ETV Bharat / business

ಜಿಎಸ್​ಟಿ ಸಂಗ್ರಹ ಶೇ 12ರಷ್ಟು ಹೆಚ್ಚಳ; ಏರುಗತಿಯಲ್ಲಿ ಭಾರತದ ಆರ್ಥಿಕತೆ

author img

By

Published : Jul 6, 2023, 4:14 PM IST

ಭಾರತದ ಜಿಎಸ್​ಟಿ ಸಂಗ್ರಹಣೆಗಳು ಅತ್ಯುತ್ತಮವಾಗಿದ್ದು, ದೇಶದ ಆರ್ಥಿಕತೆ ಏರುಗತಿಯಲ್ಲಿ ಸಾಗುತ್ತಿರುವುದನ್ನು ಸೂಚಿಸುತ್ತಿದೆ.

high gst collection reflects india's upbeat economic trend
high gst collection reflects india's upbeat economic trend

ನವದೆಹಲಿ : ಭಾರತೀಯ ಆರ್ಥಿಕತೆಯು ಅತ್ಯುತ್ತಮ ಸಾಧನೆ ಮಾಡುತ್ತಿರುವುದು ಅಂಕಿ - ಅಂಶಗಳಿಂದ ತಿಳಿದು ಬರುತ್ತಿದೆ. ಜೂನ್ 2023 ರಲ್ಲಿ ಒಟ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯವು 1,61,497 ಕೋಟಿ ರೂಪಾಯಿಗಳಾಗಿರುವುದು ಇದಕ್ಕೆ ಒಂದು ಸಾಕ್ಷಿಯಾಗಿದೆ. ಜಿಎಸ್​ಟಿ ಸಂಗ್ರಹ ಕಳೆದ ವರ್ಷಕ್ಕಿಂತ ಶೇಕಡಾ 12 ರಷ್ಟು ಹೆಚ್ಚಾಗಿದೆ. ಜಿಎಸ್‌ಟಿ ತೆರಿಗೆ ನೀತಿಯನ್ನು ಭಾರತದಲ್ಲಿ ಆರು ವರ್ಷಗಳ ಹಿಂದೆ ಜಾರಿಗೆ ತರಲಾಗಿತ್ತು.

ಜೂನ್‌ನಲ್ಲಿ ಸಂಗ್ರಹವಾದ ಒಟ್ಟು 1.61 ಲಕ್ಷ ಕೋಟಿ ರೂ.ಗಳಲ್ಲಿ, ಸಿಜಿಎಸ್‌ಟಿ ರೂ. 31,013 ಕೋಟಿ, ಎಸ್‌ಜಿಎಸ್‌ಟಿ ರೂ. 38,292 ಕೋಟಿ, ಐಜಿಎಸ್‌ಟಿ ರೂ. 80,292 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ ರೂ. 39,035 ಕೋಟಿ ಸೇರಿದಂತೆ) ಮತ್ತು ಸೆಸ್ ರೂ. 11,900 ಕೋಟಿ (1,028 ಕೋಟಿ ಸೇರಿದಂತೆ ಸರಕುಗಳ ಆಮದು ಮೇಲೆ ಸಂಗ್ರಹಿಸಲಾಗಿದೆ) ಆಗಿದೆ.

ಹಲವು ಸಾಮಾನ್ಯ ಬಳಕೆಯ ವಸ್ತುಗಳ ಮೇಲೆ, GST ಅಡಿಯಲ್ಲಿ ತೆರಿಗೆಯು GST ಪೂರ್ವದ ತೆರಿಗೆ ದರಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ: ಜಿಎಸ್​ಟಿ ಅಡಿಯಲ್ಲಿ ಚಹಾ, ಹಾಲಿನ ಪುಡಿ, ಸಕ್ಕರೆ, ಖಾದ್ಯ ಸಸ್ಯಜನ್ಯ ಎಣ್ಣೆಗಳು, ಮಸಾಲೆಗಳು ಮತ್ತು ಪಾದರಕ್ಷೆಗಳಂತಹ ವಸ್ತುಗಳಿಗೆ (ರೂ. 500 ವರೆಗೆ ಬೆಲೆ) ಶೇಕಡಾ 5 ರಷ್ಟು ತೆರಿಗೆ ಇದೆ. ಜಿಎಸ್​ಟಿಗೂ ಮುನ್ನ ಹಳೆಯ ತೆರಿಗೆ ಪದ್ಧತಿಯಲ್ಲಿ ಇವುಗಳಿಗೆ ಶೇಕಡಾ 6 ರಿಂದ 10 ರಷ್ಟು ತೆರಿಗೆ ಇತ್ತು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ. ಅತ್ಯಧಿಕ ಜಿಎಸ್​ಟಿ ಸಂಗ್ರಹವು ದೇಶದಲ್ಲಿ ಬಳಕೆಯ ಮಟ್ಟಗಳು ಹೆಚ್ಚುತ್ತಿದೆ ಮತ್ತು ಆರ್ಥಿಕ ಚಟುವಟಿಕೆಗಳು ಹೆಚ್ಚುತ್ತಿವೆ ಎಂಬುದನ್ನು ಸೂಚಿಸುತ್ತದೆ.

ದೇಶದ ದೊಡ್ಡಮಟ್ಟದ ಯುವ ಮತ್ತು ಉನ್ನತ ಮಧ್ಯಮ ಆದಾಯದ ಜನಸಂಖ್ಯೆಯು ಹೆಚ್ಚುತ್ತಿರುವ ಪಾಲಿನ ಆಧಾರದಲ್ಲಿ ಭಾರತದ ಬಳಕೆ ಚಾಲಿತ ಬೆಳವಣಿಗೆ ಮುಂದುವರಿಯುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಹೂಡಿಕೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಮುಂದಿನ ಕೆಲ ದಶಕಗಳವರೆಗೆ ನಿರಂತರ ದೇಶೀಯ ಬೇಡಿಕೆ ನೇತೃತ್ವದ ಬೆಳವಣಿಗೆಯ ಹಾದಿಯಲ್ಲಿ ಭಾರತಕ್ಕೆ ಅಗತ್ಯವಾದ ಆವೇಗವನ್ನು ಒದಗಿಸುವ ಹೂಡಿಕೆಗಳು ಭಾರತಕ್ಕೆ ಬೇಕಾಗಿವೆ ಎಂದು ಡಾ ರುಮ್ಕಿ ಮಜುಂದಾರ್ ಅವರ ಡೆಲಾಯ್ಟ್ ಇನ್‌ಸೈಟ್ಸ್ ವರದಿ ತಿಳಿಸಿದೆ.

ಎರಡು ಅವಲೋಕನಗಳನ್ನು ಗಮನಿಸುವುದು ಮುಖ್ಯವಾಗಿದೆ: ಜಾಗತಿಕ ಮಂದಗತಿಯ ಹೊರತಾಗಿಯೂ ಭಾರತದಲ್ಲಿ ರಫ್ತುಗಳು ಉತ್ತಮವಾಗಿದ್ದವು. ಬಹುಶಃ ಡಾಲರ್ ವಿರುದ್ಧ ರೂಪಾಯಿ ಕರೆನ್ಸಿಯ ಸವಕಳಿ ಇದಕ್ಕೆ ಕಾರಣವಾಗಿರಬಹುದು. ಸರಕುಗಳ ರಫ್ತು ಸಾಧಾರಣವಾಗಿ ಉಳಿದಿದ್ದರೂ, ಭಾರತದ ಸೇವಾ ರಫ್ತುಗಳು ಏಪ್ರಿಲ್ ಮತ್ತು ಫೆಬ್ರವರಿ ನಡುವೆ ಶೇಕಡಾ 30 ರಷ್ಟು ಹೆಚ್ಚಾಗಿವೆ ಎಂದು ವರದಿ ಹೇಳಿದೆ.

ಸರ್ಕಾರವು ಸಿಜಿಎಸ್‌ಟಿಗೆ 36,224 ಕೋಟಿ ಮತ್ತು ಐಜಿಎಸ್‌ಟಿಯಿಂದ ಎಸ್‌ಜಿಎಸ್‌ಟಿಗೆ 30,269 ಕೋಟಿ ರೂ. ಸೆಟ್ಲ್ ಮಾಡಿದೆ. ನಿಯಮಿತ ಸೆಟ್ಲಮೆಂಟ್​ ನಂತರ ಜೂನ್ 2023 ರಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು ಸಿಜಿಎಸ್​ಟಿ 67,237 ಕೋಟಿ ಮತ್ತು ಎಸ್​ಜಿಎಸ್​ಟಿ 68,561 ಕೋಟಿ ರೂ. ಆಗಿವೆ. ಜೂನ್ 2023 ರ ಆದಾಯವು ಕಳೆದ ವರ್ಷ ಇದೇ ತಿಂಗಳ ಜಿಎಸ್​ಟಿ ಆದಾಯಕ್ಕಿಂತ ಶೇಕಡಾ 12 ರಷ್ಟು ಹೆಚ್ಚಾಗಿದೆ. ತಿಂಗಳಿನಲ್ಲಿ, ದೇಶೀಯ ವಹಿವಾಟುಗಳಿಂದ (ಸೇವೆಗಳ ಆಮದು ಸೇರಿದಂತೆ) ಆದಾಯವು ಕಳೆದ ವರ್ಷದ ಇದೇ ತಿಂಗಳಿನಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ ಶೇಕಡಾ 18 ರಷ್ಟು ಹೆಚ್ಚಾಗಿದೆ.

ಇದು ನಾಲ್ಕನೇ ಬಾರಿಗೆ ಒಟ್ಟು ಜಿಎಸ್‌ಟಿ ಸಂಗ್ರಹವು 1.60 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. FY 2021-22, FY 22-23 ಮತ್ತು FY 23-24 ರ ಮೊದಲ ತ್ರೈಮಾಸಿಕದಲ್ಲಿ ಸರಾಸರಿ ಮಾಸಿಕ ಒಟ್ಟು GST ಸಂಗ್ರಹಣೆಯು ಕ್ರಮವಾಗಿ 1.10 ಲಕ್ಷ ಕೋಟಿ, 1.51 ಲಕ್ಷ ಕೋಟಿ ಮತ್ತು 1.69 ಲಕ್ಷ ಕೋಟಿ ರೂ. ಆಗಿದೆ.

ಇದನ್ನೂ ಓದಿ : Appointment of Chief Justices: 7 ಹೈಕೋರ್ಟ್​ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.