ETV Bharat / bharat

ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ರಾವತ್‌ ಸೇರಿ ಮೃತರ ಗೌರವಾರ್ಥ ವಿಪಕ್ಷಗಳ ಪ್ರತಿಭಟನೆ ಇಲ್ಲ-ಖರ್ಗೆ

author img

By

Published : Dec 9, 2021, 12:26 PM IST

We've decided not to protest today in honour of who died in the chopper crash : Kharge, LoP in RS
ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಸಿಡಿಎಸ್‌ ರಾವತ್‌ ಸೇರಿ ಮೃತರ ಗೌರವಾರ್ಥ ವಿಪಕ್ಷಗಳ ಪ್ರತಿಭಟನೆ ಇಲ್ಲ - ಮಲ್ಲಿಕಾರ್ಜನ ಖರ್ಗೆ

ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಸಿಡಿಎಸ್‌ ಬಿಪಿನ್‌ ರಾವತ್‌ ಸೇರಿ 13 ಮಂದಿ ಮೃತಪಟ್ಟಿದ್ದು ಅವರ ಗೌರವಾರ್ಥ ಹಾಗೂ ಶ್ರದ್ಧಾಂಜಲಿ ಸಲ್ಲಿಕೆ ಹಿನ್ನೆಲೆಯಲ್ಲಿ ವಿಪಕ್ಷಗಳ 12 ರಾಜ್ಯಸಭಾ ಸದಸ್ಯರ ಅಮಾನತು ಖಂಡಿಸಿ ಇಂದು ನಾವು ಪ್ರತಿಭಟನೆ ಮಾಡುತ್ತಿಲ್ಲ ಎಂದು ರಾಜ್ಯಸಭೆಗೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ನವದೆಹಲಿ: 12 ಮಂದಿ ರಾಜ್ಯಸಭಾ ಸದಸ್ಯರ ಅಮಾನತು ವಾಪಸ್‌ಗೆ ಆಗ್ರಹಿಸಿ ಕಳೆದ ಹಲವು ದಿನಗಳಿಂದ ಸಂಸತ್‌ ಭವನದ ಹೊರಗಡೆ ಪ್ರತಿಭಟನೆ ಮಾಡುತ್ತಿದ್ದ ವಿಪಕ್ಷಗಳು ಇಂದು ಯಾವುದೇ ರೀತಿಯ ಪ್ರತಿಭಟನೆ ಮಾಡುವುದಿಲ್ಲ ಎಂದು ಹೇಳಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೂನೂರು ಬಳಿ ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಸಿಡಿಎಸ್‌ ಬಿಪಿನ್‌ ರಾವತ್‌ ಸೇರಿ 13 ಮಂದಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಗೌರವಾರ್ಥ ಹಾಗೂ ಶ್ರದ್ಧಾಂಜಲಿ ಸಲ್ಲಿಸುವ ಹಿನ್ನೆಲೆಯಲ್ಲಿ 12 ಸದಸ್ಯರ ಅಮಾನತು ನಿರ್ಧಾರದ ವಿರುದ್ಧ ಇಂದು ನಾವು ಪ್ರತಿಭಟನೆ ಮಾಡುತ್ತಿಲ್ಲ ಎಂದು ತಿಳಿಸಿದರು.

ನವೆಂಬರ್‌ 29ರಿಂದ ಅಧಿವೇಶನದ ದಿನಗಳಂದು ವಿಪಕ್ಷಗಳು ಎರಡೂ ಸದನಗಳೊಳಗೆ ಹಾಗೂ ಹೊರಗಡೆ ಪ್ರತಿಭಟನೆ ಮಾಡುತ್ತಲೇ ಬಂದಿವೆ.

ಇದನ್ನೂ ಓದಿ: ಹೆಲಿಕಾಪ್ಟರ್‌ ದುರಂತದಲ್ಲಿ ಮಡಿದವರಿಗೆ ಸಂಸತ್ತಿನ ಉಭಯ ಸದನದಲ್ಲಿ ಸಂತಾಪ; ಉನ್ನತ ಮಟ್ಟದ ತನಿಖೆಗೆ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.