ETV Bharat / bharat

ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ: ಯೋಗಿ ಸರ್ಕಾರದ ಮಹತ್ವದ ನಿರ್ಧಾರ

author img

By

Published : May 12, 2022, 6:44 PM IST

ಯೋಗಿ ಆದಿತ್ಯನಾಥ್​​ ನೇತೃತ್ವದ ಉತ್ತರ ಪ್ರದೇಶ ಬಿಜೆಪಿ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಜ್ಯದಲ್ಲಿರುವ ಎಲ್ಲ ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸಿ, ಆದೇಶ ಹೊರಹಾಕಿದೆ.

National Anthem in Madrasa
National Anthem in Madrasa

ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶದ ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸಿ, ಉತ್ತರ ಪ್ರದೇಶ ಸರ್ಕಾರ ಮಹತ್ವದ ನಿರ್ಧಾರ ಹೊರಹಾಕಿದ್ದು, ಈ ಆದೇಶ ಇಂದಿನಿಂದಲೇ ಜಾರಿಗೊಳ್ಳಲಿದೆ ಎಂದು ಅಲ್ಪಸಂಖ್ಯಾತ ಸಮುದಾಯದ ಸಚಿವ ದಾನಿಶ್​ ಆಜಾದ್​ ಅನ್ಸಾರಿ ಮಾಹಿತಿ ನೀಡಿದ್ದಾರೆ.

ಮದರಸಾಗಳಲ್ಲಿ ಪ್ರತಿದಿನದ ಪಾಠ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ರಾಷ್ಟ್ರಗೀತೆ ಕಡ್ಡಾಯಗೊಳಿಸಲಾಗಿದೆ ಎಂದಿರುವ, ಅವರು, ಇದರಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗಿಯಾಗಿ ಹಾಡುವಂತೆ ತಿಳಿಸಲಾಗಿದೆ.

ಇದನ್ನೂ ಓದಿ: ತಹಶೀಲ್ದಾರ್​ ಕಚೇರಿ ಮೇಲೆ ಉಗ್ರರ ದಾಳಿ: ಕಾಶ್ಮೀರಿ ಪಂಡಿತ ನೌಕರ ಸಾವು

ಕಳೆದ ಮಾರ್ಚ್​ 24ರಂದು ಅಲ್ಪಸಂಖ್ಯಾತ ಸಚಿವರೊಂದಿಗೆ ನಡೆದ ಮದರಸಾ ಜೊತೆಗಿನ ಸಭೆಯಲ್ಲಿ ರಾಷ್ಟ್ರಗೀತೆ ಕಡ್ಡಾಯವಾಗಿ ಪಠಿಸುವಂತೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ಇದನ್ನ ಅಲ್ಲಿನ ಸರ್ಕಾರ ಕಡ್ಡಾಯಗೊಳಿಸಿರಲಿಲ್ಲ. ಆದರೆ, ಇದೀಗ ಕಡ್ಡಾಯಗೊಳಿಸಿ ಆದೇಶ ಹೊರಹಾಕಿದೆ. ರಂಜಾನ್​​ ನಿಮಿತ್ತ ಮಾರ್ಚ್​ 30ರಿಂದ ಮೇ 11ರವರೆಗೆ ರಾಜ್ಯದ ಎಲ್ಲ ಮದರಸಾಗಳು ಬಂದ್​ ಆಗಿದ್ದವು. ಇಂದಿನಿಂದ ಮದರಸಾ ಶಾಲೆಗಳು ಪುನಾರಂಭಗೊಂಡಿರುವ ಕಾರಣ ರಾಷ್ಟ್ರಗೀತೆ ಹಾಡುವುದು ಕಡ್ಡಾಯಗೊಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.