ETV Bharat / business

Explained: ಹೊಸ ಹಾಗೂ ಹಳೆಯ ಆದಾಯ ತೆರಿಗೆ ಪದ್ಧತಿ ನಡುವೆ ಇರುವ ವ್ಯತ್ಯಾಸವೇನು..?

author img

By

Published : Feb 4, 2023, 5:38 PM IST

Updated : Feb 4, 2023, 6:04 PM IST

New tax regime
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ 2023ರ ಬಜೆಟ್ ಭಾಷಣದಲ್ಲಿ ತೆರಿಗೆಯ ಬಗ್ಗೆ ಕೆಲವು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. ಹೊಸ ಮತ್ತು ಹಳೆಯ ಎರಡು ತೆರಿಗೆ ವ್ಯವಸ್ಥೆಗಳಲ್ಲಿ ಯಾವುದು ಉತ್ತಮ ಎಂಬ ಪ್ರಶ್ನೆಗಳು ಕಾಡುತ್ತಿವೆ. ಈ ವರದಿಯಿಂದ ತೆರಿಗೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ.

ಹೈದರಾಬಾದ್: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2023-24ರ ಕೇಂದ್ರ ಬಜೆಟ್ ಭಾಷಣದಲ್ಲಿ ವೈಯಕ್ತಿಕ ತೆರಿಗೆ ವಿಚಾರವು ತುಂಬಾ ಪ್ರಮುಖವಾಗಿದೆ. ತೆರಿಗೆ ಪಾವತಿದಾರರು ಈ ವಿಷಯದ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದಾರೆ. ನಿರ್ಮಲಾ ಸೀತಾರಾಮನ್ ಕೂಡ ತೆರಿಗೆದಾರರಿಗೆ ನಿರಾಸೆಯಾಗದಂತೆ ಈ ನಿಟ್ಟಿನಲ್ಲಿ ದೊಡ್ಡ ಘೋಷಣೆ ಕೂಡಾ ಮಾಡಿದ್ದಾರೆ.

New tax regime
ಹೊಸ ಹಾಗೂ ಹಳೆಯ ಆದಾಯ ತೆರಿಗೆ ಪದ್ಧತಿಯ ಅಂಕಿ ಅಂಶಗಳು

ಹೊಸ ತೆರಿಗೆ ಪದ್ಧತಿಯಲ್ಲಿ (ಎನ್​ಟಿಆರ್​) 7 ಲಕ್ಷ ರೂ. ವರೆಗಿನ ವಾರ್ಷಿಕ ಆದಾಯದ ಮೇಲೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ಹಳೆಯ ತೆರಿಗೆ ಪದ್ಧತಿಯಲ್ಲಿ (ಓಟಿಆರ್​) 5 ಲಕ್ಷ ರೂ. ವರೆಗಿನ ವಾರ್ಷಿಕ ಆದಾಯದ ಮೇಲೆ ತೆರಿಗೆ ಪಾವತಿಸುವ ಅವಶ್ಯಕತೆ ಇರಲಿಲ್ಲ. ಆದರೆ, ಹೊಸ ತೆರಿಗೆ ಪದ್ಧತಿ ಮತ್ತು ಹಳೆಯ ತೆರಿಗೆ ಪದ್ಧತಿಯಲ್ಲಿ ಯಾವ ಅಂಶಗಳು ಉತ್ತಮವಾಗಿವೆ ಎಂಬ ಪ್ರಶ್ನೆಗಳು ಪ್ರಸ್ತುತ ಉದ್ಭವವಾಗಿವೆ?

ಹೊಸ ತೆರಿಗೆ ಪದ್ಧತಿಯ ಮಾಹಿತಿ: ಹೊಸ ತೆರಿಗೆ ಪದ್ಧತಿಯಲ್ಲಿ ಹೊಸ ತೆರಿಗೆ ಮಿತಿಗಳನ್ನು ಜಿರೋದಿಂದ 3 ಲಕ್ಷ (ತೆರಿಗೆ ಇಲ್ಲ), 3ರಿಂದ 6 ಲಕ್ಷ ರೂ. (ಶೇ. 5ರಷ್ಟು ತೆರಿಗೆ), 6 ರಿಂದ 9 ಲಕ್ಷ ರೂ. (ಶೇ.10), 9 ರಿಂದ 12 ಲಕ್ಷ (ಶೇ.15ರಷ್ಟು), 12-15 ಲಕ್ಷ (ಶೇ.20 ರಷ್ಟು) ಮತ್ತು 15 ಲಕ್ಷಕ್ಕಿಂತ ಹೆಚ್ಚಿನ (ಶೇ.30ರಷ್ಟು) ತೆರಿಗೆಯನ್ನು ಪಾವತಿಸಬೇಕಾಗುತ್ತದೆ. 50,000 ರೂ. ಸ್ಟ್ಯಾಂಡರ್ಡ್ ಡಿಡೆಕ್ಷನ್ ಹೊರತುಪಡಿಸಿ, ಎನ್​ಟಿಆರ್​ ಯಾವುದೇ ವಿನಾಯಿತಿಗಳು ಮತ್ತು ಕಡಿತಗಳಿಗೆ ಅವಕಾಶ ನೀಡಿಲ್ಲ. ಎರಡೂ ಆಡಳಿತಗಳ ಅಡಿ, 50,000 ರೂ. ಪ್ರಮಾಣಿತ ಕಡಿತವು ಸಂಬಳದ ಆದಾಯದ ಮೇಲೆ ಮಾತ್ರ ಅನ್ವಯಿಸುತ್ತದೆ. ಆದರೆ, ಯಾವುದೇ ಮೂಲದಿಂದಲ್ಲ ಎಂಬುದನ್ನು ಗಮನಿಸಬೇಕು.

ಶೇ.4ರಷ್ಟು ಶಿಕ್ಷಣದ ಸೆಸ್ ವಿಧಿಸಲಾಗುವುದು: ಹೊಸ ಮತ್ತು ಹಳೆಯ ತೆರಿಗೆ ಪದ್ಧತಿಯಲ್ಲಿ ಯಾವುದು ಉತ್ತಮ ಎನ್ನುವುದನ್ನು ಅರಿತುಕೊಳಬೇಕಿದೆ. ಒಬ್ಬ ವ್ಯಕ್ತಿಯ ವಾರ್ಷಿಕ ಆದಾಯವು 10 ಲಕ್ಷ ರೂ ಆಗಿದ್ದರೆ, ಹೊಸ ತೆರಿಗೆ ಪದ್ಧತಿಯಲ್ಲಿ ಅವನು 60,000 ರೂ. ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಹಳೆಯ ತೆರಿಗೆ ಪದ್ಧತಿ ವ್ಯಾಪ್ತಿಗೆ ಬರುವ ತೆರಿಗೆದಾರರು 1,12,500 ರೂ. ತೆರಿಗೆ ಪಾವತಿಸಬೇಕಾಗುತ್ತದೆ. ಶೇ.4ರಷ್ಟು ಶಿಕ್ಷಣದ ಸೆಸ್ ಅನ್ನು ಪ್ರತ್ಯೇಕವಾಗಿ ವಿಧಿಸಲಾಗುತ್ತದೆ. ಈ ರೀತಿಯಾಗಿ ಹೊಸ ತೆರಿಗೆ ಪದ್ಧತಿಯಲ್ಲಿ 10 ಲಕ್ಷ ರೂ.ವರೆಗಿನ ಆದಾಯದ ಮೇಲೆ 52,500 ರೂ.ಗಳ ತೆರಿಗೆ ಉಳಿತಾಯವಾಗಲಿದೆ.

ಮತ್ತೊಂದೆಡೆ, ಒಬ್ಬ ವ್ಯಕ್ತಿಯ ವಾರ್ಷಿಕ ಆದಾಯವು 15 ಲಕ್ಷ ರೂ. ಆಗಿದ್ದರೆ, ಹೊಸ ತೆರಿಗೆ ಪದ್ಧತಿಯಲ್ಲಿ, 1,50,000 ರೂ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಹಳೆಯ ತೆರಿಗೆ ಪದ್ಧತಿಯಲ್ಲಿದ್ದಾಗ 2,62,500 ರೂ. ತೆರಿಗೆ ಪಾವತಿಸಬೇಕಾಗುತ್ತಿತ್ತು. 4ರಷ್ಟು ಶಿಕ್ಷಣ ಸೆಸ್ ಅನ್ನು ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ. ಅಂದರೆ, 15 ಲಕ್ಷ ರೂ. ಆದಾಯ ಹೊಂದಿರುವ ವ್ಯಕ್ತಿಯು ಹೊಸ ತೆರಿಗೆ ಪದ್ಧತಿಯಲ್ಲಿ 1,12,500 ಕಡಿಮೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ತೆರಿಗೆದಾರರನ್ನು ಆಕರ್ಷಿಸುತ್ತಿದೆ ಹೊಸ ತೆರಿಗೆ ಪದ್ಧತಿ: ತೆರಿಗೆ ತಜ್ಞರ ಪ್ರಕಾರ, ಹೊಸ ತೆರಿಗೆ ಪದ್ಧತಿಯು ಕಡಿತ ಮತ್ತು ಎಚ್‌ಆರ್‌ಎ ಪಡೆಯದ ತೆರಿಗೆದಾರರನ್ನು ಆಕರ್ಷಿಸಬಹುದು. ಆದಾಗ್ಯೂ, ಕಡಿತದ ಲಾಭವನ್ನು ಪಡೆಯುವ ತೆರಿಗೆದಾರರಿಗೆ ಹಳೆಯ ತೆರಿಗೆ ಪದ್ಧತಿಯು ಇನ್ನೂ ಪ್ರಲೋಭನೆಯನ್ನು ಉಂಟುಮಾಡುವ ಸಾಧ್ಯತೆಯಿದೆ.

ವಿಭಿನ್ನ ಸಂಬಳದ ಆದಾಯದ ಕಡಿತದ ಮಿತಿಯನ್ನು ಈ ಚಾರ್ಟ್ ತೋರಿಸುತ್ತದೆ. ಇದು ತೆರಿಗೆದಾರನಿಗೆ ಯಾವ ತೆರಿಗೆ ಪದ್ಧತಿಯು ಉತ್ತಮವಾಗಿದೆ ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅಂತ್ಯೋದಯ ಯೋಜನೆ; ಮುಂದಿನ ಬಜೆಟ್​ವರೆಗೂ ಮುಂದುವರಿಕೆ

Last Updated :Feb 4, 2023, 6:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.