ETV Bharat / briefs

ಬೆಸ್ಟ್​ ಆಲ್​ರೌಂಡರ್​ಗೆ ಗಾಯ... ​ಹಾಲಿ ಚಾಂಪಿಯನ್​ ಸಿಎಸ್​ಕೆಗೆ ಆಘಾತ!

author img

By

Published : Apr 6, 2019, 9:05 PM IST

ಐಪಿಎಲ್​ನಲ್ಲಿ ಅತ್ಯುತ್ತಮ ಆಲ್​ರೌಂಡರ್​ಗಳಲ್ಲಿ ಒಬ್ಬರಾದ ಡ್ವೇನ್​ ಬ್ರಾವೋ ಮಂಡಿರಜ್ಜು ನೋವಿಗೆ ತುತ್ತಾಗಿ ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯುವಂತಾಗಿರುವುದು ಚಾಂಪಿಯನ್​ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ.

dwayne-bravo

ಚೆನ್ನೈ: ಚೈನ್ನೈ ಸೂಪರ್​ ಕಿಂಗ್ಸ್​ನ ಭರವಸೆಯ ಆಟಗಾರ ಡ್ವೇನ್​ ಬ್ರಾವೋ ಮಂಡಿರಜ್ಜು ನೋವಿನಿಂದ ಬಳಲುತ್ತಿದ್ದು, 2 ವಾರಗಳ ಕಾಲ ವಿಶ್ರಾಂತಿ ಅಗತ್ಯವಿರುವುದರಿಂದ ಐಪಿಎಲ್​ನಿಂದ ಹೊರಬಿದ್ದಿದ್ದಾರೆ.

ಐಪಿಎಲ್​ನ ಅತ್ಯುತ್ತಮ ಆಲ್​ರೌಂಡರ್​ಗಳಲ್ಲಿ ಒಬ್ಬರಾದ ಡ್ವೇನ್​ ಬ್ರಾವೋ ಗಾಯಗೊಂಡಿರುವ ಕಾರಣ ಇಂದು ಪಂಜಾಬ್​ ವಿರುದ್ಧ ಕಣಕ್ಕಿಳಿದಿರಲಿಲ್ಲ. ಇನ್ನು 2 ವಾರಗಳ ಕಾಲ ಬ್ರಾವೋ ಸೇವೆ ನಮಗೆ ಸಿಗುವುದಿಲ್ಲ ಎಂಬ ಮಾಹಿತಿಯನ್ನು ಸಿಎಸ್​ಕೆ ಬ್ಯಾಟಿಂಗ್​ ಕೋಚ್​ ಮೈಕ್​ ಹಸ್ಸಿ ಖಚಿತಪಡಿಸಿದ್ದಾರೆ.

ಡೆತ್​ ಬೌಲಿಂಗ್​ ಸ್ಪೆಷಲಿಸ್ಟ್​ ಆದ ಬ್ರಾವೋ ಗೈರು ತಂಡಕ್ಕೆ ದೊಡ್ಡ ಹೊಡೆತವಾಗಿದೆ. ಆದರೂ ನಾವು ಮೋಹಿತ್​ ಶರ್ಮಾ, ಸ್ಕಾಟ್​ ಕಗ್ಲಿಜನ್​ ಹಾಗೂ ವಿಶ್ವದರ್ಜೆಯ ಸ್ಪಿನ್​ ಬೌಲರ್​ಗಳನ್ನು ಹೊಂದಿದ್ದೇವೆ. ಅಲ್ಲದೆ ಧೋನಿಯಂತಹ ನಾಯಕ ಹಾಗೂ ಫ್ಲಮಿಂಗ್​ ಕೋಚ್​ ಇರುವಾಗ ತಂಡದ ಅಗತ್ಯಕ್ಕೆ ತಕ್ಕಂತೆ ಉತ್ತಮ ನಿರ್ಧಾರ ಕೈಗೊಳ್ಳುತ್ತಾರೆ ಎಂದಿದ್ದಾರೆ.

ಇದಕ್ಕು ಮೊದಲು ದ.ಆಫ್ರಿಕಾದ ವೇಗೆ ಲುಂಗಿ ಎನ್​ಗಿಡಿ, ಇಂಗ್ಲೆಂಡ್​ನ ಡೇವಿಡ್​ ವಿಲ್ಲೆ ತಂಡದಿಂದ ಹೊರಬಿದ್ದಿದ್ದರು. ಇದೀಗ ಬ್ರಾವೋ ಕೂಡ ಗಾಯಕ್ಕೆ ತುತ್ತಾಗಿದ್ದು ಸಿಎಸ್​ಕೆಗೆ ದೊಡ್ಡ ಹೊಡೆತ ಬಿದ್ದಿದೆ.

Intro:Body:Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.