ETV Bharat / bharat

ರಾಜ್ಯಾದ್ಯಂತ ಮಳೆಯೋ ಮಳೆ.. ವಿವಿಧ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟಾಗಿದೆ?

author img

By

Published : Jul 22, 2021, 5:09 PM IST

reservoir levels of dams
ಕರ್ನಾಟಕದ ಜಲಾಶಯಗಳು

ಬಹುತೇಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ವರುಣನ ಆರ್ಭಟ ಮುಂದುವರಿದಿದೆ. ಎಡೆಬಿಡದೇ ಸುರಿಯುತ್ತಿರುವ ಮಳೆಗೆ ಈಗಾಗಲೇ ಜಲಾಶಯಗಳಲ್ಲಿನ ನೀರಿನ ಮಟ್ಟ ಏರಿಕೆ ಕಾಣುತ್ತಿದೆ.

ಬೆಂಗಳೂರು: ರಾಜ್ಯದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಮುಂಗಾರುಮಳೆ ಹೆಚ್ಚಾದ ಕಾರಣ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಅಲ್ಲಲ್ಲಿ ಸೇತುವೆಗಳು ಜಲಾವೃತಗೊಂಡಿವೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಭಾರಿ ಮಳೆ ಹಿನ್ನೆಲೆ ಕುಸಿತ ಕಂಡಿದ್ದು, ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿಷೇಧ ಹೇರಲಾಗಿದೆ.

ಮಲೆನಾಡು, ಕರಾವಳಿ ಭಾಗದಲ್ಲಿರುವ ನದಿಗಳು ಉಕ್ಕಿ ಹರಿಯುತ್ತಿವೆ. ಹೀಗಾಗಿ ರಾಜ್ಯದ ಪ್ರಮುಖ ಅಣೆಕಟ್ಟೆಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಿದ್ದು, ಯಾವ ಯಾವ ಅಣೆಕಟ್ಟುಗಳಲ್ಲಿ ಎಷ್ಟು ಪ್ರಮಾಣದ ನೀರಿದೆ ಎಂಬುದರ ಕುರಿತ ವಿಸ್ತೃತ ಮಾಹಿತಿ ಇಂತಿದೆ.

ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಇಂತಿದೆ:

ಜಲಾಶಯಗಳುಗರಿಷ್ಠ ಮಟ್ಟ ಮೀ.ಇಂದಿನ ಮಟ್ಟ ಮೀ.ಒಳ ಹರಿವು ಕ್ಯೂಸೆಕ್​ಹೊರ ಹರಿವು ಕ್ಯೂಸೆಕ್ ಹಿಂದಿನ ವರ್ಷ ಮೀ.
ಲಿಂಗನಮಕ್ಕಿ554.44 547.5845458 2176 539.77
ಸೂಪಾ564.00543.4026001489534.45
ಹಾರಂಗಿ871.38870.331037810621870.23
ಹೇಮಾವತಿ890.58886.4110786300882.36
ಕೆಆರ್​ಎಸ್​38.0430.9911018229232.83
ಕಬಿನಿ696.13695.1493163800693.83
ಭದ್ರ657.73652.2115668796647.72
ತುಂಗಭದ್ರ497.71494.19408623726490.56
ಘಟಪ್ರಭ662.91655.7017467134651.08
ಮಲಪ್ರಭಾ633.80629.721317194627.86
ಆಲಮಟ್ಟಿ519.60517.786693665328517.27
ನಾರಾಯಣಪುರ492.25491.386978264917491.71
ETV Bharat Logo

Copyright © 2024 Ushodaya Enterprises Pvt. Ltd., All Rights Reserved.