ETV Bharat / city

ಮತಾಂತರ ನಿಷೇಧ ಕಾಯ್ದೆ ತಂದು ದೇಶವಿಭಜನೆ ಮಾಡಬೇಡಿ: ಮಾಜಿ ಸಚಿವ ಕೆ.ಜೆ. ಜಾರ್ಜ್

author img

By

Published : Dec 13, 2021, 12:46 PM IST

kj-george-reaction-on-anti-conversation-law
ಮಾಜಿ ಸಚಿವ ಕೆಜೆ ಜಾರ್ಜ್

ಸಂವಿಧಾನದಲ್ಲಿ ಬಲವಂತವಾಗಿ ಮತಾಂತರ ಮಾಡುವಂತಿಲ್ಲ ಅಂತ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಮೊಗಲರು, ಡಚ್ಚರು, ಪೋರ್ಚುಗೀಸರು ಬಂದರೂ ಹಿಂದು ಧರ್ಮದ ಜನ ಸಂಖ್ಯೆ ಹೆಚ್ಚಿದೆ. ಕ್ರೈಸ್ತ ಸಮುದಾಯದ ಜನಸಂಖ್ಯೆ ಮೊದಲಗಿಂತ ಕಡಿಮೆ ಇದೆ. ರಾಜಕೀಯದ ದುರುದ್ದೇಶದಿಂದ ಈ ಕಾಯ್ದೆ ತರೋದಕ್ಕೆ ಹೊರಟಿದ್ದಾರೆ‌‌ ಎಂದು ಮತಾಂತರ ನಿಷೇಧ ಕಾಯ್ದೆ ಕುರಿತು ಮಾಜಿ ಸಚಿವ ಕೆ. ಜೆ. ಜಾರ್ಜ್​ ಹೇಳಿದರು.

ಬೆಳಗಾವಿ : ಮತಾಂತರ ನಿಷೇಧ ಕಾಯ್ದೆ ತಂದು ದೇಶವಿಭಜನೆ ಮಾಡೋಕೆ ಮುಂದಾಗಬೇಡಿ ಎಂದು ಮಾಜಿ ಸಚಿವ ಕೆ.ಜೆ. ಜಾರ್ಜ್ ಆಗ್ರಹಿಸಿದರು.

ನಗರದ ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಮತಾಂತರ‌ ನಿಷೇಧ ವಿಧೇಯಕ ಮಂಡನೆ ಬಗ್ಗೆ ಪ್ರತಿಕ್ರಿಯಿಸುತ್ತಾ, ಸಂವಿಧಾನದಲ್ಲಿ ಬಲವಂತವಾಗಿ ಮತಾಂತರ ಮಾಡುವಂತಿಲ್ಲ ಅಂತ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಇಷ್ಟ ಬಂದಂಥ ಧರ್ಮಕ್ಕೆ ಜನರು ಹೋಗಬಹುದು ಅಂತಿದೆ. ಬಲವಂತವಾಗಿ ಮತಾಂತರ ಆಗೋದಕ್ಕೆ ನಮ್ಮ ವಿರೋಧವೂ ಇದೆ ಎಂದರು.

ಈ ಕಾನೂನು ತರುವ ಮೂಲಕ ಕೆಲವರಿಗೆ ನೈತಿಕ ಪೊಲೀಸ್​ ಗಿರಿಗೆ ಅವಕಾಶ ಮಾಡಿಕೊಟ್ಟಂತೆ ಆಗಲಿದೆ. ಹಿಂದೂ ಧರ್ಮವಾಗಲಿ ಅಥವಾ ಬೇರೆ‌ ಧರ್ಮವಾಗಲಿ ಶಕ್ತಿಯುಕ್ತವಾಗಿದೆ. ಮೊಗಲರು, ಡಚ್ಚರು, ಪೋರ್ಚುಗೀಸರು ಬಂದರೂ ಹಿಂದೂ ಧರ್ಮದ ಜನಸಂಖ್ಯೆ ಹೆಚ್ಚಿದೆ ಎಂದು ತಿಳಿಸಿದರು.

ಕ್ರೈಸ್ತ ಸಮುದಾಯದ ಜನಸಂಖ್ಯೆ ಮೊದಲಗಿಂತ ಕಡಿಮೆ ಇದೆ. ರಾಜಕೀಯದ ದುರುದ್ದೇಶದಿಂದ ಈ ಕಾಯ್ದೆ ತರೋದಕ್ಕೆ ಸರ್ಕಾರ ಮುಂದಾಗಿದೆ. ಸಿಎಂ ಹಾಗೂ ಅವರ ಪಕ್ಷದವರಿಗೆ ಕಾಯ್ದೆ ತರದಂತೆ ವಿನಂತಿ ಮಾಡಿಕೊಳ್ಳುತ್ತೇನೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.