ETV Bharat / city

ಜನರಿಗೆ ಅಕ್ಕಿ ಅಲ್ಲ, ಸ್ವಾಭಿಮಾನದ ಬದುಕು ಕಲ್ಪಿಸಲು ಉದ್ಯೋಗ ನೀಡ್ಬೇಕು.. ಬಿಜೆಪಿ ಆ ಕೆಲಸ ಮಾಡ್ತಿದೆ.. ಸಚಿವ ಕಾರಜೋಳ

author img

By

Published : May 21, 2022, 1:13 PM IST

ಗೋವಿಂದ ಕಾರಜೋಳ
ಗೋವಿಂದ ಕಾರಜೋಳ

2023ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ಮೋಸ ಮಾಡಿಕೊಂಡು ದೇಶದಲ್ಲಿ ಆಡಳಿತ ನಡೆಸಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 60 ವರ್ಷ ಆಡಳಿತ ಮಾಡಿದ್ರು ಅವರಿಂದ ಯಾವುದೇ ಸಾಧನೆ ಮಾಡಲಾಗಲಿಲ್ಲ ಎಂದು ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು..

ಬೆಳಗಾವಿ : ನಾನು ಮತ್ತೆ ಸಿಎಂ ಆದ್ರೆ ಸಾಲ ಮನ್ನಾ ಮಾಡುತ್ತೇನೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಮೋಸ ಮಾಡಿಕೊಂಡು ದೇಶದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದೆ ಎಂದು ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2023ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ಮೋಸ ಮಾಡಿಕೊಂಡು ದೇಶದಲ್ಲಿ ಆಡಳಿತ ನಡೆಸಿದೆ. ಜನರಿಗೆ ಬೇಕಾಗಿರೋದು ಅಕ್ಕಿ ಅಲ್ಲ, ಸ್ವಾಭಿಮಾನದ ಬದುಕು. ಅದಕ್ಕೆ ಬೇಕಾದ ಉದ್ಯೋಗವನ್ನ ಕೊಡುವ ಕೆಲಸ ಮಾಡಬೇಕು. ಈ ಕೆಲಸವನ್ನ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದರು.

ಕಾಂಗ್ರೆಸ್‌ ವಿರುದ್ಧ ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿರುವುದು..

ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ತುಳಸಿ, ಪತ್ರೆ ತಲೆಯ ಮೇಲೆ ಹೊತ್ತುಕೊಂಡು ಅಧಿಕಾರ ಮಾಡಿದ್ದಾರೆ. ಸುಳ್ಳು ಹೇಳುತ್ತಲೇ ಕಾಂಗ್ರೆಸ್ ದೇಶದಲ್ಲಿ ಖಾಲಿಯಾಗಲಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 60 ವರ್ಷ ಆಡಳಿತ ಮಾಡಿದ್ರು ಯಾವುದೇ ಸಾಧನೆ ಮಾಡಲಾಗಲಿಲ್ಲ. ಸುಳ್ಳು ಆರೋಪ ಮಾಡಿ ಅಧಿಕಾರದಲ್ಲಿ ಉಳಿಯಬೇಕು ಅನೋದು ಕಾಂಗ್ರೆಸ್ ಉದ್ದೇಶ ಎಂದು ಕಾರಜೋಳ ಟೀಕಿಸಿದರು.

ರಾಜ್ಯದಲ್ಲಿ ಅಕಾಲಿಕ ಮಳೆ ವಿಚಾರದ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಅಕಾಲಿಕ ಮಳೆಯ ಅಬ್ಬರ ಜೋರಾಗಿದೆ. ಮಳೆ ಬರೋದು ಸಂತೋಷದ ಸಂಗತಿ. ಹೀಗಾಗಿ, ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದ ಕಬ್ಬು ಬೆಳೆಯುತ್ತಾರೆ. ಮಳೆಯಿಂದ ಕಬ್ಬು ಬೆಳೆಗೆ ಅನಕೂಲವಾಗಿದೆ. ಶೇ‌ 10ರಷ್ಟು ಜನರಿಗೆ ತೊಂದರೆ ಆಗಿದೆ. ತೊಂದೆರೆಯಾದ ರೈತರಿಗೆ ಸ್ಪಂದಿಸುವ ಕೆಲಸವನ್ನ ಸರ್ಕಾರ ಮಾಡಲಿದ್ದು, ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಇದರ ಜೊತೆಗೆ ಜಿಲ್ಲಾಧಿಕಾರಿಗೆ ಚಿಕ್ಕೋಡಿಯಲ್ಲಿ ಸಭೆ ಮಾಡಲು ಹೇಳಿದ್ದೇನೆ ಎಂದರು.

ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತವಾಗಿದ್ದು, ಹನುಮಂತ ‌ನಿರಾಣಿ ಒಳ್ಳೆಯ ಅಭ್ಯರ್ಥಿಯಾಗಿದ್ದಾರೆ. ಅರುಣ್ ಶಹಾಪುರ ಆ್ಯಕ್ಟೀವ್ ಆಗಿದ್ದು, ‌ಶಿಕ್ಷಕರ ಸಮಸ್ಯೆಗೆ ಸ್ಪಂದನೆ ಮಾಡಿದ್ದಾರೆ. ಪದವೀಧರ, ಶಿಕ್ಷಕರ ಎರಡು ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇವೆ. ಪ್ರಧಾನಿ ಮೋದಿ ಸಾಧನೆ ಮತದಾರರ ಬಳಿ ಹೇಳುತ್ತಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅನೇಕ ಅಭಿವೃದ್ಧಿ ಕೆಲಸ ಮಾಡಿದೆ. ಅದೇ ಸಾಧನೆಯನ್ನು ‌ಮುಂದಿಟ್ಟುಕೊಂಡು ಜನರ ಬಳಿ ಮತ ಕೇಳುತ್ತೇವೆ ಎಂದರು.

ಬೆಳಗಾವಿ ಜಿಲ್ಲೆಯಲ್ಲಿ ಬಣ ರಾಜಕೀಯ ‌ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಎಲ್ಲ ಪಕ್ಷದಲ್ಲೂ ವಿಷಯಾಧಾರಿತ ಭಿನ್ನಪ್ರಾಯ, ಅಭಿಪ್ರಾಯ ಇರೋದು ಸಹಜ. ಬೆಳಗಾವಿ ಬಿಜೆಪಿಯಲ್ಲಿ ಬಣ ರಾಜಕೀಯ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡ್ತಿದ್ದೇವೆ. ಜಾರಕಿಹೊಳಿ ಸೇರಿ ಎಲ್ಲರೂ ಸಭೆಗೆ ಬರ್ತಿದ್ದಾರೆ. ಎರಡು ಬಣದ ಮುಖಂಡರು ಸಭೆಗೆ ಬರ್ತಾರೆ ಎಂದ ಬಳಿಕ, ಬಣ ಅಲ್ಲ ಎರಡು ಜಿಲ್ಲೆಯ ಮುಖಂಡರು ಬರ್ತಾರೆ ಅಂತಾ ಹೇಳಿದರು.

ಇದನ್ನೂ ಓದಿ: ಪ್ರತಿಕೂಲ ಹವಾಮಾನ.. ರಕ್ಷಣಾ ಸಚಿವ ಪ್ರಯಾಣಿಸುತ್ತಿದ್ದ ಫ್ಲೈಟ್​ ಸೇರಿದಂತೆ 11 ವಿಮಾನಗಳ ಮಾರ್ಗ ಬದಲಾವಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.