮ ಪ್ರಯತ್ನಗಳನ್ನು ಮೆಚ್ಚಿ ಗೌರವಿಸಿರುವುದಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ನಾನು ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ. ಅತ್ಯಂತ ಧನ್ಯಭಾವದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಲು ನನಗೆ ತುಂಬ ಸಂತೋಷವಾಗಿದೆ. ಮಾನವ ಸಮುದಾಯಕ್ಕೆ ಇನ್ನೂ ಹೆಚ್ಚಿನ ಉತ್ಸಾಹದಿಂದ ಸೇವೆ ಸಲ್ಲಿಸಲು ಇದರಿಂದ ಸ್ಫೂರ್ತಿ ಉಂಟಾಗಿದೆ ಎಂದು ಹೇಳಿದ್ದಾರೆ.

ಓದಿ : ಗುತ್ತಿಗೆದಾರ ಆತ್ಮಹತ್ಯೆ ಕೇಸ್: ಬೆಳಗಾವಿಗೆ ಮತ್ತೆ ಉಡುಪಿ ಪೊಲೀಸರ ಎಂಟ್ರಿ, ಹಿಂಡಲಗಾ ‌ಗ್ರಾಪಂ ಅಧ್ಯಕ್ಷನ ಮೊಬೈಲ್ ಜಪ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.