ETV Bharat / briefs

ವೋಟ್​ ಹಾಕಿದ್ರೆ ಮಾತ್ರ ಕೆಲಸ... ಮುಸ್ಲಿಂರಿಗೆ ವಾರ್ನ್​ ಮಾಡಿದ ಮೇನಕಾ, ವಿಡಿಯೊ ವೈರಲ್​

author img

By

Published : Apr 12, 2019, 5:35 PM IST

Updated : Apr 12, 2019, 11:26 PM IST

ಮನೇಕಾ ಗಾಂಧಿ ಭಾಷಣ

ಉತ್ತರಪ್ರದೇಶದ ಸುಲ್ತಾನ್​ಪುರ್​ ಲೋಕಸಭಾ ಕ್ಷೇತ್ರದ ಹಳ್ಳಿ ತುರ್ಬಾ ಖಾನಿಯಲ್ಲಿ ಬಿಜೆಪಿ ನಾಯಕಿ ಮೇನಕಾ ಗಾಂಧಿ ಚುನಾವಣಾ ರಾಲಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಮುಸ್ಲಿಮರು ಮತ ಹಾಕಿದ್ರೆ ಮಾತ್ರ ಅವರಿಗೆ ಕೆಲಸ ಎಂದು ಹೇಳಿರುವ ವಿಡಿಯೊ ವೈರಲ್​ ಆಗಿದೆ.

ಸುಲ್ತಾನಪುರ್​​(ಯುಪಿ): ದೇಶದಲ್ಲಿ ಲೋಕಸಭೆ ಕಾವು ರಂಗೇರಿದ್ದು, ಈಗಾಗಲೇ ಮೊದಲ ಹಂತದ ವೋಟಿಂಗ್​ ಮುಕ್ತಾಯಗೊಂಡಿದೆ. ಇದರ ಮಧ್ಯೆ ಪ್ರಚಾರ ಸಭೆ ನಡೆಸುತ್ತಿದ್ದ ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ಮೇನಕಾ ಗಾಂಧಿ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಉತ್ತರಪ್ರದೇಶದ ಸುಲ್ತಾನ್​ಪುರ್​ ಲೋಕಸಭಾ ಕ್ಷೇತ್ರದ ಹಳ್ಳಿ ತುರ್ಬಾ ಖಾನಿಯಲ್ಲಿ ಮೇನಕಾ ಗಾಂಧಿ ಚುನಾವಣಾ ರಾಲಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ನೀವು ನನಗೆ ವೋಟ್​ ಹಾಕದಿದ್ದರೆ ನಿಮಗೆ ಕೆಲಸ ಕೊಡಿಸುವುದಿಲ್ಲ ಎಂದಿದ್ದಾರೆ.

  • Maneka Gandhi threatening voters that she will watch booth wise votes to decide whom to be helped once she wins.
    Sakshi Maharaj says as a ‘Sanyasi’ he’ll curse people if they won’t vote for him!

    BJP is a Party with a Difference 😁
    pic.twitter.com/sG1X65WJ5s

    — Ravi Nair (@t_d_h_nair) April 12, 2019 " class="align-text-top noRightClick twitterSection" data=" ">

ಈಗಾಗಲೇ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಆಗಿರುವ ಅವರು, ಚುನಾವಣೆಯಲ್ಲಿ ಮುಸ್ಲಿಂರ ಬೆಂಬಲವಿಲ್ಲದೇ ನನಗೆ ಗೆಲುವು ಕಷ್ಟ. ನೀವೂ ವೋಟ್​ ಮಾಡದಿದ್ದರೆ ನನಗೆ ನೋವಾಗುವುದು. ಒಂದು ವೇಳೆ ನೀವು ನನಗೆ ವೋಟ್​ ಹಾಕದಿದ್ದರೆ ಕೆಲಸ ಪಡೆದುಕೊಳ್ಳುವುದು ಕಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಪಿಲಿಬಿಟ್​ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಮೇನಕಾ ಈ ಸಲ ಆ ಕ್ಷೇತ್ರವನ್ನ ಮಗನಿಗೆ ಬಿಟ್ಟುಕೊಟ್ಟು ತಾವೂ ಸುಲ್ತಾನ್​ಪುರ್​ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಮೇನಕಾ ಗಾಂಧಿ ಮಾತನಾಡಿರುವ ಮೂರು ನಿಮಿಷಗಳ ವಿಡಿಯೋ ಇದೀಗ ವೈರಲ್​ ಆಗಿದ್ದು, ವಿಪಕ್ಷಗಳು ಇದೇ ಹೇಳಿಕೆ ಇಟ್ಟುಕೊಂಡು ವಾಗ್ದಾಳಿ ನಡೆಸಿವೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಚುನಾಣಾ ಆಯೋಗ ಮೇನಕಾ ಗಾಂಧಿಗೆ ಶೋಕಾಸ್​ ನೋಟಿಸ್​ ಜಾರಿ ಮಾಡಿದೆ. ಸುಲ್ತಾನ್​ಪುರ್​ ಜಿಲ್ಲಾಧಿಕಾರಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ನೋಟಿಸ್​ ಜಾರಿ ಮಾಡಿದ್ದಾರೆಂದು ಅಲ್ಲಿನ ಮುಖ್ಯ ಚುನಾವಣಾಧಿಕಾರಿ ಬಿಆರ್ ತಿವಾರಿ ತಿಳಿಸಿದ್ದಾರೆ.

ಇತ ತಮ್ಮ ಹೇಳಿಕೆ ವಿವಾದ ರೂಪ ಪಡೆದುಕೊಳ್ಳುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಮೇನಕಾ, ನಾನು ಆ ಅರ್ಥದಲ್ಲಿ ಹೇಳಿಕೆ ನೀಡಿಲ್ಲ. ಸುದ್ದಿಮಾಧ್ಯಮವೊಂದು ಒಂದೇ ಒಂದು ಹೇಳಿಕೆ ಕಟ್ ಮಾಡಿ ಬಿತ್ತರಿಸಿದ್ದು, ನನ್ನ ಸಂಪೂರ್ಣ ಭಾಷಣ ಕೇಳಿದವರಿಗೆ ಅದು ಅರ್ಥವಾಗುತ್ತದೆ ಎಂದಿದ್ದಾರೆ.

Intro:Body:

ವೋಟ್​ ಹಾಕಿದ್ರೆ ಮಾತ್ರ ಕೆಲಸ... ಮುಸ್ಲಿಂರಿಗೆ ತಾಕೀತು ಮಾಡಿದ ಮನೇಕಾ ಗಾಂಧಿ!



ಸುಲ್ತಾನಪುರ್​​(ಯುಪಿ): ದೇಶದಲ್ಲಿ ಲೋಕಸಭೆ ಕಾವು ರಂಗೇರಿದ್ದು, ಈಗಾಗಲೇ ಮೊದಲ ಹಂತದ ವೋಟಿಂಗ್​ ಮುಕ್ತಾಯಗೊಂಡಿದೆ. ಇದರ ಮಧ್ಯೆ ಪ್ರಚಾರ ಸಭೆ ನಡೆಸುತ್ತಿದ್ದ ಕೇಂದ್ರ ಸಚಿವೆ ಹಾಗೂ ಬಿಜೆಪಿ ಮುಖಂಡೆ ಮನೇಕಾ ಗಾಂಧಿ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. 



ಉತ್ತರಪ್ರದೇಶದ ಸುಲ್ತಾನ್​ಪುರ್​ ಲೋಕಸಭಾ ಕ್ಷೇತ್ರದ ಹಳ್ಳಿ ತುರ್ಬಾ ಖಾನಿಯಲ್ಲಿ ಮನೇಕಾ ಗಾಂಧಿ ಚುನಾವಣಾ ರ್ಯಾಲಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ನೀವು ನನಗೆ ವೋಟ್​ ಹಾಕದಿದ್ದರೆ ನಿಮಗೆ ಕೆಲಸ ಕೊಡಿಸುವುದಿಲ್ಲ ಎಂಬ ಮಾತು ಹೇಳಿದ್ದಾರೆ. 



ಈಗಾಗಲೇ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಆಗಿರುವ ಅವರು, ಚುನಾವಣೆಯಲ್ಲಿ ಮುಸ್ಲಿಂರ ಬೆಂಬಲವಿಲ್ಲದೇ ನನಗೆ ಗೆಲುವು ಕಷ್ಟ. ನೀವೂ ವೋಟ್​ ಮಾಡದಿದ್ದರೆ ನನಗೆ ನೋವಾಗುವುದು. ಒಂದು ವೇಳೆ ನೀವೂ ನನಗೆ ವೋಟ್​ ಮಾಡದಿದ್ದರೆ ಕೆಲಸ ಪಡೆದುಕೊಳ್ಳುವುದು ಕಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಪಿಲಿಬಿಟ್​ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಮನೇಕಾ ಈ ಸಲ ಆ ಕ್ಷೇತ್ರವನ್ನ ಮಗನಿಗೆ ಬಿಟ್ಟುಕೊಟ್ಟು ತಾವೂ ಸುಲ್ತಾನ್​ಪುರ್​ ಕ್ಷೇತ್ರದಿಂದ ಅದೃಷ್ಠ ಪರೀಕ್ಷೆಗೊಳಗಾಗಿದ್ದಾರೆ. 



ಮನೇಕಾ ಗಾಂಧಿ ಮಾತನಾಡಿರುವ ಮೂರು ನಿಮಿಷಗಳ ವಿಡಿಯೋ ಇದೀಗ ವೈರಲ್​ ಆಗಿದ್ದು, ವಿಪಕ್ಷಗಳು ಇದೇ ಹೇಳಿಕೆ ಇಟ್ಟುಕೊಂಡು ವಾಗ್ದಾಳಿ ನಡೆಸಿವೆ. 


Conclusion:
Last Updated :Apr 12, 2019, 11:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.