ETV Bharat / business

ಕೊರೊನಾ ಸೋಂಕಿಗೆ ಕರಗಿದ ಇಂಧನ ದರ... 1.47 ರೂ. ಕುಸಿದ ಡೀಸೆಲ್​... ಪೆಟ್ರೋಲ್​ ದರವೆಷ್ಟು ಗೊತ್ತೆ?

author img

By

Published : Jan 28, 2020, 6:17 PM IST

Fuel
ಇಂಧನ

ಬ್ರೆಂಟ್​ ಕಚ್ಚಾ ತೈಲ ದರ ಇಳಿಕೆಯ ತತ್ಪರಿಣಾಮ ದೇಶಿಯ ಇಂಧನ ಚಿಲ್ಲರೆ ಮಾರುಕಟ್ಟೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್​ ಬೆಲೆಯಲ್ಲಿ ಸತತ 6 ದಿನಗವೂ ಇಳಿಕೆ ಕಂಡಿದೆ. ಈ ಆರು ದಿನಗಳಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ಕ್ರಮವಾಗಿ ₹ 1.22 ಹಾಗೂ ₹ 1.47ಯಷ್ಟು ಇಳಿಕೆಯಾದಂತಾಗಿದೆ. ಇಂದು (ಮಂಗಳವಾರ) ಕೂಡ ಅನುಕ್ರಮವಾಗಿ 11 ಪೈಸೆ ಹಾಗೂ 13 ಪೈಸೆಯಷ್ಟ ತಗ್ಗಿದೆ.

ನವದೆಹಲಿ: ಚೀನಾದಲ್ಲಿ ಹಬ್ಬಿರುವ ಮಹಾಮಾರಿ ಕೊರೊನಾ ವೈರಾಣುನಿಂದಾಗಿ ಜಾಗತಿಕ ಬೆಳವಣಿಗೆ ಕುಸಿತಗೊಂಡು ಬೇಡಿಕೆ ಸಹ ಕ್ಷೀಣಿಸಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳೆದ ವಾರದಿಂದ ಕಚ್ಚಾ ತೈಲ ದರದಲ್ಲಿ ಇಳಿಕೆಯಾಗುತ್ತಿದೆ.

ಬ್ರೆಂಟ್​ ಕಚ್ಚಾ ತೈಲ ದರ ಇಳಿಕೆಯ ತತ್ಪರಿಣಾಮ ದೇಶಿಯ ಇಂಧನ ಚಿಲ್ಲರೆ ಮಾರುಕಟ್ಟೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್​ ಬೆಲೆಯಲ್ಲಿ ಸತತ 6 ದಿನಗಳೂ ಕ್ಷೀಣಿಸಿದೆ. ಈ ಆರು ದಿನಗಳಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ಕ್ರಮವಾಗಿ ₹ 1.22 ಹಾಗೂ ₹ 1.47ಯಷ್ಟು ಇಳಿಕೆಯಾದಂತಾಗಿದೆ. ಇಂದು (ಮಂಗಳವಾರ) ಕೂಡ ಅನುಕ್ರಮವಾಗಿ 11 ಪೈಸೆ ಹಾಗೂ 13 ಪೈಸೆಯಷ್ಟ ತಗ್ಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್​ ₹ 73.60 ಹಾಗೂ ಡೀಸೆಲ್​ ₹ 66.58 ದರದಲ್ಲಿ ಮಾರಾಟ ಆಗುತ್ತಿದೆ. ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್​, ಗುರುಗ್ರಾಮ್​ನಲ್ಲಿ ಕ್ರಮವಾಗಿ ₹ 79.21 & ₹ 69.79, ₹ 76.06 & ₹ 68.79, ₹76.44 & ₹ 70.33, ₹78.26 & ₹72.60 ಹಾಗೂ ₹ 73.35 & ₹ 65.77 ಕೊಟ್ಟು ಗ್ರಾಹಕರು ಖರೀದಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.