ETV Bharat / bharat

ಕಾರ್ಖಾನೆಯಲ್ಲಿ ಗೋಡೆ ಕುಸಿದು 12 ಮಂದಿ ದುರ್ಮರಣ; ಮೋದಿ ಸಂತಾಪ

author img

By

Published : May 18, 2022, 2:00 PM IST

Updated : May 18, 2022, 11:03 PM IST

workers were killed when a wall collapsed in Halvad morbi, wall collapsed in Gujarat, Gujarat tragedy news, Gujarat crime news, ಹಲ್ವಾದ್ ಮೋರ್ಬಿಯಲ್ಲಿ ಗೋಡೆ ಕುಸಿದು ಕಾರ್ಮಿಕರು ಸಾವು, ಗುಜರಾತ್‌ನಲ್ಲಿ ಗೋಡೆ ಕುಸಿದು ಕಾರ್ಮಿಕರು ಸಾವು, ಗುಜರಾತ್ ದುರಂತ ಸುದ್ದಿ, ಗುಜರಾತ್ ಅಪರಾಧ ಸುದ್ದಿ,
ಗುಜರಾತ್​ನಲ್ಲಿ ಘೋರ ದುರಂತ

ಗುಜರಾತ್​ನಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಕೆಲಸ ಮಾಡುತ್ತಿದ್ದ ಕಾರ್ಮಿಕ ವೃಂದದ ಮೇಲೆ ಕಂಪನಿಯ ಬೃಹತ್​ ಗೋಡೆಯೊಂದು ಕುಸಿದು ಬಿದ್ದಿದ್ದು, 12 ಮಂದಿ ದುರ್ಮರಣಕ್ಕೀಡಾಗಿದ್ದಾರೆ.

ಮೊರಬಿ(ಗುಜರಾತ್): ಗುಜರಾತ್​ನ ಮೊರಬಿ ಜಿಲ್ಲೆಯ ಹಳವಾಡದಲ್ಲಿ ದುರಂತ ಸಂಭವಿಸಿದೆ. ಸಾಗರ್ ಸಾಲ್ಟ್ ಎಂಬ ಕಾರ್ಖಾನೆಯಲ್ಲಿ ಗೋಡೆ ಕುಸಿದು, 12 ಕಾರ್ಮಿಕರು ಸಾವನ್ನಪ್ಪಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನ ಹಳವಾಡ ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ.

ಸುದ್ದಿ ತಿಳಿದಾಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಹಳವಾಡ ಜಿಐಡಿಸಿಗೆ ತಲುಪಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದವು. ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ಅವಶೇಷಗಳಡಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ.

ಮಧ್ಯಾಹ್ನ 12 ಗಂಟೆ ಸುಮಾರಿಗೆ ಗೋಡೆ ಕುಸಿದಿದ್ದು, ಉಳಿದ ಕಾರ್ಮಿಕರು ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗೆ ದೌಡಾಯಿಸಿದರು. ಉಪ್ಪಿನ ಕಾರ್ಖಾನೆಯ ಗೋಡೆ ಏಕಾಏಕಿ ಕುಸಿದಿರುವುದಕ್ಕೆ ಕಾರಣ ತಿಳಿದುಬಂದಿಲ್ಲ. ಮಾಹಿತಿ ತಿಳಿದ ಬಳಿಕ ಗುಜರಾತ್ ಕಾಂಗ್ರೆಸ್ ಶಾಸಕ ಪುರುಷೋತ್ತಮ ಸವಾರಿಯಾ ಸ್ಥಳಕ್ಕೆ ಧಾವಿಸಿದ್ದು, ಘಟನೆ ಬಗ್ಗೆ ಪರಿಶೀಲನೆ ನಡೆಸಿದರು.

ಪ್ರಧಾನಿ ಮೋದಿ ಸಂತಾಪ : ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಗೋಡೆ ಕುಸಿದು ಸಂಭವಿಸಿದ ದುರಂತ‌ ಹೃದಯ ವಿದ್ರಾವಕವಾಗಿದೆ. ದುಃಖತಪ್ತ ಕುಟುಂಬದವರ ನೋವಿನಲ್ಲಿ ತಾವು ಭಾಗಿಯಾಗುತ್ತೇನೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಓದಿ: ಬೆಳಗಾವಿಯಲ್ಲಿ ಗೋಡೆ ಕುಸಿತ: ಕಟ್ಟಡ ಕಾರ್ಮಿಕ ಸಾವು, ಮತ್ತೋರ್ವ ಗಂಭೀರ

Last Updated :May 18, 2022, 11:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.