ETV Bharat / bharat

ತೆಲಂಗಾಣದ ಎಲ್ಲ ಕ್ಷೇತ್ರಗಳಲ್ಲಿ ವೈಎಸ್‌ಆರ್‌ಟಿಪಿ ಸ್ಪರ್ಧೆ: ಪಾಲೇರು ಕ್ಷೇತ್ರದಿಂದ ವೈ.ಎಸ್‌.ಶರ್ಮಿಳಾ ಕಣಕ್ಕೆ

author img

By ETV Bharat Karnataka Team

Published : Oct 12, 2023, 5:52 PM IST

Updated : Oct 12, 2023, 7:38 PM IST

YSRTP competition in all 119 constituencies of Telangana
YSRTP competition in all 119 constituencies of Telangana

ತೆಲಂಗಾಣ ವಿಧಾನಸಭಾ ಚುನಾವಣೆಯ ಸಿದ್ಧತೆಯಲ್ಲಿರುವ ವೈಎಸ್​ಆರ್ ಪಕ್ಷ ರಾಜ್ಯದ 119 ಕ್ಷೇತ್ರಗಳಲ್ಲೂ ಸ್ಪರ್ಧಿಸಲು ನಿರ್ಧರಿಸಿದೆ.

ಹೈದರಾಬಾದ್: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಭರದ ಸಿದ್ಧತೆಯಲ್ಲಿರುವ ವೈ.ಎಸ್.ಶರ್ಮಿಳಾ ರೆಡ್ಡಿ ನೇತೃತ್ವದ ವೈಎಸ್​ಆರ್ ತೆಲಂಗಾಣ ಪಕ್ಷ (ವೈಎಸ್​ಆರ್​​ಟಿಪಿ) ರಾಜ್ಯದ 119 ಕ್ಷೇತ್ರಗಳಲ್ಲೂ ಸ್ಪರ್ಧಿಸಲು ತೀರ್ಮಾನಿಸಿದೆ. ನಗರದಲ್ಲಿಂದು ನಡೆದ ರಾಜ್ಯ ಮಟ್ಟದ ಕಾರ್ಯಕಾರಿಣಿ ಸಭೆಯಲ್ಲಿ ವೈ.ಎಸ್.ಶರ್ಮಿಳಾ "ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ" ಎಂದು ಹೇಳಿದ್ದಾರೆ.

ಅಭ್ಯರ್ಥಿಗಳಿಗೆ ಬಿ-ಫಾರ್ಮ್‌ ನೀಡುವುದರಿಂದ ಹಿಡಿದು ಪಕ್ಷದ ಪ್ರಣಾಳಿಕೆ, ಸಮಿತಿ ರಚನೆ ಸೇರಿದಂತೆ ಚುನಾವಣಾ ಕಾರ್ಯತಂತ್ರದ ಕುರಿತು ಅವರು ಮಾಹಿತಿ ನೀಡಿದರು. "ಬಿ-ಫಾರ್ಮ್‌ಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನನಗೆ ಪಾಲೇರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಬೇಡಿಕೆ ಇದೆ. ಪಾಲೇರು ಜತೆಗೆ ಬೇರೆ ಕ್ಷೇತ್ರದಲ್ಲೂ ಸ್ಪರ್ಧಿಸುವಂತೆ ಒತ್ತಾಯ ಕೇಳಿ ಬರುತ್ತಿದೆ. ಪತಿ ಅನಿಲ್ ಮತ್ತು ತಾಯಿ ವಿಜಯಮ್ಮ ಅವರನ್ನೂ ಸ್ಪರ್ಧಿಸುವಂತೆ ಕಾರ್ಯಕರ್ತರು ಒತ್ತಡ ಹಾಕುತ್ತಿದ್ದಾರೆ. ಯಾರು ಎಲ್ಲಿ ಸ್ಪರ್ಧೆ ಮಾಡಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

  • Telangana Elections | YS Sharmila Reddy, President of YSR Telangana Party says, "YSRTP will contest 119 constituencies. We will give tough competition. I will contest from Paleru. There is also a demand to contest from the second constituency. Anil and Vijayamma have also been… pic.twitter.com/MehHqvPRBI

    — ANI (@ANI) October 12, 2023 " class="align-text-top noRightClick twitterSection" data=" ">

''ಮತ ಒಡೆದರೆ ಸರಿ ಆಗಲ್ಲ. ಇದರಿಂದ ಕೆಸಿಆರ್ ಮತ್ತೆ ಮುಖ್ಯಮಂತ್ರಿಯಾಗಬಹು. ಹಾಗಾಗಿ ನಾವು ಕಾಂಗ್ರೆಸ್ ಜೊತೆ ಮಾತುಕತೆ ನಡೆಸಿದ್ದೇವೆ'' ಎಂದು ಶರ್ಮಿಳಾ ಇದೇ ವೇಳೆ ತಿಳಿಸಿದರು.

''ಕಳೆದ 4 ತಿಂಗಳಿನಿಂದ ಕಾಂಗ್ರೆಸ್ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ. ಸೀಟು ವಿಚಾರದಲ್ಲಿ ಹೊಂದಾಣಿಕೆ ಕೊರತೆ, ಕಾಂಗ್ರೆಸ್​ನಿಂದ ಸಮಾಧಾನಕರ ಹೇಳಿಕೆ ಬಾರದ ಕಾರಣ ಕಾಂಗ್ರೆಸ್ ಜೊತೆಗಿನ ಮಾತುಕತೆ ನಿಲ್ಲಿಸಿ ಏಕಾಂಗಿಯಾಗಿ ಸ್ಪರ್ಧಿಸುವ ಚಿಂತನೆ ಕೂಡ ಇದೆ. ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳ ಘೋಷಣೆ ಮಾಡಲಾಗುವುದು'' ಎಂದು ಪಕ್ಷದ ವಕ್ತಾರ ಪಿಟ್ಟಾ ರಾಮರೆಡ್ಡಿ ಹೇಳಿದರು. ಇತ್ತೀಚೆಗೆ ವೈ.ಎಸ್.ಶರ್ಮಿಳಾ ಅವರು ದೆಹಲಿಯಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ತೆಲಂಗಾಣಕ್ಕೆ ಸಂಬಂಧಿಸಿದ ವಿಚಾರಗಳನ್ನು ಅವರೊಂದಿಗೆ ಚರ್ಚಿಸಿದ್ದರು.

ಮೊದಲ ಪಟ್ಟಿ ಬಿಡುಗಡೆ: ಕಾಂಗ್ರೆಸ್​ ಕೂಡ ಚುಮಾವಣೆಯ ಸಿದ್ಧತೆಯಲ್ಲಿದ್ದು ಸದ್ಯದಲ್ಲೇ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಲಿದೆ. ಪೈಪೋಟಿ ಹೆಚ್ಚಿರುವ ಕ್ಷೇತ್ರಗಳ ಹೊರತು ಉಳಿದ ಕಡೆಗಳಲ್ಲಿ ಸ್ಪರ್ಧೆ ಮಾಡುವ ಅಭ್ಯರ್ಥಿಗಳ ಪಟ್ಟಿಯನ್ನು ಬಹುತೇಕ ಪೂರ್ಣಗೊಳಿಸಿದೆ. ಸ್ಕ್ರೀನಿಂಗ್ ಕಮಿಟಿ ಆಯ್ಕೆ ಮಾಡಿರುವ ಪಟ್ಟಿಗೆ ಶುಕ್ರವಾರ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಅನುಮೋದನೆ ನೀಡುವ ಸಾಧ್ಯತೆ ಇದೆ. 15ರಂದು ಮೊದಲ ಪಟ್ಟಿ ಹೊರಬೀಳಲಿದೆ.

ಹ್ಯಾಟ್ರಿಕ್ ಗೆಲುವು?: ಆಡಳಿತಾರೂಢ ಬಿಆರ್‌ಎಸ್ ಪಕ್ಷ ಕೂಡ ಚುನಾವಣಾ ಕಾರ್ಯತಂತ್ರದಲ್ಲಿ ತೊಡಗಿದೆ. 2023ರ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಗೆದ್ದರೆ ದಕ್ಷಿಣ ಭಾರತದ ಭಾಗದಲ್ಲಿ ಸತತವಾಗಿ ಮೂರನೇ ಸಲ ಅಧಿಕಾರಕ್ಕೆ ಬಂದ ಪಕ್ಷವಾಗಿ ಬಿಆರ್‌ಎಸ್ ಹೊರಹೊಮ್ಮಲಿದೆ. ಅಂದುಕೊಂಡಂತೆ ಆದಲ್ಲಿ ಕೆ.ಚಂದ್ರಶೇಖರ್ ರಾವ್ ಮುಖ್ಯಮಂತ್ರಿಯಾಗಿ ಹ್ಯಾಟ್ರಿಕ್ ದಾಖಲೆ ಬರೆಯುವ ಮೂಲಕ ಇತಿಹಾಸ ಕೂಡ ಸೃಷ್ಟಿಸಲಿದ್ದಾರೆ.

ನವೆಂಬರ್ 7 ರಿಂದ 30ರ ವರೆಗೆ ತೆಲಂಗಾಣ ಸೇರಿದಂತೆ ಮಿಜೋರಾಂ, ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ ರಾಜ್ಯಗಳ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ನವೆಂಬರ್ 30ರಂದು ತೆಲಂಗಾಣದಲ್ಲಿ ಮತದಾನ ನಡೆಯಲಿದ್ದು ಡಿ. 3 ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ: ವಿಧಾನಸಭೆ ಚುನಾವಣೆ, ವಿಶ್ವಕಪ್ ಕ್ರಿಕೆಟ್​: ಹೈದರಾಬಾದ್​ನಲ್ಲಿ ಬೆಟ್ಟಿಂಗ್​ ದಂಧೆ, ಪೊಲೀಸರ ಹದ್ದಿನ ಕಣ್ಣು

Last Updated :Oct 12, 2023, 7:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.