ETV Bharat / business

ಗೂಗಲ್​​ ಪ್ಲೇಸ್ಟೋರ್​ನ 85 ಕುತಂತ್ರಾಂಶ ಆ್ಯಪ್​​​ ಡಿಲಿಟ್​... ಇವುಗಳ ಬಗ್ಗೆ ಇರಲಿ ಎಚ್ಚರ!​​

author img

By

Published : Aug 18, 2019, 9:23 AM IST

ಸಾಂದರ್ಭಿಕ ಚಿತ್ರ

ಗೂಗಲ್ ಪ್ಲೇ ಸ್ಟೋರ್​ನಲ್ಲಿ ಬಳಕೆದಾರರ ಮೇಲೆ ಪ್ರಭಾವ ಬೀರುವ ಮತ್ತೊಂದು ಸುತ್ತಿನ ಆಡ್ವೇರ್​ ಕುತಂತ್ರಾಂಶಗಳು ಇರುವುದು ಗಮನಕ್ಕೆ ಬಂದಿದೆ. ಟ್ರೆಂಡ್ ಮೈಕ್ರೋ ಇದನ್ನು ಆಂಡ್ರಾಯ್ಡ್ ​ಒಎಸ್​_ಹಿಡೆನಡ್​​.ಎಚ್​ಆರ್​ಎಕ್ಸ್​ಎಚ್​ (AndroidOS_Hidenad.HRXH) ಎಂದು ಗುರುತಿಸಿದೆ.

ಸ್ಯಾನ್​ಫ್ರಾನ್ಸಿಸ್ಕೋ: ಟ್ರೆಂಡ್​ ಮೈಕ್ರೊದ ಭದ್ರತಾ ಸಂಶೋಧಕರು ಪತ್ತೆ ಹಚ್ಚಿದ 85 ಆಡ್ವೇರ್​ ಕುತಂತ್ರಾಂಶ ಅಪ್ಲಿಕೇಷನ್​ಗಳನ್ನು ಗೂಗಲ್​ ತನ್ನ ಪ್ಲೇ ಸ್ಟೋರ್​ನಿಂದ ತೆಗೆದುಹಾಕಿದೆ.

ಗೂಗಲ್ ಪ್ಲೇ ಸ್ಟೋರ್​ನಲ್ಲಿ ಬಳಕೆದಾರರ ಮೇಲೆ ಪ್ರಭಾವ ಬೀರುವ ಮತ್ತೊಂದು ಸುತ್ತಿನ ಆಡ್ವೇರ್​ ಕುತಂತ್ರಾಂಶಗಳು ಇರುವುದು ಗಮನಕ್ಕೆ ಬಂದಿದೆ. ಟ್ರೆಂಡ್ ಮೈಕ್ರೋ ಇದನ್ನು ಆಂಡ್ರಾಯ್ಡ್ ​ಒಎಸ್​_ಹಿಡೆನಡ್​​.ಎಚ್​ಆರ್​ಎಕ್ಸ್​ಎಚ್​ (AndroidOS_Hidenad.HRXH) ಎಂದು ಗುರುತಿಸಿದೆ. ಇವು ಪ್ರಸಾರವಾದ ಜಾಹೀರಾತುಗಳನ್ನು ನಿಷ್ಕ್ರಿಯಗೊಳಿಸಲು ಕಷ್ಟಕರವಾಗುವಂತೆ ಇದ್ದವು. ಬಳಕೆದಾರರ ನಡವಳಿಕೆ ಮತ್ತು ಸಮಯ ಆಧಾರಿತ ಪ್ರಚೋದಕ ಜಾಹೀರಾತುಗಳೇ ಪ್ರಸಾರ ಆಗುತ್ತಿದ್ದವು ಎಂದು ಟ್ರೆಂಡ್​ ಮೈಕ್ರೋ ಬರೆದುಕೊಂಡಿದೆ.

ಗೂಗಲ್​ ಕಂಪನಿಯ ಪ್ರಕಾರ, ಪತ್ತೆಯಾದ ಬಹುತೇಕ ಅಪ್ಲಿಕೇಷನ್‌ಗಳು ಛಾಯಾಚಿತ್ರ ಮತ್ತು ಗೇಮಿಂಗ್ ರೂಪದ ಮಾರುವೇಷದಲ್ಲಿ ಕಾರ್ಯಚರಣೆಯಲ್ಲಿದ್ದವು. ಅಂತಹವುಗಳನ್ನು ಎಂಟು ದಶಲಕ್ಷಕ್ಕೂ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾಗಿದೆ. ಮುಖ್ಯವಾಗಿ ಸೂಪರ್ ಸೆಲ್ಫಿ, ಕಾಸ್ ಕ್ಯಾಮರಾ, ಪಾಪ್ ಕ್ಯಾಮರಾ ಮತ್ತು ಒನ್ ಸ್ಟ್ರೋಕ್ ಲೈನ್ ಫಝಲ್​ ಸೇರಿ 85 ಆ್ಯಪ್​​ಗಳಿದ್ದವು ಎಂದು ಹೇಳಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.