ETV Bharat / business

ಗೂಗಲ್​ ಪೇಸ್ಟೋರ್​ನಿಂದ 'Paytm ಆ್ಯಪ್'​ ಡಿಲೀಟ್​.. 'ಯಾರೂ ಭಯಪಡಬೇಡಿ' ಎಂದ ಪೇಟಿಎಂ

author img

By

Published : Sep 18, 2020, 5:29 PM IST

Paytm
ಪೇಟಿಎಂ

ಗೂಗಲ್ ವ್ಯಾಲೆಟ್‌ ಪೇಟ್‌ಎಂ ಪಾವತಿ ಆ್ಯಪ್‌ನ ಗೂಗಲ್ ಪ್ಲೇಸ್ಟೋರ್‌ನಿಂದ ತೆಗೆದು ಹಾಕಲಾಗಿದೆ. 'ಅನಿಯಂತ್ರಿತ ಜೂಜಿನ ಅಪ್ಲಿಕೇಷನ್‌' ಎಂದು ಪರಿಗಣಿಸಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಗೂಗಲ್ ಬ್ಲಾಗ್ ಪೋಸ್ಟ್ ತಿಳಿಸಿತು..

ನವದೆಹಲಿ : ಗೂಗಲ್ ಪ್ಲೇ ಸ್ಟೋರ್‌ನಿಂದ ಪೇಟಿಎಂ ಆ್ಯಪ್‌ ತೆಗೆದು ಹಾಕಿದ ಬಳಿಕ ಡಿಜಿಟಲ್​ ಪಾವತಿ ಸೇವಾ ಕಂಪನಿಯು ಬಳಕೆದಾರರಿಗೆ ತನ್ನ ಸ್ಪಷ್ಟನೆ ನೀಡಿದೆ. ಪೇಟಿಎಂ ಬಳಕೆದಾರರು ಭಯಪಡಬೇಡಿ ಮತ್ತು ನಿಮ್ಮ ಹಣವು ಸಂಪೂರ್ಣ ಸುರಕ್ಷಿತವಾಗಿದೆ.

ಹೊಸ ಡೌನ್‌ಲೋಡ್‌ ಅಥವಾ ನವೀಕರಣಕ್ಕೆ ಗೂಗಲ್‌ನ ಪ್ಲೇ ಸ್ಟೋರ್‌ನಲ್ಲಿ ಪೇಟಿಎಂ ಆ್ಯಂಡ್ರಾಯ್ಡ್ ಅಪ್ಲಿಕೇಷನ್‌ ತಾತ್ಕಾಲಿಕವಾಗಿ ಲಭ್ಯವಿಲ್ಲ ಎಂದು ಟ್ವೀಟ್‌ನಲ್ಲಿ ಪೇಟಿಎಂ ತಿಳಿಸಿದೆ. ಆತ್ಮೀಯ ಪೇಟಿಎಂದಾರರೆ, ಪೇಟಿಎಂ ಆ್ಯಂಡ್ರಾಯ್ಡ್​ ಅಪ್ಲಿಕೇಷನ್ ಹೊಸ ಡೌನ್‌ಲೋಡ್‌ಗಳು ಅಥವಾ ನವೀಕರಣಗಳಿಗೆ ಗೂಗಲ್​ನ ಪ್ಲೋಸ್ಟೋರ್​​ನಲ್ಲಿ ತಾತ್ಕಾಲಿಕವಾಗಿ ಲಭ್ಯವಿಲ್ಲ. ಅದು ಶೀಘ್ರದಲ್ಲೇ ಹಿಂತಿರುಗಲಿದೆ. ನಿಮ್ಮ ಎಲ್ಲಾ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಪೇಟಿಎಂ ಆ್ಯಪ್​ ಸಾಮಾನ್ಯ ಸ್ಥಿತಿಗೆ ಮರಳಿದ ಬಳಿಕೆ ನಿಮ್ಮ ವಹಿವಾಟು ಮುಂದುವರಿಸಬಹುದು ಎಂದು ಟ್ವಿಟರ್​ನಲ್ಲಿ ಹೇಳಿದೆ.

  • Dear Paytm'ers,

    Paytm Android app is temporarily unavailable on Google's Play Store for new downloads or updates. It will be back very soon.

    All your money is completely safe, and you can continue to enjoy your Paytm app as normal.

    — Paytm (@Paytm) September 18, 2020 " class="align-text-top noRightClick twitterSection" data=" ">

ಗೂಗಲ್ ವ್ಯಾಲೆಟ್‌ ಪೇಟ್‌ಎಂ ಪಾವತಿ ಆ್ಯಪ್‌ನ ಗೂಗಲ್ ಪ್ಲೇಸ್ಟೋರ್‌ನಿಂದ ತೆಗೆದು ಹಾಕಲಾಗಿದೆ. 'ಅನಿಯಂತ್ರಿತ ಜೂಜಿನ ಅಪ್ಲಿಕೇಷನ್‌' ಎಂದು ಪರಿಗಣಿಸಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಗೂಗಲ್ ಬ್ಲಾಗ್ ಪೋಸ್ಟ್ ತಿಳಿಸಿತು.

ನಾವು ಆನ್‌ಲೈನ್ ಕ್ಯಾಸಿನೋಗಳನ್ನು ಅನುಮತಿಸುವುದಿಲ್ಲ. ಕ್ರೀಡಾ ಬೆಟ್ಟಿಂಗ್‌ಗೆ ಅನುಕೂಲವಾಗುವ ಯಾವುದೇ ಅನಿಯಂತ್ರಿತ ಜೂಜಾಟದ ಅಪ್ಲಿಕೇಷನ್‌ಗಳನ್ನು ಬೆಂಬಲಿಸುವುದಿಲ್ಲ. ಅಪ್ಲಿಕೇಷನ್ ಬಾಹ್ಯ ವೆಬ್‌ಸೈಟ್‌ಗೆ ಗ್ರಾಹಕರನ್ನು ಕರೆದೊಯ್ಯುತ್ತಿವೆ. ನಗದು ಬಹುಮಾನಗಳನ್ನು ಗೆಲ್ಲಲು ಪಾವತಿ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ ಎಂದು ದೂರಿ ಆ್ಯಪ್‌ನ ನಿಷ್ಕ್ರಿಯಗೊಳಿಸಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.