ETV Bharat / business

ಸೆಂಟ್ರಲ್‌ ಬ್ಯಾಂಕ್‌, IOB ಖಾಸಗೀಕರಣಕ್ಕೆ ನೀತಿ ಆಯೋಗ ಶಿಫಾರಸು

author img

By

Published : Jun 8, 2021, 8:07 AM IST

NITI
NITI

ಬ್ಯಾಂಕ್ ಆಫ್ ಇಂಡಿಯಾದ ಹೆಸರೂ ಖಾಸಗೀಕರಣದ ಪಟ್ಟಿಯಲ್ಲಿದೆ ಎನ್ನಲಾಗುತ್ತಿದೆ. ಸರ್ಕಾರ ಇವುಗಳಲ್ಲಿನ ತನ್ನ ಷೇರುಗಳ ಪಾಲು ಮಾರಾಟ ಮಾಡುತ್ತದೆ ಅನ್ನೋದು ಇದರ ಅರ್ಥ. '2021-22ರಲ್ಲಿ ಎರಡು ಸಾರ್ವಜನಿಕ ವಲಯದ ಬ್ಯಾಂಕ್​ಗಳು ಮತ್ತು ವಿಮಾ ಕಂಪನಿಯನ್ನು ಖಾಸಗೀಕರಣಗೊಳಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದರು.

ನವದೆಹಲಿ: ನೀತಿ ಆಯೋಗವು ಸೆಂಟ್ರಲ್ ಬ್ಯಾಂಕ್ ಹಾಗೂ ಇಂಡಿಯನ್​ ಓವರ್​ಸಿಸ್​ ಬ್ಯಾಂಕ್ (ಐಒಬಿ) ಅನ್ನು ಖಾಸಗೀಕರಣಗೊಳಿಸಲು ಶಿಫಾರಸು ಮಾಡಿದೆ ಎಂಬ ಮಾಹಿತಿ ದೊರೆತಿದೆ.

ಬ್ಯಾಂಕ್ ಆಫ್ ಇಂಡಿಯಾದ ಹೆಸರೂ ಖಾಸಗೀಕರಣದ ಪಟ್ಟಿಯಲ್ಲಿದೆ ಎನ್ನಲಾಗುತ್ತಿದೆ. ಸರ್ಕಾರ ಈ ಬ್ಯಾಂಕುಗಳಲ್ಲಿನ ತನ್ನ ಷೇರುಗಳ ಪಾಲು ಮಾರಾಟ ಮಾಡುತ್ತದೆ ಅನ್ನೋದು ಖಾಸಗೀಕರಣದ ಅರ್ಥ. '2021-22ರಲ್ಲಿ ಎರಡು ಸಾರ್ವಜನಿಕ ವಲಯದ ಬ್ಯಾಂಕ್​ಗಳು ಮತ್ತು ವಿಮಾ ಕಂಪನಿಯನ್ನು ಖಾಸಗೀಕರಣಗೊಳಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದರು.

ಸಾರ್ವಜನಿಕ ವಲಯದ ಸಂಸ್ಥೆಗಳ (ಪಿಎಸ್‌ಯು) ಹೆಸರುಗಳನ್ನು ವಿಲೀನಗೊಳಿಸಲು ಅಥವಾ ಖಾಸಗೀಕರಣಗೊಳಿಸಲು ಅಥವಾ ಇತರ ಪಿಎಸ್​ಯುಗಳ ಅಂಗಸಂಸ್ಥೆಗಳನ್ನಾಗಿ ಮಾಡಲು ನೀತಿ ಆಯೋಗವು ಶಿಫಾರಸು ಮಾಡಬೇಕಾಗುತ್ತದೆ. ಇದರ ಭಾಗವಾಗಿ, ನೀತಿ ಆಯೋಗ ಮೇಲಿನ ಎರಡು ಬ್ಯಾಂಕ್​​ಗಳನ್ನು ಖಾಸಗೀಕರಣಕ್ಕಾಗಿ ಶಿಫಾರಸು ಮಾಡಿದಂತೆ ತೋರುತ್ತದೆ. ಈ ಪ್ರಸ್ತಾಪಗಳನ್ನು ಹೂಡಿಕೆ ಇಲಾಖೆ, ಸಾರ್ವಜನಿಕ ಆಸ್ತಿ ನಿರ್ವಹಣೆ (ದೀಪಂ) ಮತ್ತು ಹಣಕಾಸು ಸೇವೆಗಳ ಇಲಾಖೆ ಪರಿಶೀಲಿಸಲಿದ್ದು, ಅಗತ್ಯ ಬದಲಾವಣೆಗಳನ್ನು ಕಾನೂನುಬದ್ಧವಾಗಿ ಮಾಡುತ್ತದೆ.

ಇದನ್ನೂ ಓದಿ: ಕೊರೊನಾ ಲಸಿಕೆ ಪಡೆದವರ ಸ್ಥಿರ ಠೇವಣಿಗಳಿಗೆ ಬ್ಯಾಂಕ್​ಗಳಿಂದ ಹೆಚ್ಚುವರಿ ಬಡ್ಡಿದರದ ಆಫರ್

ಖಾಸಗೀಕರಣ ಪ್ರಕ್ರಿಯೆಯ ಅವಧಿಯು ಈ ಬದಲಾವಣೆಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಸಂಬಂಧಿತ ಮೂಲಗಳು ತಿಳಿಸಿವೆ.

ಕೋವಿಡ್​ನಿಂದಾಗಿ ಖಾಸಗೀಕರಣ ಪ್ರಕ್ರಿಯೆ ವಿಳಂಬ: ಫಿಚ್

ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡು ಬ್ಯಾಂಕ್​ಗಳನ್ನು ಖಾಸಗೀಕರಣಗೊಳಿಸುವ ಸರ್ಕಾರದ ಯೋಜನೆ ವಿಳಂಬವಾಗಲಿದೆ ಎಂದು ಫಿಚ್ ರೇಟಿಂಗ್ಸ್ ಅಂದಾಜಿಸಿದೆ. ಎರಡನೇ ಅಲೆಯ ಕೋವಿಡ್​ ಬೆಳವಣಿಗೆಗಳಲ್ಲಿ ಭಾರತೀಯ ಬ್ಯಾಂಕಿಂಗ್ ಕ್ಷೇತ್ರವು ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.