ETV Bharat / business

ಸಾಫ್ಟ್​ವೇರ್ ನೌಕರಿ ಧಿಕ್ಕರಿಸಿ ಕೋಳಿ ಸಾಕಾಣಿಕೆಯಲ್ಲಿ ಚಿನ್ನದಂಥ ಬದುಕು ಕಟ್ಟಿಕೊಂಡ ಯುವಕ!

author img

By

Published : Sep 17, 2020, 9:40 PM IST

Engineering graduate
ಎಂಜಿನಿಯರಿಂಗ್ ಪದವೀಧರ

2016ರಲ್ಲಿ ಕಾಲೇಜಿನಿಂದ ಎಂಜಿನಿಯರಿಂಗ್​ ಪದವಿ ಪಡೆದ ನಂತರ ನಾನು ಎರಡು ಕಡೆ ಕೆಲಸ ಮಾಡಿದೆ. ಅದರಿಂದ ಬರುತ್ತಿದ್ದ ಸಂಬಳ ಯಾವುದಕ್ಕೂ ಸಾಲುತ್ತಿರಲಿಲ್ಲ. ಹೀಗಾಗಿ, ನನ್ನ ಸ್ವಂತ ವ್ಯವಹಾರ ಪ್ರಾರಂಭಿಸಲು ನಿರ್ಧರಿಸಿದೆ. ನನ್ನ ಇಚ್ಛೆಯಂತೆ ಹಲವು ಮಾರುಕಟ್ಟೆಗಳಿಗೆ ಅಲೆದಾಡಿ ಅಳಿವಿನಂಚಿನಲ್ಲಿರುವ ಕೋಳಿ ತಳಿಗಳನ್ನು ತಂದು ಮನೆಯಲ್ಲಿ ಸಾಕಿದೆ. ನಂತರ ನಾನು ಅವುಗಳನ್ನು ಮಾಂಸಾಹಾರಿ ರೆಸ್ಟೋರೆಂಟ್‌ಗಳಿಗೆ ಮಾರಿದೆ ಎನ್ನುತ್ತಾರೆ ಕೃಷ್ಣಮೂರ್ತಿ.

ಕೊಯಮತ್ತೂರು: ಶಾಲಾ ತರಗತಿಯಲ್ಲಿ 'ನೀವು ಚೆನ್ನಾಗಿ ಓದಿ ಒಳ್ಳೆಯ ಮಾರ್ಕ್ಸ್​ ತೆಗೆಯದಿದ್ದರೆ ಕುರಿ, ಕೋಳಿ, ಧನ ಮೇಯಿಸಬೇಕಾಗುತ್ತೆ' ಎಂದು ಶಿಕ್ಷಕರು ಹೇಳುವುದನ್ನು ಕೇಳಿರುತ್ತೀರಾ. ಶಿಕ್ಷಕರ ಸಲಹೆಯನ್ನು ಅನುಸರಿಸಿ ತಮಿಳುನಾಡಿನ ಯುವಕ, ಎಂಜಿನಿಯರಿಂಗ್ ಪದವಿ ಪಡೆದ ಬಳಿಕ ತನ್ನ ಕಾಲು ಮೇಲೆ ನಿಲ್ಲಲು ಹಳ್ಳಿಯತ್ತ ಮುಖಮಾಡಿ ಕೋಳಿಗಳನ್ನು ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾನೆ.

ಕೊಯಮತ್ತೂರು ಜಿಲ್ಲೆಯ ಪಾಸೂರ್ ಪಕ್ಕದ ಕಮ್ಮಲಾ ತೊಟ್ಟಿಪಾಲಯಂನ ತಂಗರಾಜ್-ಶಕುಂತಲಾ ಮಣಿ ದಂಪತಿಯ ಮಗ ಕೃಷ್ಣಮೂರ್ತಿ ಎಂಬುವವರು ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಪದವಿ ಮುಗಿದ ನಂತರ ಕಳೆದ ಎರಡು ವರ್ಷಗಳಿಂದ ಹಳ್ಳಿಯಲ್ಲಿ ಕೋಳಿ ಮಾರಾಟ ಮಾಡುತ್ತಿದ್ದಾರೆ. ಬಾತುಕೋಳಿ, ಮೊಲ ಮತ್ತು ಪಾರಿವಾಳ ಸಾಕುವ ಪ್ರಯತ್ನ ಸಹ ಮಾಡುತ್ತಿದ್ದಾರೆ.

2016ರಲ್ಲಿ ಕಾಲೇಜಿನಿಂದ ಎಂಜಿನಿಯರಿಂಗ್​ ಪದವಿ ಪಡೆದ ನಂತರ ನಾನು ಎರಡು ಕಡೆ ಕೆಲಸ ಮಾಡಿದೆ. ಅದರಿಂದ ಬರುತ್ತಿದ್ದ ಸಂಬಳ ಯಾವುದಕ್ಕೂ ಸಾಲುತ್ತಿರಲಿಲ್ಲ. ಹೀಗಾಗಿ, ನನ್ನ ಸ್ವಂತ ವ್ಯವಹಾರ ಪ್ರಾರಂಭಿಸಲು ನಿರ್ಧರಿಸಿದೆ. ನನ್ನ ಇಚ್ಛೆಯಂತೆ ಹಲವು ಮಾರುಕಟ್ಟೆಗಳಿಗೆ ಅಲೆದಾಡಿ ಅಳಿವಿನಂಚಿನಲ್ಲಿರುವ ಕೋಳಿ ತಳಿಗಳನ್ನು ತಂದು ಮನೆಯಲ್ಲಿ ಸಾಕಿದೆ. ನಂತರ ನಾನು ಅವುಗಳನ್ನು ಮಾಂಸಾಹಾರಿ ರೆಸ್ಟೋರೆಂಟ್‌ಗಳಿಗೆ ಮಾರಿದೆ ಎನ್ನುತ್ತಾರೆ ಕೃಷ್ಣಮೂರ್ತಿ.

ಅಲ್ಪ ಆರಂಭಿಕ ಆದಾಯ ಗಳಿಸಿದ ನಂತರ, ನಾನು ಈಗ ಕೊಯಮತ್ತೂರು, ತಿರುಪ್ಪೂರು ಮತ್ತು ನೀಲಗಿರಿ ಜಿಲ್ಲೆಗಳಲ್ಲಿನ ಮಾಂಸಾಹಾರಿ ರೆಸ್ಟೋರೆಂಟ್‌ಗಳಿಗೆ ಗುಣಮಟ್ಟದ ಬ್ರಾಯ್ಲರ್ ಕೋಳಿಗಳನ್ನು ಮಾರಾಟ ಮಾಡಲು ನನ್ನ ವ್ಯವಹಾರ ವಿಸ್ತರಿಸಿದ್ದೇನೆ. ಆರಂಭದಲ್ಲಿ ಹೆಣಗಾಡುತ್ತಿದ್ದ ಉದ್ಯಮವು ಈಗ ಉತ್ತಮ ಆದಾಯವನ್ನು ಪಡೆಯುತ್ತಿದೆ.

ನನ್ನ ಹೆತ್ತವರು ಆರಂಭದಲ್ಲಿ ಕೋಳಿ ಸಾಕಾಣಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ನಾನು ಸ್ವಯಂ ಉದ್ಯೋಗ ಮಾಡಬೇಕೆಂಬ ಇಚ್ಛೆ ತಿಳಿಸಿದ ನಂತರ ಅವರು ಸಹಕಾರ ನೀಡಿದರು. ಕೂಲಿ ಆಳಾಗಿದ್ದ ನನ್ನ ಹೆತ್ತವರು ನನ್ನನ್ನು ಶಾಲೆಗೆ ಕಳುಹಿಸಲು ಮತ್ತು ಉತ್ತಮವಾದ ಉದ್ಯೋಗದಲ್ಲಿ ಇರಿಸಲು ಬಯಸಿದ್ದರು. ಆದರೆ, ನಾನು ನನ್ನ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದಾಗ ಅವರು ನನ್ನ ಇಚ್ಛೆಗೆ ಅಡ್ಡಿಯಾಗಲಿಲ್ಲ. ಈಗ ನಾನು ನಮ್ಮ ಮನೆಯಲ್ಲಿ ಕಟಕನಾಥ್, ಕಿನ್ನಿ ಕೋಳಿಯಂತಹ ನಾನಾ ತಳಿಯ ಕೋಳಿಗಳನ್ನು ಸಾಕುತ್ತಿದ್ದೇನೆ. ಶೀಘ್ರದಲ್ಲೇ ಬಾತುಕೋಳಿ, ಪಾರಿವಾಳ ಮತ್ತು ಮೊಲಗಳನ್ನು ಬೆಳೆಸುವ ಪ್ರಯತ್ನಗಳನ್ನು ಮಾಡುತ್ತೇನೆ ಎನ್ನುತ್ತಾರೆ ಯುವ ಪದವೀಧರ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.