ETV Bharat / business

ಕಾರು ಪ್ರಿಯರಿಗೆ ಟಾಟಾ 'ಪಂಚ್‌'.. ಕೇವಲ ₹5.49 ಲಕ್ಷಕ್ಕೆ 5 ಸ್ಟಾರ್ ಸೇಫ್ಟಿ ವೆಹಿಕಲ್‌ ..

author img

By

Published : Oct 18, 2021, 5:42 PM IST

Updated : Oct 18, 2021, 6:36 PM IST

tata-motors-launches-suv-tata-punch
ಟಾಟಾ ಪಂಚ್ ಕಾರು

5 ಸ್ಟಾರ್ ರೇಟಿಂಗ್ ಪಡೆದಿರುವ ಪಂಚ್ ಕಾರು, ಮಕ್ಕಳ ಸುರಕ್ಷತೆಯಲ್ಲಿ 4 ಸ್ಟಾರ್ ರೇಟಿಂಗ್ ಗಳಿಸಿದೆ. ಡ್ಯುಯೆಲ್ ಏರ್‌ಬ್ಯಾಗ್, ABS, EBD ಹಾಗೂ ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್, ಬ್ರೇಕ್ ಸ್ವೇ ಕಂಟ್ರೋಲ್, ಡ್ರೈವರ್ ಹಾಗೂ ಕೋ ಡ್ರೈವರ್ ಸೀಟ್ ಬೆಲ್ಟ್ ಅಲಾರಾಂ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಟೈಯರ್ ಪಂಚರ್ ರಿಪೇರ್ ಕಿಟ್ ಸೇರಿದಂತೆ ಎಲ್ಲಾ ತರಹದ ಸುರಕ್ಷತಾ ಫೀಚರ್ಸ್ ಈ ಕಾರಿನಲ್ಲಿ ಲಭ್ಯವಿದೆ..

ಬೆಂಗಳೂರು : ಬಹುನಿರೀಕ್ಷಿತ ಟಾಟಾ ಮೋಟಾರ್ಸ್ ಅವರ ಮೈಕ್ರೋ SUV ಟಾಟಾ ಪಂಚ್ ಕಾರು ಬಿಡುಗಡೆಯಾಗಿದೆ. 5 ಸ್ಟಾರ್ ಸೇಫ್ಟಿ ರೇಟಿಂಗ್, ಅತ್ಯಾಧುನಿಕ ತಂತ್ರಜ್ಞಾನ, ಉತ್ತಮ ಫೀಚರ್ಸ್ ಹೊಂದಿರುವ ಕಾರು ಮಾರುಕಟ್ಟೆ ಪ್ರವೇಶಿಸಿದೆ. ಕಾರಿನ ಆರಂಭಿಕ ಬೆಲೆ 5.49 ಲಕ್ಷ ರೂಪಾಯಿನಿಂದ ಶುರುವಾಗುತ್ತೆ.

ಟಾಟಾ ಪಂಚ್ ಕಾರು ಮಾರುತಿ ಇಗ್ನಿಸ್, ಸ್ವಿಫ್ಟ್ ಸೇರಿದಂತೆ ಸಣ್ಣ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ. ನೋಟದಲ್ಲಿ ಹಾಗೂ ಸ್ಥಳಾವಕಾಶದಲ್ಲಿ ರೆನಾಲ್ಟ್ ಕಿಗರ್, ನಿಸಾನ್ ಮ್ಯಾಗ್ನೈಟ್ ಕಾರಿಗೆ ಪೈಪೋಟಿ ನೀಡಲಿದೆ. ಸಣ್ಣ ಕಾರು ವಿಭಾಗದಲ್ಲಿ ಅತೀ ಕಡಿಮೆ ಬೆಲೆಗೆ ಅತ್ಯುತ್ತಮ ಕಾರನ್ನು ಟಾಟಾ ನೀಡುತ್ತಿದೆ. ಕೈಕೆಟುಕುವ ಬೆಲೆಯಲ್ಲಿ ಲಭ್ಯವಿರುವ ಏಕೈಕ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

SUV ಪಂಚ್​​​​ ಒಂದು ಲೀಟರ್ ಪೆಟ್ರೋಲ್‌ಗೆ 18.97 ಕಿ.ಮೀ ಮೈಲೇಜ್ ನೀಡಲಿದೆ. ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಕಾರು 18.82 ಕಿ.ಮೀ ಮೈಲೇಜ್ ನೀಡಲಿದೆ. ಕೇವಲ ಪೆಟ್ರೋಲ್ ವೇರಿಯೆಂಟ್ ಮಾತ್ರ ಲಭ್ಯವಿದೆ.

ಪಂಚ್​​​​ ಸುರಕ್ಷತೆ : 5 ಸ್ಟಾರ್ ರೇಟಿಂಗ್ ಪಡೆದಿರುವ ಪಂಚ್ ಕಾರು, ಮಕ್ಕಳ ಸುರಕ್ಷತೆಯಲ್ಲಿ 4 ಸ್ಟಾರ್ ರೇಟಿಂಗ್ ಗಳಿಸಿದೆ. ಡ್ಯುಯೆಲ್ ಏರ್‌ಬ್ಯಾಗ್, ABS, EBD ಹಾಗೂ ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್, ಬ್ರೇಕ್ ಸ್ವೇ ಕಂಟ್ರೋಲ್, ಡ್ರೈವರ್ ಹಾಗೂ ಕೋ ಡ್ರೈವರ್ ಸೀಟ್ ಬೆಲ್ಟ್ ಅಲಾರಾಂ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಟೈಯರ್ ಪಂಚರ್ ರಿಪೇರ್ ಕಿಟ್ ಸೇರಿದಂತೆ ಎಲ್ಲಾ ತರಹದ ಸುರಕ್ಷತಾ ಫೀಚರ್ಸ್ ಈ ಕಾರಿನಲ್ಲಿ ಲಭ್ಯವಿದೆ.

ಕಾರಿನ ವಿನ್ಯಾಸ : ಆಲ್ಫಾ ಆರ್ಕಿಟೆಕ್ಟ್ ಅಡಿ ನಿರ್ಮಾಣಗೊಂಡಿರುವ ಮೊದಲ ಕಾರು SUV ಟಾಟಾ ಪಂಚ್​​​​. 1.2 ಲೀಟರ್ ರಿವಟ್ರೋನ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದರ ಜೊತೆಗೆ ಡೆನಾಪ್ರೋ ಟೆಕ್ನಾಲಜಿ ಹೊಂದಿದೆ. ಹೀಗಾಗಿ, 85 bhp ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮ್ಯಾನ್ಯುಯೆಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ.

ಪಂಚ್​ ಔಟ್​ ಲುಕ್ ​​: ಕಾರಿನ ಮುಂಭಾಗದಿಂದ ಟಾಟಾ ಹ್ಯಾರಿಯರ್ ಲುಕ್‌ನಂತೆಯೇ ಕಾಣುತ್ತದೆ. ಅತ್ಯಾಕರ್ಷಕ 16 ಇಂಜಿನ ಡೈಮಂಡ್ ಕಟ್ ಅಲೋಯ್ ವೀಲ್ ಹೊಂದಿದೆ. 190mm ಗ್ರೌಂಡ್ ಕ್ಲೀಯರೆನ್ಸ್ LED ಡೇ ಟೈಮ್ ರನ್ನಿಂಗ್ ಲೈಟ್, ಸಿಗ್ನೆಚರ್ LED ಟೈಲ್ ಲೈಟ್ಸ್, ಡ್ಯುಯಲ್ ಟೋನ್ ರೂಫ್ ಆಯ್ಕೆ, 3 ಪ್ರಯಾಣಿಕರು ಆರಾಮವಾಗಿ ಕುಳಿತಕೊಳ್ಳಬಹುದಾದ ರೇರ್ ಸೀಟ್, ಉತ್ತಮ ಲೈಗ್‌ರೂಂ ಸ್ಪೇಸ್ ಸೇರಿ ಹಲವು ವಿಶೇಷತೆಗಳು ಪಂಚ್​​ನಲ್ಲಿವೆ.

ಸಿಟಿ ರೌಂಡ್​​, ಲಾಂಗ್​​ ರೈಡ್​ ಹಾಗೂ ಆಫ್ ರೋಡ್ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಿದೆ. ಅಟೋ ಹೆಡ್‌ಲ್ಯಾಂಪ್ಸ್, ರೈನ್ ಸೆನ್ಸಿಂಗ್ ವೈಪರ್, ಪುಶ್ ಬಟನ್ ಸ್ಟಾರ್ಟ್, 366 ಲೀಟರ್ ಬೂಟ್ ಸ್ಪೇಸ್, ಆಟೋಮ್ಯಾಟಿಕ್ ಟೆಂಪರೇಚರ್ ಕಂಟ್ರೋಲ್, ಆಟೋ ಫೋಲ್ಡ್ OVRM, ರೇರ್ ಆರ್ಮ್ ರೆಸ್ಟ್, ರೇರ್ ವೈಪರ್ ಹಾಗೂ ವಾಶ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, 7 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, iRA ಕನೆಕ್ಟೆಡ್ ಫೀಚರ್ಸ್ ಸೇರಿ ಅತ್ಯಾಧುನಿಕ ತಂತ್ರಜ್ಞಾನಗಳು SUV ಟಾಟಾ ಪಂಚ್​ ಕಾರಿನಲ್ಲಿವೆ.

Last Updated :Oct 18, 2021, 6:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.