ETV Bharat / business

ಜೆಟ್ ಏರ್‌ವೇಸ್‌ ಉದ್ಯೋಗಿ ಸಾವು, ವೇತನ ಸಿಗದೆ ಆತ್ಮಹತ್ಯೆ ಶಂಕೆ

author img

By

Published : Apr 27, 2019, 9:21 PM IST

ಚಿತ್ರ ಕೃಪೆ; ಗೆಟ್ಟಿ

ಆರ್ಥಿಕವಾಗಿ ಜರ್ಜರಿತವಾದ ಜೆಟ್‌ ಏರ್‌ವೇಸ್‌, ಉದ್ಯೋಗಿಗಳಿಗೆ ಕೆಲ ತಿಂಗಳುಗಳಿಂದ ವೇತನ ಪಾವತಿಸಿಲ್ಲ. ಇದರಿಂದ ತೀವ್ರವಾಗಿ ಸಂಕಷ್ಟಕ್ಕೊಳಗಾದ ಉದ್ಯೋಗಿ ಸಿಂಗ್ ಸಾವಿಗೆ ಶರಣಾಗಿದ್ದಾರೆ. ಖಾಸಗಿ ವಿಮಾನಯಾನ ಸಂಸ್ಥೆ​ ವೇತನ ನೀಡದಿರುವುದೇ ಘಟನೆಗೆ ಕಾರಣವೆಂದು ಸಂಸ್ಥೆಯ ನೌಕರರು ಹಾಗೂ ಉದ್ಯೋಗಿಗಳ ಸಂಘಟನೆ ಆರೋಪಿಸಿದೆ.

ಮುಂಬೈ: ತೀವ್ರವಾದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಜೆಟ್​ ಏರ್​ವೇಸ್​, ಕಳೆದ ಹಲವು ತಿಂಗಳಿಂದ ಸಿಬ್ಬಂದಿಗೆ ವೇತನ ಪಾವತಿಸಿಲ್ಲ. ಹೀಗಾಗಿ, ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದ ಹಿರಿಯ ತಾಂತ್ರಿಕ ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆಪಾದನೆ ಕೇಳಿಬಂದಿದೆ.

ಮಹಾರಾಷ್ಟ್ರದ ಪಲ್ಘರ್​ ಜಿಲ್ಲೆಯ ಶೈಲೇಶ್​ ಸಿಂಗ್​ (45) ಮೃತಪಟ್ಟ ವ್ಯಕ್ತಿ. ಇವರು ಕ್ಯಾನ್ಸರ್​ನಿಂದಲೂ ಬಳಲುತ್ತಿದ್ದು ಆಗಾಗ ಕಿಮೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದರು. ​ ಒಂದೆಡೆ ಖಾಯಿಲೆಯಿಂದ ತೀವ್ರ ಖಿನ್ನತೆ ಮತ್ತೊಂದೆೆಡೆ ಆರ್ಥಿಕ ತೊಂದರೆಯಿಂದ ಬಳಲುತ್ತಿದ್ದು ಮಹಡಿ ಮೇಲಿಂದ ಬಿದ್ದು ಸಾವಿಗೆ ಶರಣಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ಮೂರು ತಿಂಗಳಿಂದ ಜೆಟ್​ ಏರ್​ವೇಸ್ ಪೈಲೆಟ್​ಗಳು, ತಾಂತ್ರಿಕ ಹಾಗೂ ಇತರೆ ಸಿಬ್ಬಂದಿಗಳಿಗೆ ವೇತನ ಪಾವತಿಸಿಲ್ಲ. ಈ ಬಗ್ಗೆ ನೌಕರರು ಪ್ರತಿಭಟನೆ ನಡೆಸಿ, ಪ್ರಧಾನಿ, ವಿಮಾನಯಾನ, ವಿತ್ತ ಸಚಿವರಿಗೂ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಇದಕ್ಕೆ ಮೊದಲಿಗರಾಗಿ ಶೈಲೇಶ್​ ಸಿಂಗ್ ಬಲಿಯಾಗಿದ್ದಾರೆ ಎಂದು ನೌಕರರು ಆಪಾದಿಸಿದ್ದಾರೆ.

ಮೃತರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿಯರು ಇದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Intro:Body:Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.