ETV Bharat / business

ಗಣೇಶ್​ ಹಬ್ಬದ ಪ್ರಯುಕ್ತವೂ ಇಳಿಯದ ತೈಲ ಬೆಲೆ.. 102ನೇ ದಿನವೂ ಯಥಾಸ್ಥಿತಿಯಲ್ಲೇ ಮುಂದುವರಿದ ಇಂಧನ ಬೆಲೆ

author img

By

Published : Aug 31, 2022, 8:06 AM IST

India oil price, Petrol price in India today, India Diesel price today, Karnataka oil price, Karnataka diesel rate, Karnataka petrol price, ಭಾರತದ ತೈಲ ಬೆಲೆ, ಇಂದು ಭಾರತದಲ್ಲಿ ಪೆಟ್ರೋಲ್ ಬೆಲೆ, ಇಂದು ಭಾರತದಲ್ಲಿ ಡೀಸೆಲ್ ಬೆಲೆ, ಕರ್ನಾಟಕ ತೈಲ ಬೆಲೆ, ಇಂದು ಕರ್ನಾಟಕ ಡೀಸೆಲ್ ದರ, ಇಂದು ಕರ್ನಾಟಕ ಪೆಟ್ರೋಲ್ ಬೆಲೆ,
ಭಾರತದ ತೈಲ ಬೆಲೆ

ಕಳೆದ 102 ದಿನದಂದ ದೇಶ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿ ಪೆಟ್ರೋಲ್​ ಹಾಗೂ ಡೀಸೆಲ್​ ದರದಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಪ್ರಸ್ತುತ, ದೆಹಲಿ, ಮುಂಬೈ ಮತ್ತು ಚೆನ್ನೈನಂತಹ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರಗಳು ಲೀಟರ್‌ಗೆ ರೂ. 100 ರ ಸಮೀಪದಲ್ಲಿದೆ. ಅದಲ್ಲದೇ ಹೆಚ್ಚಿನ ನಗರಗಳಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ ರೂ 90 ಕ್ಕಿಂತ ಹೆಚ್ಚಿದೆ. ಇಂದಿನ ಇಂಧನ ದರ ಹೀಗಿದೆ.

ಬೆಂಗಳೂರು/ ನವದೆಹಲಿ: ಇಂಧನ ಬೆಲೆಯಲ್ಲಿ ನಿರಂತರ ಏರಿಕೆಯ ನಂತರ ಕಳೆದ 102 ದಿನಗಳಿಂದ ನಿರಾಳವಾಗಿದೆ. ಗಣೇಶ ಹಬ್ಬದ ದಿನವೂ ಪೆಟ್ರೋಲ್ - ಡೀಸೆಲ್ ಬೆಲೆ ಯಥಾಸ್ಥಿತಿ ಇದೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ದೆಹಲಿಯಲ್ಲಿ ಪೆಟ್ರೋಲ್ ದರ 96.72 ರೂ, ಡೀಸೆಲ್ ದರ 89.62 ಇದೆ. ಹಾಗೆಯೇ ಮುಂಬೈನಲ್ಲಿ ಪೆಟ್ರೋಲ್ 106.31 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ 94.27 ರೂ. ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 106.03 ರೂ. ಆಗಿದ್ದರೆ, ಡೀಸೆಲ್ 92.76 ರೂ. ಗೆ ದೊರೆಯುತ್ತಿದೆ. ಚೆನ್ನೈನಲ್ಲಿ ಪೆಟ್ರೋಲ್‌ 102.63 ರೂಪಾಯಿ ಮತ್ತು ಡೀಸೆಲ್‌ಗೆ 94.24 ರೂ.ಗೆ ಮಾರಾಟವಾಗುತ್ತಿದೆ. ಪಂಜಾಬ್‌ನ ಚಂಡೀಗಢದಲ್ಲಿ ಪೆಟ್ರೋಲ್ ಬೆಲೆ 96.20 ರೂ. ಮತ್ತು ಡೀಸೆಲ್ ಬೆಲೆ 84.26 ರೂ. ಆಗಿದೆ.

ಕರ್ನಾಟಕ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ:

ನಗರಪೆಟ್ರೋಲ್ಡೀಸೆಲ್
ಬೆಂಗಳೂರು101.9687.91
ಬೆಳಗಾವಿ102.6488.55
ಬಳ್ಳಾರಿ103.9089.68
ಮೈಸೂರು101.4487.43
ಮಂಗಳೂರು101.13 87.13
ಶಿವಮೊಗ್ಗ102.83 89.17
ದಾವಣಗೆರೆ103.9389.50
ಹುಬ್ಬಳ್ಳಿ101.6587.65
ಕಲಬುರಗಿ101.7188.71
ತುಮಕೂರು102.4588.36
ETV Bharat Logo

Copyright © 2024 Ushodaya Enterprises Pvt. Ltd., All Rights Reserved.