ETV Bharat / business

₹ 9,500 ಕೋಟಿ ಮೌಲ್ಯದ ಷೇರು ಮರು ಖರೀದಿಸಲಿರುವ ವಿಪ್ರೋ: ಪ್ರತಿ ಷೇರು ಬೆಲೆ ಎಷ್ಟು ಗೊತ್ತೇ?

author img

By

Published : Dec 24, 2020, 7:33 PM IST

wipro
ವಿಪ್ರೋ ಷೇರು

ಈಕ್ವಿಟಿ ಷೇರಿಗೆ 400 ರೂ. ಬೆಲೆ ನಿಗದಿಪಡಿಸಲಾಗಿದ್ದು, ಇದು ಪ್ರಸ್ತುತ ಮಾರುಕಟ್ಟೆ ಬೆಲೆಗೆ ಹೋಲಿಸಿದರೆ ಪ್ರೀಮಿಯಂನಲ್ಲಿದೆ. ಪ್ರವರ್ತಕರು ಮತ್ತು ಪ್ರವರ್ತಕ ಗ್ರೂಪಿನ ಸದಸ್ಯರು ಬೈ ಬ್ಯಾಕ್​​ನಲ್ಲಿ ಭಾಗವಹಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಗರಿಷ್ಠ 414 ಕೋಟಿ ಈಕ್ವಿಟಿ ಷೇರುಗಳನ್ನು ಟೆಂಡರ್ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು: ಸಿಲಿಕಾನ್ ಸಿಟಿಯ ಐಟಿ ದಿಗ್ಗಜ ಕಂಪನಿ ವಿಪ್ರೋ ಇದುವರೆಗೂ ಮಾರಾಟ ಮಾಡದಿರುವಷ್ಟು ಅತೀ ಹೆಚ್ಚಿನ ಪ್ರಮಾಣದಲ್ಲಿ ಷೇರುಗಳ ಮರು ಖರೀದಿಗೆ (ಬೈ ಬ್ಯಾಕ್‌) ಮುಂದಾಗಿದೆ.

ವಿಪ್ರೋ ಗುರುವಾರ 9,500 ಕೋಟಿ ರೂ.ಮರು ಖರೀದಿ ಯೋಜನೆ ಸಂಬಂಧ ಪತ್ರ ಮತ್ತು ಟೆಂಡರ್ ಫಾರ್ಮ್ ಅನ್ನು ಡಿಸೆಂಬರ್ 29ರಂದು ತೆರೆಯಲಿದೆ. ಇದು ಜನವರಿ 11ರವರೆಗೆ ಲಭ್ಯವಿರುತ್ತದೆ. ಬಿಡ್‌ ಇತ್ಯರ್ಥಪಡಿಸುವ ಕೊನೆಯ ದಿನಾಂಕ ಜನವರಿ 20.

ಈಕ್ವಿಟಿ ಷೇರಿಗೆ 400 ರೂ. ಬೆಲೆ ನಿಗದಿಪಡಿಸಲಾಗಿದ್ದು, ಇದು ಪ್ರಸ್ತುತ ಮಾರುಕಟ್ಟೆ ಬೆಲೆಗೆ ಹೋಲಿಸಿದರೆ ಪ್ರೀಮಿಯಂನಲ್ಲಿದೆ. ಪ್ರವರ್ತಕರು ಮತ್ತು ಪ್ರವರ್ತಕ ಗ್ರೂಪಿನ ಸದಸ್ಯರು ಬೈ ಬ್ಯಾಕ್​​ನಲ್ಲಿ ಭಾಗವಹಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಗರಿಷ್ಠ 414 ಕೋಟಿ ಈಕ್ವಿಟಿ ಷೇರುಗಳನ್ನು ಟೆಂಡರ್ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಉಡಾಫೆ ತೆರಿಗೆದಾರರ ಗಮನಕ್ಕೆ! ಐಟಿ ನೋಟಿಸ್ ನಿರ್ಲಕ್ಷಿಸಿದರೆ ನಿಮ್ಮ ಖಾತೆ​, ಸ್ವತ್ತಿಗೆ ಬರುತ್ತೆ ಕುತ್ತು!

ಪ್ರಸ್ತುತ, ಪ್ರವರ್ತಕ ಮತ್ತು ಪ್ರವರ್ತಕ ಗ್ರೂಪ್​ ಕಂಪನಿಯ ಒಟ್ಟು ಬಾಕಿ ಈಕ್ವಿಟಿ ಷೇರು ಬಂಡವಾಳದಲ್ಲಿ 422 ಕೋಟಿ ಈಕ್ವಿಟಿ ಷೇರು ಅಥವಾ ಶೇ 74.01ರಷ್ಟು ಷೇರು ಹೊಂದಿದೆ. ಒಟ್ಟು ಷೇರುದಾರರಲ್ಲಿ ಅಜೀಮ್ ಹೆಚ್ ಪ್ರೇಮ್‌ಜಿ 23.68 ಕೋಟಿ ಈಕ್ವಿಟಿ ಷೇರು ಹೊಂದಿದ್ದಾರೆ.

ಬೈ ಬ್ಯಾಕ್​ ಪ್ರಮಾಣವು ಕಂಪನಿಯ ಒಟ್ಟು ವಿತರಣೆ ಮತ್ತು ಪಾವತಿಸಿದ ಈಕ್ವಿಟಿ ಷೇರು ಬಂಡವಾಳದ ಶೇ 4.16ರಷ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.