ETV Bharat / business

5ಜಿ ನೆಟ್​ವರ್ಕ್​ಗೆ ಪ್ರಧಾನಿ ಮೋದಿ ಚಾಲನೆಗೆ ಕ್ಷಣಗಣನೆ.. ಅದರ ಸ್ಪೀಡ್​ ಎಷ್ಟಿದೆ ಗೊತ್ತಾ?

author img

By

Published : Oct 1, 2022, 9:17 AM IST

5-g-revolution-in-india
5 ಜಿ ನೆಟ್​ವರ್ಕ್​ಗೆ ಪ್ರಧಾನಿ ಮೋದಿ ಇಂದು ಚಾಲನೆ

5ಜಿ ಸೇವೆ ಚಾಲನೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ಪೀಡ್​ ನೆಟ್​ವರ್ಕ್​ಗೆ ಗ್ರೀನ್​ ಸಿಗ್ನಲ್​ ನೀಡಲಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಅಕ್ಟೋಬರ್ 1 ರಂದು) 5 ಜಿ ಇಂಟರ್​ನೆಟ್​ ಸೇವೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಇದು ದೇಶದ ಅಂತರ್ಜಾಲ ಸೇವೆಯಲ್ಲಿ ಮಹತ್ತರ ಬದಲಾವಣೆಗೆ ಮುನ್ನುಡಿ ಬರೆಯಲಿದೆ. ಮೊದಲ ಹಂತವಾಗಿ 5ಜಿ ದೂರಸಂಪರ್ಕ ಸೇವೆಯನ್ನು ಕೆಲ ಆಯ್ದ ನಗರಗಳಲ್ಲಿ ಮಾತ್ರ ಚಾಲನೆ ಸಿಗಲಿದ್ದು, ಮುಂದಿನ ಕೆಲ ವರ್ಷಗಳಲ್ಲಿ ಇಡೀ ದೇಶಾದ್ಯಂತ ವ್ಯಾಪಿಸಲಿದೆ. ಈ ಮೂಲಕ ದೇಶ ಹೊಸ ಮಜಲಿಗೆ ತಿರುಗಲಿದೆ.

ಏನಿದು 5 ಜಿ ಇಂಟರ್​ನೆಟ್​: 5ಜಿ ಎಂಬುದು 5ನೇ ಪೀಳಿಗೆಯ ಮೊಬೈಲ್​ ನೆಟ್​ವರ್ಕ್​ ಆಗಿದೆ. 4 ಜಿಗಿಂತಲೂ 20 ಪಟ್ಟು ಹೆಚ್ಚು ವೇಗದ ಇಂಟರ್​ನೆಟ್​ ಇದು ಒದಗಿಸುತ್ತದೆ. ಈ ಸುಧಾರಿತ ನೆಟ್​ವರ್ಕ್​ ಬಳಕೆದಾರರಿಗೆ ವಿಳಂಬ ಮುಕ್ತ ಸಂಪರ್ಕವನ್ನು ನೀಡುತ್ತದೆ.

ಓದಿ: ನಾಡಿದ್ದಿನಿಂದ 5ಜಿ ಯುಗ ಶುರು.. ನಮಗಿಂತ ಚೀನಾಕ್ಕೇ ಇದರ ಲಾಭ ಜಾಸ್ತಿಯಂತೆ!

ಇಂದು ಪ್ರಧಾನಿ ಮೋದಿ ಅವರು ದೇಶದ ವಿವಿಧ 13 ನಗರಗಳಲ್ಲಿ ಅತಿವೇಗದ ಅಂತರ್ಜಾಲ ಸೇವೆಗೆ ಚಾಲನೆ ನೀಡುತ್ತಿದ್ದರೂ, ಈಗಾಗಲೇ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ 5 ಜಿ ಸೇವೆ ಆರಂಭಿಸಲಾಗಿದೆ. ಇದು ಮುಂದಿನ ದಿನಗಳಲ್ಲಿ ವಿಸ್ತರಣೆ ಕಂಡು ದೇಶದೆಲ್ಲಾ ನಗರಗಳಿಗೂ 5 ಜಿ ಸಿಗಲಿದೆ.

5 ಜಿ ವೇಗ ಎಷ್ಟಿರುತ್ತದೆ: 4 ಜಿ ನೆಟ್​ವರ್ಕ್​ಗಿಂತ 5 ಜಿ 20 ಪಟ್ಟು ವೇಗವಾಗಿರುತ್ತದೆ. 4ಜಿ ಪ್ರತಿ ಸೆಕೆಂಡಿಗೆ 1 ಜಿಬಿಪಿಎಸ್​ ಇದ್ದರೆ, 5ಜಿ 20 ಗಿಗಾಬೈಟ್ ಇರುತ್ತದೆ. ಹೀಗಾಗಿ ಇದು ನೆಟ್​ವರ್ಕಿಂಗ್​ ಕ್ಷೇತ್ರದಲ್ಲಿ ಭಾರೀ ಬದಲಾವಣೆ ತರಲಿದೆ. ಇದರಿಂದ ಉದ್ಯೋಗ ಸೃಷ್ಟಿಯೂ ಆಗುವ ನಿರೀಕ್ಷೆ ಇದೆ.

4 ಜಿ ಬೆಲೆಗೆ 5 ಜಿ ಸೇವೆ ಸಿಗಲಿದೆ ಎಂದು ದೂರಸಂಪರ್ಕ ಕಂಪನಿಗಳು ಹೇಳಿದ್ದರೂ, ಇವುಗಳ ಮೊತ್ತ ಹೆಚ್ಚಿಸುವ ಸಾಧ್ಯತೆ ಇದೆ. ನೂತನ ನೆಟ್​ವರ್ಕ್ ಈಗಿನವುಗಳ ಬದಲಾಗಿ 5 ಜಿ ತಂತ್ರಾಂಶವುಳ್ಳ ಮೊಬೈಲ್​ಗಳಲ್ಲಿ ಮಾತ್ರ ಲಭ್ಯವಾಗಲಿದೆ.

1 ಜಿ- ಈ ನೆಟ್​ವರ್ಕ್​ 1980 ರಲ್ಲಿ ಪರಿಚಯಿಸಲಾಯಿತು. ಇದು ಅನ್​ಲಾಗ್​ ಧ್ವನಿ ಮಾತ್ರ ರವಾನಿಸುತ್ತಿತ್ತು.

2 ಜಿ- 1990 ರಲ್ಲಿ ಪರಿಚಯಿಸಲಾದ ಇದು ಡಿಜಿಟಲ್​ ಧ್ವನಿ ಕರೆಗೆ ನೆರವಾಯಿತು.

3 ಜಿ- 2000ನೇ ದಶಕದಲ್ಲಿ ಬಂದ ಈ ನೆಟ್​ವರ್ಕ್​ ಸೇವೆ ಮೊಬೈಲ್​ ಡೇಟಾ ಬಳಕೆಗೆ ಸಿಕ್ಕಿತು.

4 ಜಿ- 2010 ರಲ್ಲಿ ಪರಿಚಯಿಸಿದ ಇದು ಮೊಬೈಲ್​ ಬ್ರಾಡ್​ಬ್ಯಾಂಡ್​ ಅನ್ನು ಪರಿಚಯಿಸಿತು.

5 ಜಿ- 2022 ಅತಿ ವೇಗದ ನೆಟ್​ವರ್ಕ್​ ಹೊಂದಿದ 73 ನೇ ರಾಷ್ಟ್ರವಾಗಿ ಭಾರತ ದಾಖಲಿಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.