ETV Bharat / business

ಬ್ರೆಕ್ಸಿಟ್ ಬಳಿಕ ಐರೋಪ್ಯ ಒಕ್ಕೂಟದ ಜತೆ ಬ್ರಿಟನ್ ಮಹತ್ವದ ಒಪ್ಪಂದಕ್ಕೆ ಸಹಿ!

author img

By

Published : Dec 24, 2020, 10:06 PM IST

UK  PM
ಬೋರಿಸ್ ಜಾನ್ಸನ್

ಐರೋಪ್ಯ ಒಕ್ಕೂಟ ಮತ್ತು ಬ್ರಿಟನ್​​​​​ ಒಪ್ಪಂದ ಬಳಿಕ ಮಾತನಾಡಿದ ಯುರೋಪಿಯನ್ ಆಯೋಗದ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್, ಇದೊಂದು ಬಹು ಉದ್ದವಾದ ಮತ್ತು ಅಂಕು ಡೊಂಕಾದ ರಸ್ತೆಯಾಗಿದೆ. ಆದರೆ, ಅದರ ಅಂತ್ಯದಲ್ಲಿ ನಮಗೆ ಉತ್ತಮ ವ್ಯವಹಾರವಿದೆ. ಏಕ ಮಾರುಕಟ್ಟೆ ನ್ಯಾಯೋಚಿತವಾಗಿರುತ್ತದೆ ಮತ್ತು ಹಾಗೆಯೇ ಉಳಿಯುತ್ತದೆ ಎಂದರು.

ಬ್ರಸೆಲ್ಸ್: ಯುರೋಪಿಯನ್ ಒಕ್ಕೂಟ ಮತ್ತು ಬ್ರಿಟನ್ ಜಂಟಿಯಾಗಿ ಬ್ರೆಕ್ಸಿಟ್ ನಂತರದ ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದು, 10 ತಿಂಗಳ ಕಠಿಣ ಮಾತುಕತೆ ಬಳಿಕ ಇಂಗ್ಲೆಂಡ್​ ಒಂದೇ ಮಾರುಕಟ್ಟೆಯಿಂದ ಹೊರ ಹೋಗುವ ಆರ್ಥಿಕ ಹೊಡೆತದಿಂದ ತಪ್ಪಿಸಿಕೊಂಡಿದೆ.

ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಒನ್​ಲೈನ್​ ಟ್ವೀಟ್ ಮಾಡಿದ್ದಾರೆ. ನಾವು ಅಂತಿಮವಾಗಿ ಒಪ್ಪಂದವನ್ನು ಕಂಡುಕೊಂಡಿದ್ದೇವೆ ಎಂದು ಯುರೋಪಿಯನ್ ಆಯೋಗದ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಹೇಳಿದ್ದಾರೆ.

ಇದೊಂದು ಬಹು ಉದ್ದವಾದ ಮತ್ತು ಅಂಕುಡೊಂಕಾದ ರಸ್ತೆಯಾಗಿದೆ. ಆದರೆ, ಅದರ ಅಂತ್ಯದಲ್ಲಿ ನಮಗೆ ಉತ್ತಮ ವ್ಯವಹಾರವಿದೆ. ಏಕ ಮಾರುಕಟ್ಟೆ ನ್ಯಾಯೋಚಿತವಾಗಿರುತ್ತದೆ ಮತ್ತು ಹಾಗೆಯೇ ಉಳಿಯುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವೊಡಾಫೋನ್​ ಪೂರ್ವಾನ್ವಯ ತೆರಿಗೆ ವಿವಾದ: ಸಿಂಗಾಪೂರ್​ ಕೋರ್ಟ್​ ಆದೇಶ ಪ್ರಶ್ನಿಸಿದ ಕೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.