ETV Bharat / city

ಕ್ಷೀರ ಭಾಗ್ಯ ಯೋಜನೆಯ ಹಾಲಿನ ಪುಡಿ ಸಾಗಣೆ: ಇಬ್ಬರು ಆರೋಪಿಗಳ ಬಂಧನ

author img

By

Published : Nov 13, 2021, 11:23 AM IST

Ksheera Bhagya milk powder trafficking
ಕ್ಷೀರ ಭಾಗ್ಯ ಯೋಜನೆಯ ಹಾಲಿನ ಪುಡಿ

ಕ್ಷೀರ ಭಾಗ್ಯ (Ksheera Bhagya) ಯೋಜನೆಯ ಹಾಲಿನ ಪುಡಿ (Milk Powder) ಪ್ಯಾಕೇಟ್​​ಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ರಾಯಭಾಗ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕೋಡಿ: ಶಾಲಾ ಮಕ್ಕಳಿಗೆ ನೀಡಬೇಕಿದ್ದ ಕ್ಷೀರ ಭಾಗ್ಯ (Ksheera Bhagya) ಯೋಜನೆಯ ಹಾಲಿನ ಪುಡಿ (Milk Powder) ಪ್ಯಾಕೇಟ್​​ಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ರಾಯಭಾಗ ಪೊಲೀಸರು ಬಂಧಿಸಿದ್ದಾರೆ.

ಕ್ಷೀರ ಭಾಗ್ಯ ಯೋಜನೆಯ ಹಾಲಿನ ಪುಡಿ ಸಾಗಣೆ

ಬೆಳಗಾವಿ ಜಿಲ್ಲೆಯ ಬಾವನಸೌದತ್ತಿ ಗ್ರಾಮದ ರಾಜುಗೌಡ ಪಾಟೀಲ್, ಹಾಗೂ ಸುನೀಲ್​ ಗೂರವ ಬಂಧಿತ ಆರೋಪಿಗಳು. ಇವರು ಬೇಕರಿ ಶಾಪ್ ಇಟ್ಟುಕೊಂಡಿದ್ದು, ಉತ್ಪನ್ನಗಳ ತಯಾರಿಕೆಗಾಗಿ ಮಕ್ಕಳಿಗೆ ತಲುಪಬೇಕಿದ್ದ ಹಾಲಿನ ಪುಡಿ (Milk Powder) ಪ್ಯಾಕೇಟ್​​ಗಳನ್ನು ಅಕ್ರಮವಾಗಿ ತೆಗೆದುಕೊಂಡು ಹೋಗುತ್ತಿದ್ದರು.

ಈ ಬಗ್ಗೆ ಖಚಿತ ಮಾಹಿತಿ ಪಡೆದ ರಾಯಬಾಗ ಪೊಲೀಸರು ದಾಳಿ ನಡೆಸಿ ಬಾವನಸೌದತ್ತಿ ಗ್ರಾಮದಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ 11 ಕೆ.ಜಿ ತೂಕದ 20ಕ್ಕೂ ಹೆಚ್ಚು ಹಾಲಿನ ಪುಡಿ ಬ್ಯಾಗ್​​​ಗಳನ್ನು ವಶಕ್ಕೆ ಪಡೆದಿದ್ದಾರೆ.

ಕ್ಷೀರ ಭಾಗ್ಯ (Ksheera Bhagya)ಯೋಜನೆ ಹಾಲಿನ ಪುಡಿ ಅಕ್ರಮ ಸಾಗಣೆಯಲ್ಲಿ ಇನ್ನೂ ಯಾರಿದ್ದಾರೆ ಎಂಬುವುದರ ಬಗ್ಗೆ ಪೊಲೀಸರು ಹೆಚ್ಚಿನ‌ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಸಂಬಂಧ ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.