ETV Bharat / business

ಬಿಎಸ್​ಇ ಸೆನ್ಸೆಕ್ಸ್ 350 ಪಾಯಿಂಟ್​​ ಕುಸಿತ: ನಿಫ್ಟಿ 100 ಪಾಯಿಂಟ್ ಇಳಿಕೆ

author img

By

Published : Apr 7, 2022, 12:58 PM IST

ಜಾಗತಿಕ ಮಾರುಕಟ್ಟೆ ಪರಿಣಾಮ ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಉಂಟಾಗಿದ್ದು, ಸೆನ್ಸೆಕ್ಸ್ 350 ಮತ್ತು ನಿಫ್ಟಿ 100 ಪಾಯಿಂಟ್​ಗಳಷ್ಟು ಕುಸಿತ ಕಂಡಿವೆ.

Equity indices open in red, Sensex down by 350 points
ಬಿಎಸ್​ಇ ಸೆನ್ಸೆಕ್ಸ್ 350 ಪಾಯಿಂಟ್​​ ಕುಸಿತ: ನಿಫ್ಟಿ 100 ಪಾಯಿಂಟ್ ಇಳಿಕೆ

ಮುಂಬೈ(ಮಹಾರಾಷ್ಟ್ರ): ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಜಾಗತಿಕ ಮಾರುಕಟ್ಟೆ ಪರಿಣಾಮ ಉಂಟಾಗಿದ್ದು, ಬಿಎಸ್‌ಇ ಸೆನ್ಸೆಕ್ಸ್ 350 ಪಾಯಿಂಟ್‌ಗಳ ಕುಸಿತದೊಂದಿಗೆ 59,240ಕ್ಕೆ ತಲುಪಿದೆ ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಫ್ಟಿ 100 ಪಾಯಿಂಟ್‌ಗಳಷ್ಟು ಕಡಿಮೆಯಾಗಿ 17,700 ಮಟ್ಟದಲ್ಲಿದೆ.

ಹೆಚ್‌ಡಿಎಫ್‌ಸಿ, ಮಾರುತಿ, ಟೈಟಾನ್, ವಿಪ್ರೋ, ರಿಲಯನ್ಸ್, ಟಿಸಿಎಸ್, ಕೊಟಕ್ ಬ್ಯಾಂಕ್ ಮತ್ತು ಇನ್ಫೋಸಿಸ್​​ನ ಕಂಪ ಸೆನ್ಸೆಕ್ಸ್ ಶೇಕಡಾ 2ರವರೆಗೆ ಕುಸಿತ ಕಂಡಿವೆ. ಒಎನ್‌ಜಿಸಿ, ಯುಪಿಎಲ್ ಕಂಪನಿಗಳು ನಿಫ್ಟಿಯಲ್ಲಿ ಅತ್ಯಂತ ದೊಡ್ಡ ಮೊತ್ತದಲ್ಲಿ ಕುಸಿತ ಕಂಡಿವೆ. ಮತ್ತೊಂದೆಡೆ, ಡಾ.ರೆಡ್ಡೀಸ್, ಏಷ್ಯನ್ ಪೇಂಟ್ಸ್, ಸನ್ ಫಾರ್ಮಾ, ಟಾಟಾ ಸ್ಟೀಲ್, ಸಿಪ್ಲಾ ಮತ್ತು ಡಿವಿಸ್ ಲ್ಯಾಬ್ಸ್, ಎಚ್‌ಯುಎಲ್, ಎನ್‌ಟಿಪಿಸಿ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಗಳು ಅತಿ ಹೆಚ್ಚು ಗಳಿಸಿವೆ.

ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಕಂಪನಿಗಳ ಸೂಚ್ಯಂಕಗಳು ಸಕಾರಾತ್ಮಕವಾಗಿದ್ದು, ಶೇಕಡಾ 0.5ರಷ್ಟು ಬೆಳವಣಿಗೆ ಕಂಡಿವೆ. ವಲಯವಾರು ನೋಡುವುದಾದರೆ ನಿಫ್ಟಿಯಲ್ಲಿ ಹಣಕಾಸು, ಐಟಿ, ಬ್ಯಾಂಕ್‌ಗಳು ಮತ್ತು ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತ ಕಂಡುಬಂದಿದೆ. ಫಾರ್ಮಾ ಮತ್ತು ಎಫ್‌ಎಂಸಿಜಿ ಪ್ಯಾಕ್ ಬೆಳವಣಿಗೆ ಕಂಡಿವೆ.

ಷೇರುಗಳ ಪೈಕಿ, ಸರ್ಕಾರದ ಟೆಲಿಕಾಂ ಸಂಸ್ಥೆ ಎಂಟಿಎನ್​ಎಲ್​ ಶೇಕಡಾ 4ರಷ್ಟು ಏರಿಕೆಯಾಗಿದೆ. ಆರ್ಥಿಕ ಕಾರಣಗಳಿಂದಾಗಿ ಸರ್ಕಾರವು ಬಿಎಸ್​ಎನ್​ಎಲ್ ಮತ್ತು ಎಂಟಿಎನ್​ಎಲ್​ ವಿಲೀನವನ್ನು ಮುಂದೂಡಿದೆ. ಐಡಿಎಫ್​ಸಿ ಲಿಮಿಟೆಡ್ ಶೇಕಡಾ 7ರಷ್ಟು ಕುಸಿದಿದೆ. ಬಂಧನ್ ಫೈನಾನ್ಶಿಯಲ್ ಹೋಲ್ಡಿಂಗ್ ನೇತೃತ್ವದ ಒಕ್ಕೂಟವು ಐಡಿಎಫ್‌ಸಿ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿ ಮತ್ತು ಐಡಿಎಫ್‌ಸಿ ಎಎಂಸಿ ಟ್ರಸ್ಟಿ ಕಂಪನಿಯನ್ನು 4,500 ಕೋಟಿ ರೂಪಾಯಿಗೆ ಸ್ವಾಧೀನಪಡಿಸಿಕೊಳ್ಳಲಿದೆ.

ರೂಪಾಯಿ ಮೌಲ್ಯ ಕುಸಿತ: ಅಮೆರಿಕದ ಫೆಡರಲ್‌ ರಿಸರ್ವ್‌ನ ಧೋರಣೆಯು ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಕರೆನ್ಸಿ ಮೌಲ್ಯ ಏರಿಕೆಯಾಗಿದ್ದು, ರೂಪಾಯಿ ಮೌಲ್ಯ 15 ಪೈಸೆ ಕುಸಿತ ಕಂಡಿದೆ. ಈಗ ಒಂದು ಡಾಲರ್​ಗೆ 75 ರೂಪಾಯಿ 99 ಪೈಸೆ ಮೌಲ್ಯವಿದೆ.

ಇದನ್ನೂ ಓದಿ: ಸಿಎನ್​ಜಿ ದರದಲ್ಲಿ ಮತ್ತೆ 2.50 ರೂ. ಏರಿಕೆ.. 6 ದಿನದಲ್ಲಿ ಪ್ರತಿ ಕೆಜಿಗೆ 9.10 ರೂ. ಹೆಚ್ಚಳ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.