ETV Bharat / business

ಜೇಟ್ಲಿ, ಜಯಂತ್ ಸಿನ್ಹಾರಿಂದ ಜೆಟ್​ ಏರ್​ವೇಸ್​ ದಿವಾಳಿ- ಸುಬ್ರಮಣಿಯನ್‌ ಸ್ವಾಮಿ ಆರೋಪ

author img

By

Published : Apr 25, 2019, 7:54 PM IST

ಸುಬ್ರಮಣ್ಯನ್ ಸ್ವಾಮಿ: ಸಂಗ್ರಹ ಚಿತ್ರ

ತೀವ್ರ ಹಣಕಾಸು ಮುಗ್ಗಟ್ಟು ಎದುರಿಸುತ್ತಿರುವ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್​ವೇಸ್‌ಗೆ ಚೇತರಿಕೆ ನೀಡುವ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸುವಂತೆ ಕೋರಿದ ಅವರು, ಬಿಜೆಪಿಯ ಘನತೆಗೆ ಧಕ್ಕೆ ತರಲು ಜೇಟ್ಲಿ ಹಾಗು ಜಯಂತ್‌ ಸಿನ್ಹಾ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿ ಟ್ವೀಟ್​ ಮಾಡಿದ್ದಾರೆ.

ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ಹಾಗೂ ನಾಗರಿಕ ವಿಮಾನಯಾನ ಖಾತೆ ಸಚಿವ ಜಯಂತ್ ಸಿನ್ಹಾ ಬೇಜವಾಬ್ದಾರಿ ನಡೆಗಳಿಂದ ಜೆಟ್​ ಏರ್​ವೇಸ್​ ಸಂಸ್ಥೆ ಅಧೋಗತಿಗೆ ತಲುಪಿದೆ ಎಂದು ಬಿಜೆಪಿಯ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.

ಬುಧವಾರ ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಸುರೇಶ್ ಪ್ರಭು ಅವರಿಗೆ ಪತ್ರ ಬರೆದಿದ್ದ ಡಾ. ಸುಬ್ರಮಣ್ಯನ್​ ಸ್ವಾಮಿ, ಈ ವಿಷಯದ ಕುರಿತು ತಕ್ಷಣವೇ ಗಮನಹರಿಸುವಂತೆ ಒತ್ತಾಯಿಸಿದ್ದಾರೆ.

ಮತ್ತೊಂದು ವಿಮಾನಯಾನ ಸಂಸ್ಥೆಯಾದ ಸ್ಪೈಸ್​ ಜೆಟ್​ಗೆ ಅನುಕೂಲ ಮಾಡಿಕೊಡಲು ಜೆಟ್​ ಏರ್​ವೇಸನ್ನು​ ಮುಳುಗಿಸುವ ಪ್ರಯತ್ನಗಳು ನಡೆಯುತ್ತಿವೆ. ಇದರಿಂದ ಹಿಂದೆ ಸರಿಯುವಂತೆ ಜೇಟ್ಲಿ ಹಾಗೂ ಸಿನ್ಹಾ ಅವರಿಗೆ ಪ್ರಧಾನಿ ಮೋದಿ ಸೂಚಿಸಬೇಕು. ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಮತ್ತೊಬ್ಬರಿಗೆ ಲಾಭ ಮಾಡಿಕೊಡಲು ಹೊರಟಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಟ್ವಿಟ್ಟರ್​ನಲ್ಲಿ ಆಪಾದಿಸಿದ್ದಾರೆ.

  • I urge Namo to tell Jaitely and Jayant Sinha to lay off trying to parcel off Jet Airways to Spice Jet. It smells of favouritism and misuse of official position that will damage BJP’s reputation

    — Subramanian Swamy (@Swamy39) April 25, 2019 " class="align-text-top noRightClick twitterSection" data=" ">

ಜೆಟ್​ ಏರ್​ವೇಸ್​ನ ನಷ್ಟವನ್ನು ಸ್ಪೈಸ್​ಜೆಟ್​ ಹಾಗೂ ವಿಸ್ತಾರ ಏರ್​ ಲೈನ್ಸ್​ ಸಂಸ್ಥೆಗಳಿಗೆ ಲಾಭ ಮಾಡಿಕೊಡುವ ಗಂಭೀರ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ. ಇದನ್ನು ತಡೆಗಟ್ಟಲು ಜೆಟ್​ ಸಂಸ್ಥೆಯನ್ನು ಏರ್​ ಇಂಡಿಯಾ ಜೊತೆಗೆ ವಿಲೀನಗೊಳಿಸಬೇಕು ಎಂದು ಸುಬ್ರಮಣಿಯನ್ ಸ್ವಾಮಿ ಸಲಹೆ ನೀಡಿದ್ದಾರೆ.

Intro:Body:Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.