ETV Bharat / business

ಕೊರೊನಾ ಮೆಟ್ಟಿ ನಿಂತ ಐಟಿ ದಿಗ್ಗಜ ವಿಪ್ರೋ: ಡಿಸೆಂಬರ್ ತ್ರೈಮಾಸಿಕದ ಗಳಿಕೆ ಎಷ್ಟು ಗೊತ್ತಾ?

author img

By

Published : Jan 13, 2021, 6:39 PM IST

Wipro
ವಿಪ್ರೋ

ಹಿಂದಿನ ವರ್ಷದ ಅವಧಿಯಲ್ಲಿ ಷೇರುದಾರರಿಗೆ ನಿವ್ವಳ ಲಾಭ 2,455.9 ಕೋಟಿ ರೂ. ನೀಡಲಾಗಿದೆ. 2019ರ ಡಿಸೆಂಬರ್‌ನಿಂದ ಕೊನೆಗೊಂಡ ತ್ರೈಮಾಸಿಕದಲ್ಲಿ ಕಾರ್ಯಾಚರಣೆಗಳಿಂದ ಬಂದ ಆದಾಯವು ಸುಮಾರು ಶೇ 1.3ರಷ್ಟು ಏರಿಕೆಯಾಗಿ 15,670 ಕೋಟಿ ರೂ.ನಷ್ಟಿದೆ.

ನವದೆಹಲಿ: 2020ರ ತ್ರೈಮಾಸಿಕದಲ್ಲಿ ಐಟಿ ಸೇವೆಗಳ ಪ್ರಮುಖ ವಿಪ್ರೋ ಏಕೀಕೃತ ನಿವ್ವಳ ಲಾಭದಲ್ಲಿ ಶೇ 21ರಷ್ಟು ಹೆಚ್ಚಳ ಕಂಡು 2,968 ಕೋಟಿ ರೂ.ನಷ್ಟಾಗಿದೆ.

ಹಿಂದಿನ ವರ್ಷದ ಅವಧಿಯಲ್ಲಿ ಷೇರುದಾರರಿಗೆ ನಿವ್ವಳ ಲಾಭ 2,455.9 ಕೋಟಿ ರೂ. ನೀಡಲಾಗಿದೆ. 2019ರ ಡಿಸೆಂಬರ್‌ನಿಂದ ಕೊನೆಗೊಂಡ ತ್ರೈಮಾಸಿಕದಲ್ಲಿ ಕಾರ್ಯಾಚರಣೆಗಳಿಂದ ಬಂದ ಆದಾಯವು ಸುಮಾರು ಶೇ 1.3ರಷ್ಟು ಏರಿಕೆಯಾಗಿ 15,670 ಕೋಟಿ ರೂ.ನಷ್ಟಿದೆ.

2021ರ ಮಾರ್ಚ್ ತ್ರೈಮಾಸಿಕದಲ್ಲಿ ಈ ವ್ಯವಹಾರದಿಂದ ಬರುವ ಆದಾಯವು 2,102 ಮಿಲಿಯನ್ ಡಾಲರ್​​ಗಳಿಂದ 2,143 ಮಿಲಿಯನ್ ಡಾಲರ್​ಗೆ ಇರಬಹುದೆಂಬ ನಿರೀಕ್ಷೆ ವಿಪ್ರೋಗಿದೆ. ಇದು ಮಾರ್ಚ್ ತ್ರೈಮಾಸಿಕದಲ್ಲಿ ಶೇ 1.5ರಿಂದ 3.5ರಷ್ಟು ಬೆಳವಣಿಗೆ ಕಾಣಬಹುದು.

ಇದನ್ನೂ ಓದಿ: ಜಸ್ಟ್​ 3 ದಿನದಲ್ಲಿ 25 ದಶಲಕ್ಷ ಬಳಕೆದಾರರು ಟೆಲಿಗ್ರಾಂಗೆ ಸೇರ್ಪಡೆ

ಡಿಸೆಂಬರ್ ತ್ರೈಮಾಸಿಕದಲ್ಲಿ ಐಟಿ ಸೇವೆಗಳ ಆದಾಯವು ಕ್ರಮವಾಗಿ ಶೇ 3.9ರಷ್ಟು ಏರಿಕೆಯಾಗಿ 2,071 ಮಿಲಿಯನ್ ಡಾಲರ್​ಗೆ ತಲುಪಿದೆ. ಇದು ಅಕ್ಟೋಬರ್​​ನಲ್ಲಿ ಕಂಪನಿ ಇರಿಸಿಕೊಂಡಿದ್ದ ಅಂದಾಜಿಗೂ ಹೆಚ್ಚಾಗಿದೆ. ಅಕ್ಟೋಬರ್​ನಲ್ಲಿ ವಿಪ್ರೋ ಐಟಿ ಸೇವೆಗಳ ವ್ಯವಹಾರದಿಂದ ಬರುವ ಆದಾಯವು ಡಿಸೆಂಬರ್ ತ್ರೈಮಾಸಿಕದಲ್ಲಿ 2,022-2,062 ಮಿಲಿಯನ್ ಡಾಲರ್​ ವ್ಯಾಪ್ತಿಯಲ್ಲಿ ಇರುತ್ತದೆ ಎಂಬ ನಿರೀಕ್ಷಿಯಿದ್ದು, ಶೇ 1.5-3.5ರಷ್ಟು ಬೆಳವಣಿಗೆ ಕಾಣಬಹುದು.

ವಿಪ್ರೋ ಸತತ ಎರಡನೇ ತ್ರೈಮಾಸಿಕದಲ್ಲಿ ಆದೇಶ ಕಾಯ್ದಿರಿಸುವಿಕೆ, ಆದಾಯ ಮತ್ತು ಮಾರ್ಜಿನ್​ಗಳಲ್ಲಿ ಸದೃಢವಾದ ಕಾರ್ಯಕ್ಷಮತೆ ನೀಡಿದೆ. ನಮ್ಮ ಐದು ವಲಯಗಳು ಶೇ 4ಕ್ಕಿಂತಲೂ ಅಧಿಕ ಬೆಳವಣಿಗೆ ದಾಖಲಿಸಿವೆ ಎಂದು ವಿಪ್ರೋ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಥಿಯೆರಿ ಡೆಲಾಪೋರ್ಟೆ ಪ್ರಕಟಣೆಯಲ್ಲಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.