ನವದೆಹಲಿ: ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಕ್ರಮವಾಗಿ 15 ಪೈಸೆ ಹಾಗೂ 14 ಪೈಸೆ ಇಳಿಕೆಯಾಗಿದೆ.
ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ₹ 75.55ರಲ್ಲಿ ಮಾರಾಟವಾಗುತ್ತಿದೆ. ಉಳಿದಂತೆ ಮುಂಬೈ, ಕೋಲ್ಕತ್ತಾ, ಚೆನ್ನೈ ಹಾಗೂ ಬೆಂಗಳೂರಲ್ಲಿ ಕ್ರಮವಾಗಿ ₹ 81.14, ₹ 78.23, ₹ 78.49 ಹಾಗೂ ₹ 77.32 ಲಭ್ಯವಾಗುತ್ತಿದೆ.
ಅಂತೆಯೇ, ದೆಹಲಿಯಲ್ಲಿ ಡೀಸೆಲ್ ದರ ₹ 68.92, ಮುಂಬೈ, ಕೋಲ್ಕತ್ತಾ, ಚೆನ್ನೈ ಮತ್ತು ಬೆಂಗಳೂರಲ್ಲಿ ಅನುಕ್ರಮವಾಗಿ ₹ 72.27, ₹ 71.29, ₹ 72.83 ಹಾಗೂ ₹ 67.97 ಗ್ರಾಹಕರು ಖರೀದಿಸುತ್ತಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದ ವೇಳೆ ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್ಗೆ 70 ಡಾಲರ್ಗೆ ತಲುಪಿತ್ತು. ಈಗ ಅದು 64 ಡಾಲರ್ಗೆ ಇಳಿಕೆಯಾಗಿದೆ.