ETV Bharat / bharat

ಕಾಂಡೋಮ್​ ರ‍್ಯಾಪರ್ ಇಟ್ಟು ಗಾಯಕ್ಕೆ ಬ್ಯಾಂಡೇಜ್​.. ಸಮುದಾಯ ಆಸ್ಪತ್ರೆ ಆರೋಗ್ಯ ಸಿಬ್ಬಂದಿ ನಿರ್ಲಕ್ಷ್ಯ

author img

By

Published : Aug 20, 2022, 4:44 PM IST

wound bandaged using condom wrapper
ಕಾಂಡೋಮ್​ ರ‍್ಯಾಪರ್ ಇಟ್ಟು ಗಾಯಕ್ಕೆ ಬ್ಯಾಂಡೇಜ್

ಗಾಯ ಸ್ವಚ್ಛಗೊಳಿಸಿ ಹೊಲಿಗೆ ಹಾಕಲು ಜಿಲ್ಲಾಸ್ಪತ್ರೆಯ ವೈದ್ಯರು ಬ್ಯಾಂಡೇಜ್​ ತೆಗೆದು ನೋಡಿದಾಗ ಹತ್ತಿ ಇಡಬೇಕಾದಲ್ಲಿ ಕಾಂಡೋಮ್​ ರ‍್ಯಾಪರ್​ ಇಟ್ಟು ಬ್ಯಾಂಡೇಜ್​ ಮಾಡಿರುವುದು ಬೆಳಕಿಗೆ ಬಂದಿದೆ.

ಮೊರೆನಾ(ಮಧ್ಯ ಪ್ರದೇಶ): ತಲೆಗೆ ಗಾಯಗೊಂಡು ಸಮುದಾಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗೆ ಮೊರೆನಾ ಜಿಲ್ಲಾಸ್ಪತ್ರೆಗೆ ಬಂದಿದ್ದ ಮಹಿಳೆಯ ಬ್ಯಾಂಡೇಜ್​ ತೆರೆದಾಗ ಅಲ್ಲಿದ್ದ ಕಾಂಡೋಮ್​ ರ‍್ಯಾಪರ್​ ನೋಡಿದ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರು ಆಶ್ಚರ್ಯಗೊಂಡಿದ್ದಾರೆ. ಈ ವಿಡಿಯೋ ಜಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಆರೋಗ್ಯ ಇಲಾಖೆ ತನಿಖೆಗೆ ಆದೇಶಿಸಿದೆ.

ಆಸ್ಪತ್ರೆಗಳಲ್ಲಿ ಅವ್ಯವಸ್ಥೆ: ಮೊರೆನಾ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಪ್ರಾಥಮಿಕ, ಉಪ ಆರೋಗ್ಯ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳನ್ನು ಹೊಂದಿರುವ ಸಿವಿಲ್ ಆಸ್ಪತ್ರೆ ಇದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆಗಳ ಸ್ಥಿತಿ ಹದಗೆಟ್ಟಿದ್ದು, ಸಾಮಾನ್ಯ ಪ್ರಕರಣಗಳಲ್ಲಿಯೂ ಚಿಕಿತ್ಸೆ ನೀಡದೆ ನೇರವಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗುತ್ತದೆ. ಈ ಮಹಿಳೆಗೂ ಅದೇ ರೀತಿ ಆಗಿದೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಿಳೆಯ ತಲೆಗೆ ಹೊಲಿಗೆಗಳನ್ನು ಹಾಕದೆ ಬ್ಯಾಂಡೇಜ್​ ಅಷ್ಟೇ ಹಾಕಿ ಜಿಲ್ಲಾಸ್ಪತ್ರೆಗೆ ಹೋಗುವಂತೆ ಹೇಳಿದ್ದಾರೆ.

ಕಾಂಡೋಮ್​ ರ‍್ಯಾಪರ್ ಇಟ್ಟು ಗಾಯಕ್ಕೆ ಬ್ಯಾಂಡೇಜ್​

ಮಹಿಳೆ ಆಸ್ಪತ್ರೆಗೆ ಬಂದಾಗ ಬ್ಯಾಂಡೇಜ್​ ಸರಿಯಾಗದೆ ರಕ್ತ ಸೋರಿಕೆಯಾಗುತ್ತಿತ್ತು. ಗಾಯ ಸ್ವಚ್ಛಗೊಳಿಸಿ ಹೊಲಿಗೆ ಹಾಕಲು ಜಿಲ್ಲಾಸ್ಪತ್ರೆಯ ವೈದ್ಯರು ಬ್ಯಾಂಡೇಜ್​ ತೆಗೆದು ನೋಡಿದಾಗ ಹತ್ತಿ ಇಡಬೇಕಾದಲ್ಲಿ ಕಾಂಡೋಮ್​ ರ‍್ಯಾಪರ್​ ಇಟ್ಟು ಬ್ಯಾಂಡೇಜ್​ ಮಾಡಿರುವುದು ಬೆಳಕಿಗೆ ಬಂದಿದೆ. ಆದರೆ ಶುಕ್ರವಾರ ರಾತ್ರಿ ನಡೆದ ಈ ಘಟನೆಯನ್ನು ಲಘುವಾಗಿ ಪರಿಗಣಿಸಲಾಗಿತ್ತು. ವಿಡಿಯೋ ವೈರಲ್​ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ಈ ಕುರಿತು ತನಿಖೆ ನಡೆಸುವಂತೆ ಆದೇಶಿಸಿದೆ.

ಕ್ರಮಕ್ಕೆ ಸೂಚನೆ ನೀಡಿದ ಸಿಎಂಎಚ್​ಒ: ಮುಖ್ಯ ವೈದ್ಯಕೀಯ ಮತ್ತು ಆರೋಗ್ಯಾಧಿಕಾರಿ ಡಾ ರಾಕೇಶ್ ಶರ್ಮಾ ಅವರು ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಬ್ಲಾಕ್ ವೈದ್ಯಾಧಿಕಾರಿ ಪೊರ್ಸಾ, ಡಾ.ಪುಷ್ಪೇಂದ್ರ ದಂಡೋತಿಯಾ ಅವರಿಗೆ ಸೂಚಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಿಎಂಎಚ್​ಒ ಡಾ.ರಾಕೇಶ್ ಶರ್ಮಾ, ಮಹಿಳೆಯ ತಲೆಗೆ ಹತ್ತಿಯ ಬದಲು ಕಾಂಡೋಮ್ ರ‍್ಯಾಪರ್ ಕಟ್ಟಿರುವುದು ಗಂಭೀರ ವಿಚಾರವಾಗಿದ್ದು, ಈ ಕುರಿತು ವಿಚಾರಣೆಗೆ ಆದೇಶ ಹೊರಡಿಸಲಾಗಿದೆ. ಆರೋಗ್ಯ ಸಿಬ್ಬಂದಿ ಮತ್ತು ಮಹಿಳೆಯ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ : ಪಾವಗಡ ಸರ್ಕಾರಿ ಆಸ್ಪತ್ರೆ ಮೇಲೆ ನಿರ್ಲಕ್ಷ್ಯ ಆರೋಪ-ಕಾರಿನಲ್ಲೇ ಹೆರಿಗೆ : ಸಾರ್ವಜನಿಕರ ಆಕ್ರೋಶ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.