ETV Bharat / bharat

"ಪೊಲೀಸ್ ಶಿಬಿರಗಳಾಗಿ ಬಳಸಿದ್ದರಿಂದ ನಾವು ಶಾಲೆಗಳನ್ನು ಸ್ಫೋಟಿಸಿದೆವು": ನಕ್ಸಲ್​ ನಾಯಕ ಪ್ರಮೋದ್​ ಮಿಶ್ರಾ

author img

By

Published : Aug 12, 2023, 4:10 PM IST

Maoist leader Pramod Mishra
ಮಾವೋವಾದಿ ನಾಯಕ ಪ್ರಮೋದ್​ ಮಿಶ್ರಾ

ಎರಡು ದಿನಗಳ ಹಿಂದೆ ಜಾರ್ಖಂಡ್​ ಬಿಹಾರ ಗಡಿಯಲ್ಲಿ ನಕ್ಸಲ್​ ನಾಯಕ ಪ್ರಮೋದ್​ ಮಿಶ್ರಾ ಅವರನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದರು.

ಗಯಾ (ಬಿಹಾರ) : ಕಳೆದೆರಡು ದಿನಗಳ ಹಿಂದೆ ಪೊಲೀಸರ ಕೈಗೆ ಸೆರೆಸಿಕ್ಕಿದ್ದ ನಕ್ಸಲ್​ ಪೊಲಿಟ್​ಬ್ಯುರೊ ಸದಸ್ಯ ಪ್ರಮೋದ್​ ಮಿಶ್ರಾ, ಬಿಹಾರದಲ್ಲಿ ಶಾಲೆಗಳನ್ನು ಗುರಿಯಾಗಿಸಿ ನಡೆದ ಸ್ಫೋಟಕ್ಕೆ ಉಗ್ರಗಾಮಿ ಗುಂಪು ಕಾರಣ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಬಿಹಾರದ ನ್ಯಾಯಾಲಯಕ್ಕೆ ಹಾಜರು ಪಡಿಸುವ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಲೆಗಳನ್ನು ಕೇಂದ್ರ ಪಡೆಗಳು ಹಾಗೂ ಪೊಲೀಸ್​ ಸಿಬ್ಬಂದಿಗೆ ಆಶ್ರಯ ಮನೆಗಳಾಗಿ ಬಳಸುತ್ತಿದ್ದ ಕಾರಣ ಅವುಗಳನ್ನು ಸ್ಫೋಟಿಸಿದೆವು ಎಂದು ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕತ್ವದ ಮೇಲೆ ತೀವ್ರ ವಾಗ್ದಾಳಿ ನಡೆಸಿದ ನಕ್ಸಲ್​ ನಾಯಕ, "ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರತಿಪಕ್ಷಗಳು ಮೌನವಾಗಿವೆ. ಮಣಿಪುರದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಯೋಚಿಸಿ. ಇದರ ವಿರುದ್ಧ ಪ್ರತಿಪಕ್ಷಗಳ ಪಾತ್ರ ಏನೂ ಸಮಾಧಾನಕರವಿಲ್ಲ. ಪ್ರತಿಪಕ್ಷಗಳು ಸುಮ್ಮನಿರುವುದನ್ನು ನೋಡಿದರೆ ಅವರು ಬಿಜೆಪಿ ಸರ್ಕಾರವನ್ನು ಬೆಂಬಲಿಸುವಂತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಹಾರ, ಜಾರ್ಖಂಡ್​, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳು ಸೇರಿದಂತೆ ಹಲವಾರು ರಾಜ್ಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದ ಪೂರ್ವ ವಲಯದ ಕಮಾಂಡ್​ ನಕ್ಸಲ್​ ನಾಯಕ ಪ್ರಮೋದ್​ ಮಿಶ್ರಾ ಮುಂದುವರಿದು, "ಆದರೆ ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಬಿಹಾರದಲ್ಲಿ ಬಡೇ ಸರ್ಕಾರ್​ ಎಂದೇ ಕರೆಯುವ ಸಂದೀಪ್​ ಯಾದವ್​ ನಿಧನ ನಂತರ ಸಂಘಟನೆಗೆ ಹಿನ್ನಡೆಯಾಗಿದೆ. ಬಡೇ ಸರ್ಕಾರ ನಿಧನದಿಂದ ಸಂಘಟನೆಯಲ್ಲಿ ಅನಿಶ್ಚಿತ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಸಂಘಟನೆಗೆ ಅವರಂತಹ ಇನ್ನೊಬ್ಬ ವ್ಯಕ್ತಿಯನ್ನು ಕಂಡುಕೊಳ್ಳಬೇಕಿದೆ" ಎಂದು ಹೇಳಿದ್ದಾರೆ.

ಬಿಜೆಪಿ ಹಾಗೂ ಕೇಂದ್ರ ಸರ್ಕಾರವನ್ನು 'ಫ್ಯಾಸಿಸ್ಟ್​' ಎಂದು ಕರೆದ ಮಿಶ್ರಾ, "ಕೇಂದ್ರ ಸಸರ್ಕಾರ ಉನ್ನತ ಕಾರ್ಪೊರೇಟ್​ ಸಂಸ್ಥೆಗಳೊಂದಿಗೆ ಕೈಜೋಡಿಸುತ್ತಿದ್ದು, ಜನರನ್ನು ಶೋಷಿಸಲು ಪ್ರಯತ್ನಿಸುತ್ತಿದ್ದಾರೆ. ನಿಜವಾದ ವಿಮೋಚನೆಯ ಮಾರ್ಗ ಮಾರ್ಕ್ಸ್​ ವಾದ, ಹೊಸ ಪ್ರಜಾಪ್ರಭುತ್ವ, ಸಮಾಜವಾದ ಮತ್ತು ಕಮ್ಯುನಿಸಂ ತತ್ವಗಳಲ್ಲಿದೆ" ಎಂದರು.

ಬುಧವಾರ ರಾತ್ರಿ ಜಾರ್ಖಂಡ್​ ಹಾಗೂ ಬಿಹಾರದ ಗಡಿ ಹತ್ತಿರದ ಬಿಹಾರದ ಗಯಾದಲ್ಲಿ ಪ್ರಮೋದ್​ ಮಿಶ್ರಾ ಹಾಗೂ ಅವರ ಸಹಚರರನ್ನು ಭದ್ರತಾ ಸಂಸ್ಥೆ ಕಾರ್ಯಾಚರಣೆ ನಡೆಸಿ ಬಂಧಿಸಿತ್ತು. ಪೊಲೀಸ್​ ವಶದಲ್ಲಿದ್ದ ನಕ್ಸಲ್​ ನಾಯಕನನ್ನು ಇಂದು ಬಿಹಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಇತ್ತೀಚಿನವರೆಗೂ ಪ್ರಮೋದ್​ ಮಿಶ್ರಾ ಜಾರ್ಖಂಡ್​, ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಈಶಾನ್ಯ ರಾಜ್ಯಗಳ ಮೇಲ್ವಿಚಾರಣೆಯ ನಕ್ಸಲ್​ ಪೂರ್ವ ಪ್ರಾದೇಶಿಕ ಬ್ಯೂರೋದ ಪ್ರಧಾನ ಕಚೇರಿಯಾಗಿ ಕಾರ್ಯ ನಿರ್ವಹಿಸುವ ಸರಂದಾ ಪ್ರದೇಶದಲ್ಲಿದ್ದಾರೆ ಎಂದು ನಂಬಲಾಗಿತ್ತು.

ಇದನ್ನೂ ಓದಿ: ಮಾವೋವಾದಿ ನಾಯಕನ ಬಂಧನದ ವಿರುದ್ಧ ಪ್ರತಿಭಟನೆ : ಬ್ರಿಡ್ಜ್​ ಸ್ಫೋಟಗೊಳಿದ ನಕ್ಸಲರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.