ETV Bharat / business

ಮೊಬೈಲ್​ ನಂಬರ್​ ಪರಿಶೀಲನೆಗೆ 'ಫ್ಲ್ಯಾಶ್ ಕಾಲ್' ಫೀಚರ್ ಪರಿಚಯಿಸಲಿರುವ ವಾಟ್ಸ್ಆ್ಯಪ್!

author img

By

Published : May 22, 2021, 7:42 PM IST

WhatsApp
WhatsApp

ಎಸ್‌ಎಂಎಸ್ ಪರಿಶೀಲನೆ ನಂತರ, ಒಂದು ಸಾಧನದಿಂದ ಇನ್ನೊಂದಕ್ಕೆ ಬದಲಾಯಿಸಿದ ನಂತರ ಫೋನ್ ಸಂಖ್ಯೆಯ ಪರಿಶೀಲನೆಯ ಮುಂದಿನ ಹಂತ ವಾಟ್ಸ್‌ಆ್ಯಪ್ ಕೇಳುತ್ತದೆ. ಬಳಕೆದಾರರು ತಮ್ಮ ವಾಟ್ಸ್ಆ್ಯಪ್ ಫೋನ್ ಸಂಖ್ಯೆ ಪರಿಶೀಲಿಸಲು ಬೇರೆ ಆಯ್ಕೆ ನೀಡಲಾಗುವುದು..

ನವದೆಹಲಿ : ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್‌ಆ್ಯಪ್, ಹೊಸ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ. ಅದು ಬಳಕೆದಾರರು ಹೊಸ ಸಾಧನಕ್ಕೆ ಲಾಗ್ ಇನ್ ಆದ ನಂತರ ಫೋನ್ ಸಂಖ್ಯೆಗಳ ಪರಿಶೀಲಿಸಲು ನೆರವಾಗುತ್ತದೆ.

ಪ್ರಸ್ತುತ, ಎಸ್‌ಎಂಎಸ್ ಮೂಲಕ ಪರಿಶೀಲನೆ ಕೋಡ್ ಕಳುಹಿಸುವ ಮೂಲಕ ಬಳಕೆದಾರರು ತಮ್ಮ ಫೋನ್ ಸಂಖ್ಯೆಯನ್ನು ಪರಿಶೀಲಿಸಲು ವಾಟ್ಸ್ಆ್ಯಪ್ ಅನುಮತಿಸುತ್ತದೆ.

ಫ್ಲ್ಯಾಶ್ ಕಾಲ್ ಎಂಬ ಹೊಸ ವೈಶಿಷ್ಟ್ಯವು ಫೋನ್ ಸಂಖ್ಯೆ ಪರಿಶೀಲಿಸಲು ವಾಟ್ಸ್‌ಆ್ಯಪ್ ಕರೆ ಮಾಡಲು ಅನುಮತಿಸುತ್ತದೆ. ಇದು ಇನ್ನೂ ಅಭಿವೃದ್ಧಿಯ ಹಂತದಲ್ಲಿದೆ.

ಇದನ್ನೂ ಓದಿ: ಲಸಿಕೆ ಉತ್ಪಾದನೆ, ನೀಡಿಕೆ, ವಿತರಣೆಯ ಕಂಪ್ಲೀಟ್ ಮಾಹಿತಿ ಕೊಡುವಂತೆ ಕೇಂದ್ರಕ್ಕೆ ಚಿದು ತಾಕೀತು

ಪ್ರಕ್ರಿಯೆಯು ಐಚ್ಛಿಕವಾಗಿದೆ ಮತ್ತು ಬಳಕೆದಾರರು ಫೋನ್ ಸಂಖ್ಯೆಯನ್ನು ಎಸ್‌ಎಂಎಸ್ ಮೂಲಕ ಪರಿಶೀಲಿಸಲು ಆಯ್ಕೆ ಮಾಡಬಹುದು ಅಥವಾ ಮುಂದುವರಿಸುವ ಆಯ್ಕೆ ಮಾಡುವ ಮೂಲಕ ವಾಟ್ಸ್‌ಆ್ಯಪ್‌ಗೆ ಅನುಮತಿ ನೀಡಬಹುದು ಅಥವಾ ಈಗೆಲ್ಲ ಆಯ್ಕೆಯ ಮೂಲಕ ನಿರಾಕರಿಸಬಹುದು.

ಎಸ್‌ಎಂಎಸ್ ಪರಿಶೀಲನೆ ನಂತರ, ಒಂದು ಸಾಧನದಿಂದ ಇನ್ನೊಂದಕ್ಕೆ ಬದಲಾಯಿಸಿದ ನಂತರ ಫೋನ್ ಸಂಖ್ಯೆಯ ಪರಿಶೀಲನೆಯ ಮುಂದಿನ ಹಂತ ವಾಟ್ಸ್‌ಆ್ಯಪ್ ಕೇಳುತ್ತದೆ. ಬಳಕೆದಾರರು ತಮ್ಮ ವಾಟ್ಸ್ಆ್ಯಪ್ ಫೋನ್ ಸಂಖ್ಯೆ ಪರಿಶೀಲಿಸಲು ಬೇರೆ ಆಯ್ಕೆ ನೀಡಲಾಗುವುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.